ಆಂಡಿ ಪರ ಬ್ಯಾಟಿಂಗ್ ಬೀಸಿದ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ..?? ಯಾರ್ ಗೊತ್ತಾ..?

12 Feb 2019 4:24 PM | Entertainment
726 Report

'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ಕಡೆಯಿಂದ ಕಿರುಕುಳ ತಪ್ಪಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಆಂಡ್ರ್ಯೂ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ 'ಚಿನ್ನು' ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಕಿರುತೆರೆಯ ರಿಯಾಲಿಟಿ ಷೋ ಗಳಲ್ಲಿ ಅತೀ ದೊಡ್ಡ ರಿಯಾಲಿಟಿ ಷೋ ಗಳ ಪೈಕಿ ಬಿಗ್ ಬಾಸ್ ಕೂಡ ಒಂದು… ಕನ್ನಡದಲ್ಲಿ ಈಗಾಗಲೇ 6 ಆವೃತ್ತಿಗಳು ಮುಗಿದಿವೆ.. 5 ಆವೃತ್ತಿಗಳಿಗೆ ಹೋಲಿಸಿದರೆ ಆರನೇ ಆವೃತ್ತಿ ಹೆಚ್ಚು ಸುದ್ದಿ ಮಾಡಿತ್ತು.. ಅಷ್ಟೆ ಅಲ್ಲ ಆ ಸೀಜನ್ ಮುಗಿದ ಮೇಲಿಯೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಇದೀಗ 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಯಾಗಿದ್ದ ಆಂಡಿ ವಿರುದ್ಧ ಮತ್ತೊಬ್ಬ ಸ್ಪರ್ಧಿ ನಟಿ ಕವಿತಾ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದಾರೆ. 'ಬಿಗ್ ಬಾಸ್' ಸೀಸನ್ 6 ರಲ್ಲಿ ಇವರಿಬ್ಬರು ಸ್ಪರ್ಧಿಗಳಾಗಿದ್ದರು. ಶೋ ಮುಗಿದು ಇಷ್ಟು ದಿನಗಳ ನಂತರ ಕವಿತಾ ಅವರು ದೂರು ನೀಡಿದ್ದಾರೆ.ಮುರಳಿ, ಆಂಡ್ರ್ಯೂ ಪರವಾಗಿಯೇ ಬ್ಯಾಟಿಂಗ್ ಪ್ರಾರಂಭ ಮಾಡಿದ್ದಾರೆ. ಬಿಗ್ ಬಾಸ್' ಮನೆಯಲ್ಲಿ ಇರುವಾಗ, ಆಟಕ್ಕಾಗಿ ಆಂಡ್ರ್ಯೂ ಆ ರೀತಿ ನಡೆದುಕೊಳ್ಳುತ್ತಿದ್ದ ಅಷ್ಟೇ. ನನಗೆ ಗೊತ್ತಿರುವ ಹಾಗೆ ಹೊರಗೆ ಬಂದ ಮೇಲೆ ಆಂಡಿ ಹಾಗೆಲ್ಲ ಮಾಡಲ್ಲ ಎಂದು ಮುರಳಿ ಹೇಳಿಕೆ ನೀಡಿದ್ದಾರೆ.  ಕವಿತಾ-ಆಂಡಿ ಕೇಸ್ ನ 'ಬಿಗ್ ಬಾಸ್' ಮನೆಯಲ್ಲಿ ಹ್ಯಾಂಡಲ್ ಮಾಡಿದ್ದು ನಾನೇ. ಆ ಟಾಸ್ಕ್ ನಲ್ಲಿ ನಾನು ಜಡ್ಜ್ ಆಗಿದ್ದೆ. ನೀವು ಸರಿ ಮಾಡಿಕೊಳ್ಳಬಹುದು ಅಂತ ನಾನು ಇಬ್ಬರಿಗೂ ಹೇಳಿದ್ದೆ. ಆದರೆ ಅವರು ಸರಿ ಮಾಡಿಕೊಳ್ಳಲಿಲ್ಲ. ಯಾವತ್ತೋ ನಡೆದಿದ್ದನ್ನ ಇವತ್ತು ಮತ್ತೆ ತೆಗೆಯುವುದು ಸರಿಯಲ್ಲ ಎಂದು ಮುರುಳಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments