ಬಿಗ್'ಬಾಸ್ ಮನೆಯಿಂದ ಹೊರ ಬಂದ ಧನರಾಜ್’ಗೆ ಬಿಗ್ ಆಫರ್!
ಅಂದಹಾಗೇ ಬಿಗ್ಬಾಸ್ ಸೀಸನ್-6 ಆರಂಭವಾಗಿದೆ. ಬಿಗ್ಬಾಸ್ ಟ್ರೋಫಿ ಗೆಲ್ಲದೇ ಇದ್ರೂ, ಭಾರೀ ಜನಪ್ರಿಯತೆಯನ್ನುಗಳಿಸಿದ ಸ್ಪರ್ಧಿ ಧನರಾಜ್ ತಮ್ಮ ಸರಳತೆಯಿಂದ ಬಿಗ್’ಬಾಸ್ ನಲ್ಲಿ ಹೆಸರು ಮಾಡಿದ್ದಾರೆ. ಮಧ್ಯರಾತ್ರಿಯಲ್ಲಿ ಎಲಿಮಿನೇಟ್ ಆಗಿ, ಯಾರು ನಿರೀಕ್ಷೆ ಮಾಡದಹಾಗೇ ಮನೆಯಿಂದ ಹೊರ ಬಂದಿದ್ದಾರೆ. ಹೌದು. ಅವರೀಗ ಸ್ಯಾಂಡಲ್‌ವುಡ್‌ನಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅಂದಹಾಗೇ ತಮ್ಮ ಫ್ರೆಂಡ್ ಆಗಿ ಶಿವರಾಜ್ ಕುಮಾರ್ ಧನರಾಜ್ ಗೆ ಸ್ಥಾನ ಕೊಡುತ್ತಿದ್ದಾರೆ. ಬಿಗ್ ಬಾಸ್ ಬಳಿಕ ರುಸ್ತುಂ ನಲ್ಲಿ ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಧನು, ಶಿವಣ್ಣ ಫ್ರೆಂಡ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೇ ಚಿತ್ರದಲ್ಲಿ ಅವರದ್ದು ಐಎಎಸ್ ಅಧಿಕಾರಿ ಪಾತ್ರವಂತೆ.
ಇಂದಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನ ನಾಗರಬಾವಿಯಲ್ಲಿ ಚಿತ್ರೀಕರಣ ನಡೆಯಲಿದ್ದು ಧನು ಐಎಎಸ್ ಗೆಟಪ್‌ನಲ್ಲಿ ಮಿಂಚುತ್ತಿದ್ದಾರೆ.ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯ ಕೂಡ ನಡೆಯುತ್ತಿದೆ. ಈ ಮಧ್ಯೆ ಐಎಎಸ್ ಪಾತ್ರದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದ ಚಿತ್ರ ತಂಡ ಆ ಪಾತ್ರಕ್ಕೆ ಧನುವನ್ನ ಆಯ್ಕೆ ಮಾಡಿಕೊಂಡಿದೆ. ರುಸ್ತುಂ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಗ್ಯಾಂಗ್‌ಸ್ಟರ್ ಕಥೆಯನ್ನೊಳಗೊಂಡಿದೆ. ಚಿತ್ರದಲ್ಲಿ ಶಿವಣ್ಣ ಕೂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ ನಟ ವಿವೇಕ್ ಓಬಿರಾಯ್ ಕೂಡಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ಕೂಡ ನಟಿಸಿದ್ದಾರೆ.
Comments