ಈ ಸ್ಟಾರ್ ನಟನ ಮಗನನ್ನು ಹರಸಿ ಬೆಳಸಿ ಎಂದ ಚಾಲೆಂಜಿಂಗ್ ಸ್ಟಾರ್…!!!
ಸಾರ್ವಜನಿಕವಾಗಿ ನನಗೆ ಹೊಡೆಯೋ, ಬೈಯ್ಯುವ ಅಧಿಕಾರ ಇರೋದು ಅದು ಕೇವಲ ಒಬ್ಬರೇ ಒಬ್ಬರಿಗೆ ಮಾತ್ರ, ಅದು ಅಂಬರೀಶ್ ಅಣ್ಣನಿಗೆ ಎಂಬ ದರ್ಶನ್ ಮಾತಿಗೆ ಕೋಟ್ಯಾಂತರ ಅಭಿಮಾನಿಗಳಿಂದ ಮೆಚ್ಚುಗೆ ಹರಿದು ಬಂತು. ಅಂದಹಾಗೇ ಅಂಬಿ ಮತ್ತು ದರ್ಶನ್ ಸಂಬಂಧ ಅಪ್ಪ-ಮಗನಿಗಿಂತಲೂ ಹೆಚ್ಚಾಗಿಯೇ ಇತ್ತು. ದರ್ಶನ್ ಮತ್ತು ಆತನ ಪತ್ನಿ ನಡುವಿನ ವೈ ಮನಸನ್ನು ಸರಿ ಮಾಡಿದ್ದು ಅಂಬಿಯೇ. ಕೋರ್ಟು ಮೆಟ್ಟಿಲೇರುವ ಮುನ್ನ, ಮಾಧ್ಯಮಗಳಿಗೆ ಸುದ್ದಿಯಾಗುವ ಮುನ್ನವೇ ಚಿತ್ರರಂಗದ ಅನೇಕ ಗಣ್ಯರ ಬಿರುಕು ಬಿಟ್ಟ ದಾಂಪತ್ಯಜೀವನ ಸರಿಮಾಡಿದ ಕೀರ್ತಿ ಅಂಬರೀಶ್ ಗೆ ಸಲ್ಲುತ್ತದೆ.
ಸದ್ಯ ಅಂಥಹ ಸಿನಿಮಾ ಲೋಕದ ಲೆಸೆಂಡಾ ಅಂಬಿ ತಮ್ಮ ಮಗನ ಸಿನಿಮಾ ನೋಡಲು ಬಹಳ ಆಸೆಪಟ್ಟಿದ್ದರು. ಆದರೆ ಅವರ ಆಸೆ ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದರು. ಸದ್ಯ ಅಂಬಿ ಮಗ ಅಭಿಷೇಕ್ ಅಮರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆದಾಗ ಸಿಕ್ಕಾಪಟ್ಟೆ ಕಾಂಪ್ಲಿಮೆಂಟ್ಸ್ ಬಂತು. ಆರಡಿ ಸ್ಟಾರ್ ಗಳ ಪೈಕಿ ಅಭಿಷೇಕ್ ಕೂಡ ಒಬ್ಬರು ಎಂದು. ನಾಳೆ ಅಮರ್ ಸಿನಿಮಾ ಟೀಸರ್ ರಿಲೀಸ್ ಆಗ್ತಾ ಇದೆ. ಬಹುದಿನಗಳಿಂದ ಕಾಯ್ತಾ ಇದ್ದ ಅಮರ್ ಸಿನಿಮಾ ಟೀಸರ್ ಲಾಂಚ್ ಗೆ ನಾಳೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಟ್ವೀಟ್ ಮಾಡುವುದರ ಮೂಲಕ ಶುಭ ಹಾರೈಸಿದ್ದಾರೆ. ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಶ್'ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್, ನಾಳೆ ಅಮರ್ ಟೀಸರ್ ಲಾಂಚ್ ಆಗ್ತಾ ಇದೆ. ಎಲ್ಲರು ಅವನನ್ನು ಹರಸಿ ಆಶೀರ್ವದಿಸಿ ಎಂದರು. ಅಂದಹಾಗೇ ಅಮರ್ ಸಿನಿಮಾದಲ್ಲಿ ದರ್ಶನ್ ಗೆಸ್ಟ್ ರೋಲ್ ‘ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಅಭಿಷೇಕ್ ಗೆ ಪ್ರತೀ ಹಂತದಲ್ಲೂ ನೆರವಾಗುತ್ತಾ ಬಂದಿರುವ ದರ್ಶನ್ ಶೂಟಿಂಗ್ ಸ್ಪಾಟ್ ಗೂ ಹೋಗಿ ಧೈರ್ಯ ತುಂಬಿದ್ದರು. ಒಟ್ಟಾರೆ ಕನ್ನಡದ ಭರವಸೆಯ ನಾಯಕ ಅಭಿಷೇಕ್ ಗೆ ಒಳ್ಳೆಯದಾಗಲೀ ಎಂಬುದು ನಮ್ಮೆಲ್ಲರ ಆಶಯ ಕೂಡ ಹೌದು.
Comments