ಬಿಗ್ ಬಾಸ್ ಮುಗಿಯದ ಕಥೆ : ಕವಿತಾ ಆರೋಪಕ್ಕೆ ಆ್ಯಂಡಿ ಹೇಳಿದ್ದೇನು ಗೊತ್ತಾ...?

ಅಂದಹಾಗೇ ಮತ್ತೆ ಸದ್ದು ಮಾಡುತ್ತಿದೆ ಬಿಗ್ಬಾಸ್. ಕನ್ನಡದ ಅತೀದೊಡ್ಡ ರಿಯಾಲಿಟಿ ಶೋ ಬಿಗ್’ಬಾಸ್ ಸದ್ಯ ಮುಗಿದ ನಂತರವೂ ಅದೇ ವ್ಹೇವ್ ನಲ್ಲಿ ಸುದ್ದಿಯಾಗುತ್ತಿದೆ. ಸೀಸನ್-6 ನಲ್ಲಿ ಶಶಿ ಕುಮಾರ್ ವಿನ್ನರ್’ ಆಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳ ವೈ -ಮನಸ್ಸು ಮಾತ್ರ ಮುಗಿದಂತಿಲ್ಲ. ಅದಕ್ಕೆ ಕಾರಣ ಆ್ಯಂಡಿ. ನಟಿ ಕವಿತಾ ತಮ್ಮ ಸಹ ಸ್ಪರ್ಧಿಯಾಗಿದ್ದ ಆ್ಯಂಡ್ರೂ ವಿರುದ್ಧ ದೂರು ನೀಡಿದ್ದಾರೆ. ತಮಗೆ ಬಿಗ್ ಬಾಸ್ ಮನೆಯಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಟಾರ್ಚರ್ ಮಾಡಿದ್ದಷ್ಟೇ ಅಲ್ಲದೇ ಬಿಗ್ ಬಾಸ್ ಮುಗಿದ ನಂತರವೂ ಕೆಲ ಶೋಗಳಲ್ಲಿ ನನ್ನನ್ನು ಅವಾಚ್ಯವಾಗಿ ನಿಂಧಿಸಿದ್ದಾರೆ ಎಂದು ಕವಿತಾ ಮಹಿಳಾ ಆಯೋಗಕ್ಕೆ ಆ್ಯಂಡ್ರೂ ವಿರುದ್ಧ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆ್ಯಂಡಿ, ಬಿಗ್ ಬಾಸ್ ನಂತರ ನಾನು ಎಂದೂ ಕವಿತಾ ಅವರನ್ನು ಸಂಪರ್ಕಿಸಲಿಲ್ಲ. ಅಲ್ಲದೇ ಅವರ ಫೋನ್ ನಂ ಕೂಡ ನನ್ನ ಬಳಿ ಇಲ್ಲ. ನಾನು ಏನೇ ಮಾಡಿದ್ರು ಅದು ಶೋ ನಲ್ಲಿ ಮಾತ್ರ. ಈ ಬಗ್ಗೆ ನಾನು ಮಾಡಿದ ಕೆಲಸಗಳಿಗೆ ಅದಾಗಲೇ ಕ್ಷಮೆ ಕೇಳಿದ್ದೇನೆ. ಸುದೀಪ್ ಜೊತೆಯಲ್ಲಿಯೇ ನಾನು ಸ್ಸಾರಿ ಕೇಳಿದ್ದೇನೆ. ಸಾರ್ವಜನಿಕರ ವೇದಿಕೆ ಮೇಲೆ ಕರ್ನಾಟಕದ ಜನರ ಮುಂದೆ ನಾನು ತಪ್ಪು ಒಪ್ಪಿಕೊಂಡಿದ್ದೇನೆ. ಕವಿತಾ ಅವರು ಈಗ ಹೀಗ್ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ, ಇದು ಪಬ್ಲಿಸಿಟಿ ಸ್ಟಂಟ್ ಇರಬೇಕೋ ಗೊತ್ತಿಲ್ಲ. ನಾನು ಬಿಗ್ ಬಾಸ್ ಬಳಿಕ ಕಿರಿಕಿರಿ ಮಾಡಿಲ್ಲ. ಅವರ ಹಿಂದೆ ತಿರುಗಿಲ್ಲ. ನಾನು ಏನೇ ಮಾಡಿದ್ರು ಅದು ಬಿಗ್ಬಾಸ್ ಟಾಸ್ಕ್ ನಲ್ಲಿ ಮಾತ್ರ. ಅವರಿಗೆ ತೊಂದರೆ ಆಗಿದ್ದರೇ ಆಗಲೇ ತಿರುಗಿ ಬೀಳಬೇಕಿತ್ತು. 20 ದಿನಗಳ ಬಳಿಕ ಯಾಕ್ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲವೆಂದರು. ಬಿಗ್ ಬಾಸ್ ಮುಗಿದ ಬಳಿಕ ಇತ್ತೀಚಿಗಷ್ಟೇ ಆದರೆ ಕವಿತಾ ಗೌಡ ಮತ್ತು ಆ್ಯಂಡೂ ಸೇರಿದಂತೇ ಇತರ ಬಿಗ್ ಬಾಸ್ ಸ್ಪರ್ಧಿಗಳು ಮಜಾ ಟಾಕೀಸ್ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕವಿತಾ ಗೌಡರನ್ನು ಆ್ಯಂಡೂ ಹಿಯಾಳಿಸಿದ್ದಾರೆ, ಅವಾಚ್ಯ ಶಬ್ಧಗಳನ್ನು ಉಪಯೋಗಿಸಿದ್ದಾರೆ. ನನ್ನ ಪಕ್ಕದಲ್ಲಿಯೇ ಕುಳಿತು ಕಿರಿಕಿರಿ ಮಾಡಿದ್ದಾರೆಂದು ಕವಿತಾ ದೂರಿನಲ್ಲಿ ತಿಳಿಸಿದ್ದಾರೆ.
Comments