ನಾನು ಮದುವೆ ಆಗಲ್ಲ ಎಂದ ಫಿದಾ ಬೆಡಗಿ ಸಾಯಿ ಪಲ್ಲವಿ..!! ಕಾರಣ ಏನ್ ಗೊತ್ತಾ..?

ಸಾಯಿ ಪಲ್ಲವಿ… ಹುಡುಗರ ಹಾಟ್ ಫೇವರೆಟ್.. ಮಲಯಾಳಂ ಸೂಪರ್ ಹಿಟ್ ಸಿನಿಮಾದ ಮೂಲಕ 'ಪ್ರೇಮಂ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ಚೆಲುವೆ ಸಾಯಿ ಪಲ್ಲವಿ, ಮೊದಲ ಸಿನಿಮಾದಲ್ಲೇ ಅನೇಕ ಹುಡುಗರ ಮನಸ್ಸು ಕದ್ದಿದಂತು ಸುಳ್ಳಲ್ಲ.. .'ಪ್ರೇಮಂ' ಗುಂಗಿನಲ್ಲಿರುವಾಗಲೇ 'ಫಿದಾ' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಎಲ್ಲರ ಕೈಯಲ್ಲೂ ಸೈ ಎನಿಸಿಕೊಂಡರು.ಇಂತಹ ನಟಿ ಈಗ ಮದುವೆ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ.
28 ವರ್ಷದ ಸಾಯಿ ಪಲ್ಲವಿ ಈಗ ಮದುವೆ ವಿಚಾರದಲ್ಲಿ ಸುದ್ದಿ ಆಗಿದ್ದಾರೆ. ಯಾವಾಗಲೂ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ. ಈ ಪ್ರಶ್ನೆಯಿಂದ ದೂರವಿರಲು ನಿರ್ಧರಿಸಿದ ಸಾಯಿ ಪಲ್ಲವಿ ಮದುವೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.ಮದುವೆ ಆಗೋದಿಲ್ಲ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ ಸಾಯಿ ಪಲ್ಲವಿ ಯಾಕೆ ಎಂಬ ಕಾರಣವನ್ನ ಕೂಡ ತಿಳಿಸಿದ್ದಾರೆ.. ''ನನ್ನ ಭವಿಷ್ಯವನ್ನ ನನ್ನ ಪೋಷಕರಿಗಾಗಿ ಮೀಸಲಿಡುತ್ತೇನೆ. ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ನನ್ನ ಜವಾಬ್ದಾರಿ. ನನ್ನ ಕುಟುಂಬದ ಜೊತೆ ಇರಲು ನಾನು ನಿರ್ಧರಿಸಿದ್ದೇನೆ. ಮದುವೆಯಿಂದ ನನ್ನ ಜವಾಬ್ದಾರಿಯನ್ನ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಮದುವೆ ಆಗಲ್ಲ'' ಎಂದಿದ್ದಾರೆ. ಎಲ್ಲರೂ ಮದುವೆಯ ಬಗ್ಗೆ ಕನಸು ಕಟ್ಟಿಕೊಂಡಿದ್ದರೆ ಸಾಯಿ ಪಲ್ಲವಿ ಮಾತ್ರ ಮದುವೆ ಬೇಡ ಎಂದಿದ್ದಾರೆ
Comments