ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ಬಿಗ್ ಬಾಸ್' ಸ್ಪರ್ಧಿ..!! ಯಾರ್ ಗೊತ್ತಾ..?

ಬಿಗ್ ಬಾಸ್ ಸ್ಪರ್ಧಿಗಳು ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಇದೀಗ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸುದ್ದಿಯಲ್ಲಿದ್ದಾರೆ.. ಇಂಡಸ್ಟ್ರಿಯಲ್ಲಿರುವ ಬಹುತೇಕ ಎಲ್ಲ ನಟರ ಜೊತೆಯಲ್ಲೂ ಪ್ರಥಮ್ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿಯೂ ಪ್ರಥಮ್ ಟಚ್ ನಲ್ಲಿ ಇದ್ದಾರೆ. ಪ್ರಥಮ್ ಅಭಿನಯಿಸಿದ್ದ 'ಎಂಎಲ್‌ಎ' ಚಿತ್ರದ ಆಡಿಯೋ ಲಾಂಚ್ ಮಾಡಿದ್ದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ. ಆದರೆ ಇದೀಗ ಡಿ-ಬಾಸ್ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಪ್ರಥಮ್ ಗುರಿಯಾಗಿದ್ದಾರೆ.
ಪ್ರಥಮ್ ನಟಿಸಿ, ನಿರ್ದೇಶನ ಮಾಡಿದ ನಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲು ''ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ಬರ್ತಾರೆ'' ಎಂದು ಹೇಳಿಕೊಂಡಿದ್ದಾರೆ. ಇದು ದರ್ಶನ್ ಅಭಿಮಾನಿಗಳನ್ನ ತಾಳ್ಮೆ ಕೆಡಿಸಿದೆ. ಆದ್ರೆ, ಪ್ರಥಮ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೂಲ್ ಆಗಿ ಇದ್ದಾರೆ..ಪ್ರಥಮ್ ಮತ್ತು ದರ್ಶನ್'ನಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲು 'ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್' ಬರ್ತಾರೆ ಎಂದು ಹೇಳುತ್ತಿರುವ ಪ್ರಥಮ್, ಯಾರಿಂದ ಪೋಸ್ಟರ್ ಬಿಡುಗಡೆ ಮಾಡಿಸಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ ಒಳ್ಳೆ ಹುಡುಗ ಪ್ರಥಮ್. ಅಭಿಮಾನಿ ಆಕ್ರೋಶವನ್ನ ತಾಳ್ಮೆಯಿಂದ ಸ್ವೀಕರಿಸುತ್ತಿರುವ ಪ್ರಥಮ್, ''ಕಾದು ನೋಡಿ, ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ನನ್ನ ಚಿತ್ರದ ಪೋಸ್ಟರ್ ರಿಲೀಸ್ ಮಾಡ್ತಾರೆ. ಅವರು ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಲು ಒಪ್ಪುಕೊಂಡಿದ್ದಾರೆ'' ಎಂದು ತಿಳಿಸಿದ್ದಾರೆ.. ನಾಳೆ ನಟ ಭಯಂಕರ ಪೋಸ್ಟರ್ ಬಿಡುಗಡೆಯಾಗಲಿದ್ದು ಪ್ರಥಮ್ ಪ್ರಶ್ನೆಗೆ ಉತ್ತರ ಸಿಗಲಿದೆ.
Comments