‘ಚೆಲುವಿನ ಚಿತ್ತಾರ’ದ ಹುಡುಗಿಗೆ ಸರ್ಪ್ರೈಸ್ ಕೊಟ್ಟ ‘ದಾಸ’

ಸ್ಯಾಂಡಲ್ ವುಡ್’ನಲ್ಲಿ ಒಬ್ಬರನ್ನೊಬ್ಬರು ಕಂಡರೆ ಆಗಲ್ಲ ಅಂತ ಕೆಲವರು ಅಂತಾರೆ.. ಸ್ಯಾಂಡಲ್ ವುಡ್ ಕಲಾವಿದರಲ್ಲಿ ಇರೋ ಅಕ್ಕರೆ ಪ್ರೀತಿ, ವಿಶ್ವಾಸ. ಅದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ ನೋಡಿ… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ನಟಿ ಅಮೂಲ್ಯಗೆ ಎಲ್ಲಿಲ್ಲದ ಅಕ್ಕರೆ. ದರ್ಶನ್ ಗೂ ಅಷ್ಟೆ ಅಮೂಲ್ಯ ಅಂದ್ರೆ ಅಷ್ಟೇ ಪ್ರೀತಿ. ಅಮೂಲ್ಯ ಬಾಲನಟಿಯಾಗಿದ್ದಾಗನಿಂದಲೂ ದರ್ಶನ್ ಜೊತೆಗಿನ ನಂಟು ಹಾಗೇ ಇದೆ. ಅಮೂಲ್ಯ ಕುಟುಂಬದ ಜೊತೆ ಇಂತಹ ಒಳ್ಳೆಯ ಬಾಂಧವ್ಯ ಹೊಂದಿರುವ ದರ್ಶನ್, ಅಮೂಲ್ಯ ಪತಿಗೆ ಸರ್ಪ್ರೈಸ್ ನೀಡಿದ್ದಾರೆ.
ಇತ್ತೀಚಿಗಷ್ಟೆ ಅಮೂಲ್ಯ ಅವರ ಪತಿ ಜಗದೀಶ್ ಗೌಡ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸೆಲೆಬ್ರೇಷನ್ ನಲ್ಲಿ ಕನ್ನಡದ ಕೆಲವು ತಾರೆಯರು ಸೇರಿದಂತೆ ಅಮೂಲ್ಯ ಫ್ರೆಂಡ್ಸ್ ಕೂಡ ಭಾಗಿಯಾಗಿದ್ದರು. ಈ ಪಾರ್ಟಿಗೆ ಸರ್ಪ್ರೈಸ್ ಆಗಿ ಎಂಟ್ರಿಕೊಟ್ಟ ದರ್ಶನ್, ಅಮೂಲ್ಯ ಪತಿಗೆ ಸಖತ್ತಾಗಿಯೇ ಶಾಕ್ ಕೊಟ್ಟಿದ್ದಾರೆ… ಈ ಬಗ್ಗೆ ಸ್ವತಃ ಜಗದೀಶ್ ಮತ್ತು ಅಮೂಲ್ಯ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಖುಷಿಯನ್ನು ಷೇರ್ ಮಾಡಿಕೊಂಡಿದ್ದಾರೆ,.ನಟಿ ಅಮೂಲ್ಯ ಅವರ ಪತಿ ಜಗದೀಶ್ ಬರ್ತಡೇಗೆ ಡಿ ಬಾಸ್ ಸ್ಪೆಷಲ್ ಅತಿಥಿಯಾಗಿ ಬಂದಿದ್ದರು…. ಜಗದೀಶ್ ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಮೂಲ್ಯ ಮತ್ತು ಜಗದೀಶ್ ಇಬ್ಬರೂ ದರ್ಶನ್ ಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು. ಸ್ಯಾಂಡಲ್ ವುಡ್ ನ ಒಂದಿಷ್ಟು ಜನ ಜಗದೀಶ್ ಹುಟ್ಟಿದ ಹಬ್ಬದ ದಿನ ಸೇರಿದ್ದಂತೂ ಸುಳ್ಳಲ್ಲ..
Comments