ರಾಧಿಕ ನಿಂಗೆ ಎಂಥಾ ಗಂಡ ಸಿಕ್ಕಿದ್ದಾರೆ ..?ಮೊಗ್ಗಿನ ಮನಸಿನ ಹುಡುಗಿಗೆ ಅಭಿಮಾನಿಗಳು ಹೀಗ್ ಹೇಳ್ತಿರೋದ್ಯಾಕೆ..?

ರಾಧಿಕ ಹಾಗೂ ಯಶ್ ಅವರನ್ನು ನೋಡಿ ಜನ ಮೆಡ್ ಫಾರ್ ಈಚ್ ಅದರ್ ಎನ್ನುತ್ತಿದ್ದಾರೆ.. ರಾಧಿಕ ಪಂಡಿತ್ ಮಗುವಾದ ಮೇಲೆ ನಂತರ ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರವೇ ಇದ್ದ ನಟಿ ರಾಧಿಕಾ ಪಂಡಿತ್ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಆಗಾಗ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.
ಈ ನಡುವೆ ರಾಧಿಕಾ ಪಂಡಿತ್ ತಾವು ವಿಡಿಯೋ ಸಂದೇಶವನ್ನು ಮಾಡಲು ರೆಡಿಯಾಗುತ್ತಿರುವ ವಿಡಿಯೋ ಒಂದನ್ನು ಪ್ರಕಟಿಸಿದ್ದಾರೆ ಆ ವಿಡಿಯೋದಲ್ಲಿ 'ನಾನು ಕೆಲವು ದಿನಗಳಿಂದ ಪ್ರಕಟಿಸುತ್ತಿದ್ದ ವಿಡಿಯೋಗಳಿಗೆ ಅದನ್ನು ಮಾಡಿದವರ ಕ್ರೆಡಿಟ್ ಕೊಟ್ಟಿರಲಿಲ್ಲ. ಈ ವಿಡಿಯೋ ನೋಡಿ ನನ್ನ ವಿಡಿಯೋ ಮಾಡುವವರು ಯಾರು ಎಂದು ಗೊತ್ತಾಗುತ್ತದೆ. ಇದನ್ನು ನೋಡಿದ ಮೇಲೆ ಯಾರು ವಿಡಿಯೋ ಮಾಡುವವರು ಎಂದು ಹೇಳಬೇಕಿಲ್ಲ ಅಲ್ವಾ?' ಎಂದು ತಮಾಷೆಯಾಗಿ ಬರೆದುಕೊಂಡು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ರಾಧಿಕಾಗೆ ತಯಾರಾಗಲು ಯಶ್ ತೆರೆ ಹಿಂದೆ ನಿಂತು ಸಲಹೆ ಸೂಚನೆ ನೀಡುವ ಮಾತುಕತೆ ಕೇಳಿಸುತ್ತಿದೆ. ಕೂದಲು ಸರಿ ಮಾಡ್ಕೋ ಎಂದು ಹೇಳುವ ಯಶ್ ಯಶ್ ಧ್ವನಿ ರಾಧಿಕಾ ವಿಡಿಯೋದಲ್ಲಿ ಕೇಳಿಸುತ್ತದೆ. ಇದನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, 'ರಾಧಿಕಾ ಅತ್ತಿಗೆ ನಿಮಗೆ ಎಷ್ಟು ಕೇರ್ ಮಾಡುವ, ಪ್ರೀತಿಸುವ ಗಂಡ ಸಿಕ್ಕಿದ್ದಾನೆ' ಎಂದು ಹೊಗಳುತ್ತಿದ್ದಾರೆ. ನಿಂಗೆ ಎಂಥಾ ಗಂಡ ಸಿಕ್ಕಿದ್ದಾನೆ ಎಂತ ಕೊಂಡಾಡುತ್ತಿದ್ದಾರೆ.
Comments