ಮತ್ತೆ ಟ್ರೋಲ್ ಆದ್ರೂ ಪ್ರಿಯಾಂಕಾ ಚೋಪ್ರ..! ಈ ಬಾರಿ ಏನಪ್ಪಾ ಎಡವಟ್ಟು ಮಾಡಿಕೊಂಡ್ರು..?

ಇತ್ತೀಚಿಗೆ ಕೆಲ ಸ್ಟಾರ್''ಗಳ ಖಾಸಗೀ ಫೋಟೋಗಳು ತಮಗೆ ಅರಿವಿಲ್ಲದಂತೇ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಆಗುತ್ತಿವೆ. ಈ ಸಂಬಂಧ ಈಗಾಗಲೇ ಬಾಲಿವುಡ್ ಮತ್ತು ಟಾಲಿವುಡ್ ನ ಕೆಲ ಸ್ಟಾರ್ ನಟಿಯರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ. ನಮ್ಮ ಫೊನ್ ಹ್ಯಾಕ್ ಮಾಡಲಾಗಿದೆ. ನಮ್ಮ ಖಾತೆ ಹ್ಯಾಕರ್ ಕೈಗೆ ಸಿಕ್ಕಿದೆ ಎಂದು. ಆದರೆ ನಿನ್ನೆಯಷ್ಟೇ ಸೋಶಿಯಲ್ ಮಿಡಿಯಾದಲ್ಲಿ ಪ್ರಿಯಾಂಕ ಚೋಪ್ರಾ ತಮ್ಮ ಪತಿ ನಿಕ್ ಜೊತೆ ಇದ್ದ ಕೆಲ ರಸಮಯ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬೆಡ್ ರೂಂ ನಲ್ಲಿದ್ದ ಫೋಟೋವನ್ನು ಯಾರು ತೆಗೆದಿದ್ದಾರೆಂಬ ಹಲವು ಚರ್ಚೆಗಳು ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಯ್ತು. ಇದೀಗ ಮತ್ತೊಂದು ವಿಷಯಕ್ಕೆ ಚರ್ಚೆಯಾಗಿದ್ದಾರೆ..
ಜಿಮ್ಮಿ ಫಲಾನ್ ಅವರ ಪ್ರತಿಷ್ಠಿತ ದಿ ಟು ನೈಟ್ ಶೋದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಚೋಪ್ರಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅವರು ಧರಿಸಿದ್ದ ಡ್ರೆಸ್ ಬಗ್ಗೆ ಸಾಕಷ್ಟು ಕಮೆಂಟ್ ಬರುತ್ತಿದೆ. ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಿಯಾಂಕಾ ಬೆಡ್ ರೂಂನಲ್ಲಿದ್ದ ಪೋಟೋಗ್ರಾಫರ್ ಸಿಕ್ಕಿಬಿದ್ರು ಸಂದರ್ಶನದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಪತಿ ನಿಕ್ ಜೋನಾಸ್ ಬಗ್ಗೆ, ಭಾರತೀಯ ಸಂಪ್ರದಾಯದ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಅಷ್ಟೇ ಬೋಲ್ಡಾದ ಡ್ರೆಸ್ ಧರಿಸಿ ಬಂದಿದ್ದಕ್ಕೆ ಟ್ರೋಲಿಗರು ಕಾಲೆಳೆದಿದ್ದಾರೆ.. ಒಟ್ಟಿನಲ್ಲಿ ಒಂದಲ್ಲ ಒಂದು ಸುದ್ದಿಗೆ ಪಿಗ್ಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.
Comments