ದೀಪಿಕಾ ಗಂಡನ ಹಿಂದೆ ಬಿದ್ದಿದ್ದಾಳ ಸೆಕ್ಸಿತಾರೆ ರಾಖಿ ಸಾವಂತ್...?!!!

ಕಾಂಟ್ರೋವರ್ಸಿ ಕ್ವೀನ್ ರಾಖಿ ಸಾವಂತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾಳೆ. ಬಾಲಿವುಡ್ ಬೆಡಗಿ ರಾಖಿ ಸಾವಂತ್ ಎದೆ ಮೇಲೆ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಅಂದಹಾಗೇ ಈ ಬಾರಿ ರಾಖಿ ಟ್ರೋಲ್ ಆಗ್ತಾ ಇರೋದು ಡಿಪ್ಪಿ ಗಂಡನ ಜೊತೆ. ರಣವೀರ್ ಸಿಂಗ್ ಹೆಸರನ್ನು ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ರಾಖಿ. ಅಂದಹಾಗೇ ರಿಯಾಲಿಟಿ ಶೋ’ವೊಂದರಲ್ಲಿ ಈ ರಣವೀರ್ ಸಿಂಗ್, ರಾಕ್ ರಾಖಿ ಸಾವಂತ್ ಅಂದ್ರೆ ನನಗಿಷ್ಟ ಐ ಲವ್ ಯೂ ರಾಖಿ ಸಾವಂತ್ ಎಂದು ತಮಾಷೆಗಾಗಿ ಹೇಳಿದ್ದರು. ಆದರೆ ಇದೀಗ ರಾಖಿ ಎದೆ ಮೇಲೆ ರಣವೀರ್ ಸಿಂಗ್ ಹಚ್ಚೆ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳು ದೀಪಿಕಾಗೆ ಕಮೆಂಟ್ ಮಾಡುತ್ತಿದ್ದಾರಂತೆ.
ಭಯ ಪಡಬೇಡಿ, ಅಂದಹಾಗೇ ರಾಖಿ ಸಾವಂತ್, ರಣವೀರ್ ಸಿಂಗ್ ಪ್ರೀತಿಗೆ ಬಿದ್ದಿಲ್ಲ. ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅಭಿನಯದ 'ಗಲ್ಲಿ ಬಾಯ್' ಪ್ರಮೋಷನ್ ರಾಖಿ ಮಾಡ್ತಿದ್ದಾಳೆ.ಎದೆ ಮೇಲೆ ರಣವೀರ್ ಹೆಸ್ರು ಹಚ್ಚೆ ಹಾಕಿಸಿಕೊಂಡಿರುವ ಫೋಟೋವನ್ನು ರಾಖಿ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಗಲ್ಲಿ ಬಾಯ್, ರಣವೀರ್, ಆಲಿಯಾ ಭಟ್ ಎಂದು ಹ್ಯಾಶ್ಟ್ಯಾಗ್ ಹಾಕಿದ್ದಾಳೆ. ಕೆಲ ಗಂಟೆ ಹಿಂದೆ ರಾಖಿ ಹಾಕಿರುವ ಈ ಫೋಟೋಕ್ಕೆ ಭರ್ಜರಿ ಕಮೆಂಟ್ ಹಾಗೂ ಲೈಕ್ಸ್ ಬರ್ತಿದೆ. ಈ ಬಾರಿ ಕೂಡ ರಾಖಿ ಕೆಲಸಕ್ಕೆ ಟ್ರೋಲರ್ ಗಳು ಕಾಲೆಳೆದಿದ್ದಾರೆ. ಅಂದಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ರಾಖಿ ಸಾವಂತ್ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ದಾರೆ. ಇತ್ತೀಚಿಗಂತೂ ರಾಖಿ ಸಾವಂತ್ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.
Comments