‘ದಾಸ’ನ ಅಡ್ಡಾ ಸೇರಿದ 'ಕೆಜಿಎಫ್' ಸಂಭಾಷಣೆಕಾರ

ಕಳೆದ ವರ್ಷ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ದಾಖಲೆ ಮೇಲೆ ದಾಖಲೆ ಬರೆದಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ.. ಥಿಯೇಟರ್ ನಲ್ಲಿ ಕೂತು ಡೈಲಾಗ್ ಕೇಳುತ್ತಿದ್ದರೆ ಜನ ಎದ್ದು ಬಿದ್ದು ಶಿಳ್ಳೆ ಹೊಡೆಯುತ್ತಿದ್ದದರು.. ಚಿತ್ರದ ಡೈಲಾಗ್’ಗಳು ಸಿನಿ ರಸಿಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟವು.. 'ಕೆಜಿಎಫ್' ಭರ್ಜರಿ ಯಶಸ್ಸಿನಲ್ಲಿ ಡೈಲಾಗ್ ಕೂಡ ಪ್ರಮುಖವಾಗಿದೆ. ಕನ್ನಡ ಸಿನಿಮಾ ಸಂಭಾಷಣೆಯಲ್ಲಿ 'ಕೆಜಿಎಫ್' ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದ್ದು, ಸಂಭಾಷಣೆಕಾರ ಚಂದ್ರಮೌಳಿ ಅವರಿಗೆ ಮತ್ತೊಂದು ಬಿಗ್ ಸ್ಟಾರ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಕ್ಕೆ ಚಂದ್ರಮೌಳಿ ಸಂಭಾಷಣೆ ಬರೆಯಲಿದ್ದಾರೆ. ದರ್ಶನ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರಕ್ಕೆ ಚಂದ್ರಮೌಳಿ ಸಂಭಾಷಣೆ ಬರೆಯಲಿದ್ದಾರೆ. ದರ್ಶನ್ ಚಿತ್ರಗಳಲ್ಲಿ ಸಂಭಾಷಣೆ ಹೈಲೈಟ್ ಆಗಿದ್ದು, ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಿರುತ್ತವೆ. 'ರಾಬರ್ಟ್' ಗೆ ಚಂದ್ರಮೌಳಿ ಸಂಭಾಷಣೆ ಬರೆಯಲಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗತೊಡಗಿದೆ. ಕೆಜಿಎಫ್ ರೀತಿಯೇ ಈ ಸಿನಿಮಾವು ಕೂಡ ಸಖತ್ ಹಿಟ್ ಆಗೋದರಲ್ಲಿ ನೋ ಡೌಟ್. ಕೆಜಿಎಫ್ ಸಿನಿಮಾ ಸ್ಯಾಂಡಲ್'ವುಡ್ ನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿತು.. ಒಂದೊಂದು ಪಂಚಿಂಗ್ ಡೈಲಾಗ್ ಕೂಡ ಸಿನಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದವು.. ಇವತ್ತಿಗೂ ಆ ಸಿನಿಮಾದ ಡೈಲಾಗ್ ಅನ್ನು ಜನ ಮರೆತ್ತಿಲ್ಲ... ಆಗಿಂದಾಗೆ ಗುನುಗುತ್ತಿರುತ್ತಾರೆ. ಅದರ ಕ್ರೆಡಿಟ್ ಸೇರಬೇಕಾಗಿದ್ದು ಸಂಭಾಷಣೆಕಾರ ಚಂದ್ರಮೌಳಿಯವರಿಗೆ... ಇದೀಗ ಅಂತದ್ದೆ ಮತ್ತೊಂದು ಸಾಹಸಕ್ಕೆ ಕೈಹಾಕುತ್ತಿದ್ದಾರೆ.
Comments