ಮದುವೆ ಸುದ್ದಿ ಕೇಳಿ ಸಿಟ್ಟಿಗೆದ್ದ ಪ್ರಭಾಸ್..?! ಸಿಟ್ಟಿಗೆ ಕಾರಣ ಯಾರ್ ಗೊತ್ತಾ..?
ಇಡೀ ಸಿನಿಮಾರಂಗದಲ್ಲಿಯೇ ಮದುವೆ ಸುದ್ದಿಗಳು ಸಿಕ್ಕಾಪಟ್ಟೆ ಕಳೆ ಕಟ್ಟುತ್ತಿವೆ.. ಕಳೆದ ವರ್ಷ ಸಾಕಷ್ಟು ಜೋಡಿಗಳು ಬ್ಯಾಚುಲರ್ ಲೈಫ್’ಗೆ ಗುಡ್ ಬಾಯ್ ಹೇಳಿ ಸಪ್ತ ಪದಿಯನ್ನು ತುಳಿದರು… ಇದೀಗ ಬಾಹುಬಲಿ ಸರದಿ ಅನಿಸುತ್ತದೆ.. ಪ್ರಭಾಸ್ ಮದುವೆ ವಿಚಾರ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಕ್ರೇಜ್ ಕ್ರಿಯೆಟ್ ಮಾಡಿತ್ತು.. ಪ್ರಭಾಸ್ ಮತ್ತು ಅನುಷ್ಕಾ ಜೋಡಿ ನೋಡಿ ಮೇಡ್ ಫಾರ್ ಈಚ್ ಅದರ್ ಎಂದವರು ಅದೆಷ್ಟು ಮಂದಿಯೋ ಗೊತ್ತಿಲ್ಲ,.. ಬಾಹುಬಲಿ ಸಿನಿಮಾ ಮುಗಿದ ಮೇಲೆ ಪ್ರಭಾಸ್ ಮದುವೆ ಬಗ್ಗೆ ಭಾರೀ ಸದ್ದು ಮಾಡಿತ್ತು.
ಪ್ರಭಾಸ್ ಸಂಬಂಧಿಯೊಬ್ಬರು ತೆಲುಗು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಸಾಹೋ ನಂತರ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.. ಒಟ್ಟಾರೆ ಅಭಿಮಾನಿಗಳ ಆಸೆಯಂತೆ ಪ್ರಭಾಸ್ ಅನುಷ್ಕಾ ಮದುವೆಯಾಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ.. ಆಗಾಗ ತಮ್ಮ ಮದುವೆ ಬಗ್ಗೆ ಪುಕಾರು ಹಬ್ಬಿಸುವ ಮಾವ ಕೃಷ್ಣರಾಜು ವಿರುದ್ಧ ಇದೀಗ ಬಾಹುಬಲಿ ಪ್ರಭಾಸ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಬಾಹುಬಲಿ ಸಿನಿಮಾ ಮುಗಿದ ಬಳಿಕ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಕೃಷ್ಣರಾಜು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದೀಗ ಸಾಹೋ ಬಳಿಕ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಕೃಷ್ಣರಾಜು ಹೇಳಿಕೆ ನೀಡಿದ್ದರು. ಇದು ಪ್ರಭಾಸ್ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಪದೇ ಪದೇ ತಮ್ಮ ಮದುವೆ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ಕೊಡಬೇಡಿ. ನಾನು ನನ್ನ ವೃತ್ತಿ ಜೀವನದ ಬಗ್ಗೆ ಗಮನಕೇಂದ್ರೀಕರಿಸಬೇಕಿದೆ ಎಂದು ಪ್ರಭಾಸ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
Comments