ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾಮಿಲಿ ಗಾಸಿಪ್‌ಗೆ ಪುಲ್ ಸ್ಟಾಫ್..!?
ಸಂಸಾರ ಅಂದ ಮೇಲೆ ಸರಸ ವಿರಸ ಎಲ್ಲವೂ ಕೂಡ ಕಾಮನ್.. ಕಾಮನ್ ಮ್ಯಾನ್ ಅಷ್ಟೆ ಅಲ್ಲ… ಸೆಲಬ್ರೆಟಿಗಳು ಕೂಡ ಈ ವಿಷಯದಿಂದ ಹಿಂದೆ ಉಳಿದಿಲ್ಲ.. ಎಲ್ಲರ ಮನೆ ದೋಸೆನೂ ತೂತೇ ಎನ್ನುವ ರೀತಿ ಎಲ್ಲ ಗಂಡ ಹೆಂಡತಿಯರ ಮಧ್ಯೆ ಜಗಳ ಮನಸ್ತಾಪ ಬಂದೆ ಬರುತ್ತದೆ… ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಬಿರುಕು ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಈಗಾಗಲೇ ವಿಜಯಲಕ್ಷ್ಮಿ ಮತ್ತು ದಚ್ಚು ಸಿಟ್ಟನ್ನೆಲ್ಲ ಮರೆತು ಅನ್ಯೊನ್ಯವಾಗಿದ್ದಾರೆಂದು ಹಲವರಿಗೆ ಗೊತ್ತಿಲ್ಲ.ಇಬ್ಬರ ಮಧ್ಯೆ ಈಗಲೂ ಕಿತ್ತಾಟವಿದೆ, ಮನಸ್ತಾಪವಿದೆ ಎಂದು ಕೊಂಡಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡಿದ ಬಿ.ಸುರೇಶ್, ವಿಜಯಲಕ್ಷ್ಮಿ ತಮ್ಮ ಪುತ್ರ ವಿನೀಶ್‌ನನ್ನು ಕರೆದುಕೊಂಡು ಆಗಾಗ ಯಜಮಾನ ಚಿತ್ರದ ಶೂಟಿಂಗ್ ಸೆಟ್ ಗೆ ಬರುತ್ತಿರುತ್ತಾರೆ. ದರ್ಶನ್ ವಿಜಯಲಕ್ಷ್ಮಿ ತುಂಬಾ ಅನ್ಯೋನ್ಯವಾಗಿದ್ದಾರೆ ತುಂಬಾ ಪ್ರೀತಿಯಿಂದ ಇದ್ದಾರೆ ಎಂಬ ಮಾತುಗಳನ್ನು ಹೇಳಿದ್ದಾರೆ. ಅಲ್ಲದೇ ದಚ್ಚು ಮತ್ತು ವಿಜಯಲಕ್ಷ್ಮಿ ಜಗಳವಾಡಿಕೊಂಡಿದ್ದು ನಿಜವಿರಬಹುದು, ಗಂಡ ಹೆಂಡತಿ ಅಂದಮೇಲೆ ಒಂದು ಮಾತು ಬರತ್ತೆ ಹೋಗತ್ತೆ. ಆದ್ರೆ ಈ ಇಬ್ಬರೂ ಹೊಂದಿಕೊಂಡಿದ್ದಾರೆ ಎಂದು ಹೇಳುವ ಮೂಲಕ ದಚ್ಚು ಬಗ್ಗೆ ಇದ್ದ ಗಾಸಿಪ್‌ಗೆ ಬಿ.ಸುರೇಶ್ ತೆರೆಎಳೆದಿದ್ದಾರೆ. ಇದರಿಂದ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ..ಒಟ್ಟಾರೆ ಸ್ಯಾಂಡಲ್ ವುಡ್ ನಲ್ಲಿ ಸೆಲೆಬ್ರೆಟಿಗಳ ಜಗಳ ಕಾಮನ್ ಆಗಿಬಿಟ್ಟಿದೆ..
Comments