ಕೆಜಿಎಫ್-2 ಗಾಗಿ ಬಾಲಿವುಡ್ನಿಂದ ಬರ್ತಾರಂತೆ ಈ ಕಾಂಟ್ರೋವರ್ಸಿ ನಟ…?!!!
ಕನ್ನಡದ ಚಿತ್ರ ಕೆಜಿಎಫ್ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. ಸಿನಿಮಾ ಮೇಕಿಂಗ್ ನೋಡಿ ಹಲವು ಭಾಷೆಯ ಸಿನಿಮಾ ಇಂಡಸ್ಟ್ರಿಯವರು ಕನ್ನಡತ್ತ ಮುಖ ಮಾಡುತ್ತಿದ್ದಾರೆ. ಸಿನಿಮಾ ಗಡಿ ದಾಟಿ ಪಾಕ್ ನಲ್ಲೂ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಕೆಜಿಎಫ್ ಫೀವರ್ ಇನ್ನೂ ಅಭಿಮಾನಿಗಳಿಗೆ ಬಿಟ್ಟಿಲ್ಲ. ಕೆಜಿಎಫ್ ಸಕ್ಸಸ್ ಈಗ ಮತ್ತೆ ಕೆಜಿಎಫ್-2 ಮಾಡಲು ಸ್ಪೂರ್ತಿ ಸಿಕ್ಕಿದೆ.ಕೆಜಿಎಫ್ ಚಾಪ್ಟರ್ 1 ಹೊಸ ಹವಾ ಎಬ್ಬಿಸಿದ ನಂತರ ಇದೀಗ ಕೆಜಿಎಫ್ 2 ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಂದಹಾಗೇ ಕೆಜಿಎಫ್-2 ಮತ್ತಷ್ಟು ನಿರೀಕ್ಷೆಗಳನ್ನು ಮೂಡಿಸಲಿದ್ಯಂತೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹೊಸಥರದ ಪ್ರಯೋಗಗಳನ್ನು ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದಕ್ಕಾಗಿಯೇ ಖಡಕ್ ನಟ ಬರ್ತಿದ್ದಾರಂತೆ.....!
ಕೆಜಿಎಫ್ ನೋಡಿದ ಕೆಲ ಬಾಲಿವುಡ್ ಸ್ಟಾರ್’ಗಳು ಇತ್ತ ಮುಖ ಮಾಡಿದ್ದಾರೆ. ಯಶ್ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ನಿರ್ದೇಶಕರನ್ನು ಕೊಂಡಾಡುತ್ತಿದ್ದಾರೆ. ಇದೀಗ ಅದೇ ಬಾಲಿವುಡ್ ಚಿತ್ರ ಜಗತ್ತಿನಿಂದ ಸೂಪರ್ ಸ್ಟಾರ್, ಕಾಂಟ್ರೋವರ್ಸಿ ನಟರೆಂದೇ ಕರೆಯುವ ಸಂಜಯ್ ದತ್ ಬರುತ್ತಿದ್ದಾರೆಂಬ ಮಾಹಿತಿ ಇದೆ. ಸದ್ಯದಲ್ಲೇ ಕೆಜಿಎಫ್ 2 ಚಿತ್ರೀಕರಣ ಆರಂಭವಾಗಲಿದೆ. ಈ ಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಜತೆಯಾಗಿ ಬಾಲಿವುಡ್ ನಟ ಸಂಜಯ್ ದತ್ ರನ್ನು ಪ್ರಮುಖ ಪಾತ್ರವೊಂದಕ್ಕೆ ಕರೆತರಲು ಪ್ರಯತ್ನ ನಡೆದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಂಜೂ ಬಾಬು ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಆದರೆ ಕೆಜಿಎಫ್ 1 ಚಿತ್ರ ಹಿಂದಿಯಲ್ಲೂ ಯಶಸ್ಸು ಗಳಿಸಿದ್ದು ನೋಡಿದರೆ ಬಾಲಿವುಡ್ ಮಂದಿ ಕೂಡಾ ಈ ಸಿನಿಮಾ ಬಗ್ಗೆ ಆಸಕ್ತಿ ವಹಿಸಿದರೆ ಅಚ್ಚರಿಯಿಲ್ಲ. ಒಂದು ವೇಳೆ ಸಂಜಯ್ ದತ್ ಸಿನಿಮಾದಲ್ಲಿ ನಬಟಿಸಲು ಗ್ರೀನ್ ಸಿಗ್ನಲ್ ಕೊಟ್ಟರೆ ಕೆಜಿಎಫ್-2 ಮತ್ತೊಮ್ಮೆ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆಯುವಲ್ಲಿ ಇದ್ದಾರೆ.
Comments