ರಶ್ಮಿಕಾಳನ್ನು ಅಪ್ಪಿಕೊಳ್ಳುವ ಆಸೆ ಇದೆ ಅಂದಿದ್ದು ಯಾರ್ ಗೊತ್ತಾ..?!

ಚಂದನವನಕ್ಜೆ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ. ಆ ಸಿನಿಮಾದ ನಂತರ ಆಕೆಯನ್ನು ಕರ್ನಾಟಕದ ಕ್ರಶ್ ಅಂತಾನೇ ಹೇಳುವುದಕ್ಕೆ ಶುರು ಮಾಡಿದರು… ರಶ್ಮಿಕಾ ಇತ್ತಿಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ,.. ಇದೀಗ ರಶ್ಮಿಕಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.. ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ 8 ವರ್ಷದ ಪುಟ್ಟ ಅಭಿಮಾನಿಯೊಬ್ಬ ಪತ್ರ ಬರೆದಿರುವ ಫೋಟೋ ಇದೀಗ ವೈರಲ್ ಆಗುತ್ತಿದೆ. ಪುಟ್ಟ ಅಭಿಮಾನಿಗೆ ರಶ್ಮಿಕಾಳನ್ನು ತಬ್ಬಿಕೊಳ್ಳುವ ಆಸೆಯಂತೆ.
ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಕ್ಲಬ್ ತನ್ನ ಟ್ವಿಟ್ಟರ್ ನಲ್ಲಿ, “ಮಹಾರಾಣಿ ರಶ್ಮಿಕಾ ಅವರಿಗೆ ನ್ಯೂ ಯಾರ್ಕ್‍ನಿಂದ ಪುಟ್ಟ ಅಭಿಮಾನಿಯೊಬ್ಬರು ನಿಮಗೆ ಸಣ್ಣ ಪತ್ರವೊಂದನ್ನು ಬರೆದಿದ್ದಾನೆ. ಈತನಿಗೆ ಕೇವಲ 8 ವರ್ಷ ಹಾಗೂ ನೀವು ಆತನ ಮೊದಲ ಕ್ರಶ್. ಅವನು ನೀವು ನಟಿಸಿದ ಗೀತಾ ಗೋವಿಂದಂ ಚಿತ್ರ ನೋಡುವುದನ್ನು ಹಾಗೂ ಹಾಡುಗಳನ್ನು ಕೇಳುವುದನ್ನು ಬಿಡಲ್ಲ. ಏಕೆಂದರೆ ಅವನು ನಿಮ್ಮನ್ನು ನೋಡಬೇಕು ಹಾಗೂ ನಿಮಗೆ ಹಾಯ್ ಹೇಳಬೇಕು ಎಂದುಕೊಂಡಿದ್ದಾನೆ” ಎಂದು ಟ್ವೀಟ್ ಮಾಡಿ ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿದ್ದಾರೆ.. ಎಂತಹ ವಿಚಿತ್ರ ಎನಿಸುತ್ತದೆ ಅಲ್ವ.. ಅಷ್ಟೆ ಅಲ್ಲದೆ ಮುಂದೆ ನಿಮ್ಮನ್ನು ಭೇಟಿ ಮಾಡಿದರೆ ನಾನು ನಿಮ್ಮನ್ನು ತಬ್ಬಿಕೊಳ್ಳಬೇಕು ಎಂದು ಆ ಪತ್ರದಲ್ಲಿ ಬರೆದಿದ್ದಾನೆ. ಇದೀಗ ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Comments