ಬಿಗ್ ಬಾಸ್ ಸ್ಪರ್ಧಿಯ ಹಾಟ್ ಪೋಟೋ ಶೂಟ್..!

ಬಿಗ್’ಬಾಸ್ ಹೋಗಿ ಬಂದವರೆಲ್ಲಾ ಸಿಕ್ಕಾಪಟ್ಟೆ ಸೆಲೆಬ್ರೆಟಿಗಳಾಗುತ್ತಿದ್ದಾರೆ.. ಸಿನಿಮಾಗಳಲ್ಲಿ ಸಾಕಷ್ಟು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ..ಇದೀಗ ಬಿಗ್‌ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಈಗ ಹೊಸ ಅವತಾರದೊಂದಿಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ಸಿದ್ದರಿದ್ದಾರ ಎಂಬ ಮಾತುಗಳು ಕೇಳಿಬರುತ್ತಿವೆ.... ಸಖತ್ ಹಾಟ್ ಮಗಾ ಅಂತ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಬೋಲ್ಡ್ ಲುಕ್‌ನಲ್ಲೊಂದು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ., 'ಇದು ಯಾವುದೋ ಸಿನಿಮಾದ ಲುಕ್ ಅಲ್ಲ. ನನ್ನದೇ ಪ್ರೊಫೈಲ್‌ಗೆ ಒಂದಿಷ್ಟುಫೋಟೋ ಬೇಕು ಅಂತ ಈ ತರಹದ ಫೋಟೋ ಶೂಟ್ ಮಾಡಿಸಿದೆ ಎನ್ನುತ್ತಾರೆ ಜಯಶ್ರೀ..
ನನ್ನನ್ನು ಕ್ಯೂಟ್ ಹುಡುಗಿ, ಪಕ್ಕದ್ಮನೆ ಹುಡುಗಿ ಅಂತಿದ್ರೇ ಹೊರತು, ಜಯಶ್ರೀ ಬೋಲ್ಡ್ ಪಾತ್ರಗಳಿಗೂ ಸೈ ಅಂತ ಎಂದಿಗೂ ಪರಿಗಣಿಸಿರಲಿಲ್ಲ. ಹಾಗಾಗಿ ಈ ಫೋಟೋಶೂಟ್ ಮಾಡಿಸಿದೆ. ಫೋಟೋಗ್ರಾಫರ್ ಪಾವೆಂದನ್ ಕಾನ್ಸೆಪ್ಟ್ ಫೋಟೋ ಇದು. ಕಲಾವಿದೆಯಾಗಿ ಒಂದು ಪಾತ್ರಕ್ಕೆ ಅಗತ್ಯಕ್ಕೆ ತಕ್ಕಂತೆ ಅಭಿನಯಿಸಲು ನಾನು ಸಿದ್ಧ ಎನ್ನುವುದು ನಿಜ. ಆದರೆ ನನ್ನದೇ ಇತಿ ಮಿತಿಗಳಾಚೆ ಬೋಲ್ಡ್ ನಟಿ ಅಂತೆಲ್ಲ ಕರೆಸಿಕೊಳ್ಳಲು ಇಚ್ಚಿಸುವುದಿಲ್ಲ. ಅದು ಬೇಕಾಗಿಯೂ ಇಲ್ಲ' ಎಂಬುದು ಬಿಗ್ ಬಾಸ್ ಜಯಶ್ರೀ ಮಾತು ಸದ್ಯ ಅವರು ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ರ್ಯಾಪರ್ ಮತ್ತು ಟಪ್ಪಾಂಗುಚಿ ಮಿಶ್ರಣದ ಒಂದು ಬಗೆಯ ಪಕ್ಕಾ ಕನ್ನಡದ ಹಾಡು. ಈ ಸಾಂಗ್ ಹಿಟ್ ಆದರೆ ಜಯಶ್ರಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಂಗೆ ಎನ್ನಬಹುದು..
Comments