ಜಗ್ಗೇಶ್ ಟ್ವೀಟ್ ಗೆ ಕಣ್ಣೀರು ಹಾಕಿದ ಚಾಲೆಂಜಿಂಗ್ ಸ್ಟಾರ್…!!!

ಸ್ಯಾಂಡಲ್’ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ ಸಿನಿಮಾಗಾಗಿ ಕೋಟ್ಯಾಂತರ ಅಭಿಮಾನಿಗಳು ಬಕ ಪಕ್ಷಿಗಳಂತೇ ಕಾದು ಕುಳಿತಿದ್ದಾರೆ. ತಾರಕ್ ಸಿನಿಮಾ ಬಳಿಕ ಬಹು ನಿರೀಕ್ಷಿತ ಸಿನಿಮಾ ಯಜಮಾನ ರಿಲೀಸ್ ಆಗೋಕೆ ರೆಡಿಯಾಗಿದೆ. ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಇನ್ನೂ ಬಿಡುಗಡೆ ಆಗಿಲ್ಲ. ಚಿತ್ರ ಪ್ರಮೋಷನ್ ಜೋರಾಗಿಯೇ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ‘ಯಜಮಾನ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಈಗ ಈ ಟೀಸರ್ ಬಗ್ಗೆ ನವರಸನಾಯಕ ಜಗ್ಗೇಶ್ ಅವರು, “ಈ ಸಾಧನೆ ನೋಡಲು ನಿಮ್ಮ ತಂದೆ ಇರಬೇಕಿತ್ತು” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ದರ್ಶನ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ...?
ದರ್ಶನ್ ನಟನೆಯ ಯಜಮಾನ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಯೂಟ್ಯೂಬ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಈ ಅತಿಥಿ ಯಾವಾಗಲೂ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಾರೆ. ಈ ಟ್ರೈಲರ್ ನೋಡಿದ್ದಾಗ ನಿಮಗೆ ಗೊತ್ತಾಗುತ್ತೆ” ಎಂದು ಚಿತ್ರದ ಫೋಟೋಗಳನ್ನು ಹಾಗೂ ಟ್ರೈಲರ್ ಲಿಂಕ್ ಹಾಕಿ ಟ್ವೀಟ್ ಮಾಡಿದೆ. ಅಂದಹಾಗೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುವ ನವರಸ ನಾಯಕ ಜಗ್ಗೇಶ್ ಅವರು ಈ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಟ್ವಿಟ್ಟರಿನಲ್ಲಿ ಹಾಕಿ, ಅದಕ್ಕೆ “ಹೃದಯತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿ ಕಂಡು. ಹಾರಲಿ ಏರಲಿ ಕನ್ನಡದ ಬಾವುಟ. ನಾನು ಚಿತ್ರಮಂದಿರದಲ್ಲೇ ನೋಡಿ ಬೆಂಬಲಿಸುವೆ ಯಜಮಾನ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ದರ್ಶನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ
ಈ ಟ್ವೀಟ್ ಗೆ ದರ್ಶನ್ಪ್ರ ತಿಕ್ರಿಯಿಸಿದ್ದು, “ನಿಮ್ಮ ಪ್ರೀತಿ ಹಾಗೂ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಅಣ್ಣಾ” ಎಂದು ರೀ-ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಟ್ವೀಟ್ ಗೆ ಕಣ್ಣಾಲಿಗಳು ತುಂಬಿ ಬಂತಂತೆ ದರ್ಶನ್ ಗೆ. ತಮ್ಮ ತಂದೆ ಇದ್ದಾಗ ನಮಗೆ ಸಕ್ಷಸ್ ಇರಲಿಲ್ಲ. ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟೆ , ಲೈಟ್ ಬಾಯ್ ಆಗಿ ಕೆಲಸ ಮಾಡಿಕೊಂಡು ಬೆಳೆದೆ. ಜಗ್ಗೇಶ್’ ಟ್ವೀಟ್ ಗೆ ಅವರು ಕೂಡ, “ಧನ್ಯವಾದಗಳು ಸಹೋದರ. ತಂದೆಗೆ ತಕ್ಕ ಮಗ. ನಿಮ್ಮ ತಂದೆ ಇರಬೇಕಿತ್ತು ನಿನ್ನ ಸಾಧನೆ ನೋಡಲು. ಸೀನಣ್ಣನ ಆತ್ಮ ಸ್ವರ್ಗದಿಂದಲೇ ನಿನ್ನ ಹರಸುತ್ತಿದೆ. ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ದೇವರು ನಿನಗೆ ಆಶೀರ್ವಾದ ಮಾಡಲಿ” ಎಂದು ರೀ-ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
Comments