ದರ್ಶನ್ ಹುಟ್ಟುಹಬ್ಬಕ್ಕೆ ಕೇಕ್-ಬ್ಯಾನರ್ಸ್ ಬ್ಯಾನ್, ಬದಲು ಅಕ್ಕಿ-ಬೇಳೆ : ಯಾಕೆ ಗೊತ್ತಾ…?

ಸ್ಯಾಂಡಲ್ವುಡ್ನ ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಹತ್ತಿರ ಬರುತ್ತಿದ್ದಂತೇ ಅಪಾರ ಅಭಿಮಾನಿಗಳು ಪೂರ್ವ ತಯಾರಿ ಮಾಡಿಕೊಂಡಿರುತ್ತಾರೆ. ದಾಮ್ ಧೂಂ ಅಂತಾ ಆಚರಿಸಬೇಕು, ಸ್ಟಾರ್ ಅವರಿಂದ ಕೇಕ್ ಕತ್ತರಿಸಬೇಕು ಅಂತೆಲ್ಲಾ ಪ್ಲ್ಯಾನ್ ಮಾಡಿ ಅವರ ನಿವಾಸದ ಬಳಿ ರಾತ್ರಿಯಿಡೀ ಜಪಮಾಡುತ್ತಾರೆ. ಆದರೆ ಈ ಬಾರಿ ನಡೆಯೋದೆ ಬೇರೆ…
ಫೆಬ್ರವರಿ 16 ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮ. ಆದರೆ ತಿಂಗಳ ಮುಂಚೆಯೇ ದಚ್ಚು, ಅಭಿಮಾನಿಗಳಿಗೆ ಒಂದು ಆತ್ಮೀಯ ಪತ್ರ ಬರೆದಿದ್ದರು. ಆ ಪತ್ರ ಮೂಲಕ ತಮ್ಮ ಫ್ಯಾನ್ಸ್ಗೆ ಮನವಿ ಮಾಡಿಕೊಂಡಿದ್ದರು.ನನ್ನ ಹುಟ್ಟುಹಬ್ಬದಿಂದ ಇತರರಿಗೆ ತೊಂದರೆಯಾಗಬಾರದು, ಹಾಗೆಯೇ ನಿಮಗೂ ನಿರಾಸೆ ಮಾಡಲ್ಲ. ನೀವು ತರುವ ಕೇಕ್, ಬ್ಯಾನರ್, ಫೋಟೋ, ಹಾರ ಬೇಡ, ಪಟಾಕಿ ಸಿಡಿಸುವುದರಿಂದ ನಿವಾಸದ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆಯಾಗುತ್ತದೆ ಎಂದಿದ್ದರು. ವಿಜೃಂಭಣೆಯ ಹುಟ್ಟುಹಬ್ಬ ನಗೆ ಬೇಡ. ನಿಮ್ಮ ಮೇಲೆ ನನಗೆ ಅಗಾಧವಾದ ಅಭಿಮಾನವಿರುತ್ತದೆ ಎಂದಿದ್ದರು. ಈ ಮಾತು ಕೇಳಿದ ಅಭಿಮಾನಿಗಳು ಸ್ಟಾರ್ ಹೇಳಿದಂತೇ ನಡೆಯಲು ನಿರ್ಧರಿಸಿದ್ದಾರೆ. ದರ್ಶನ್ ಅಭಿಮಾನಕ್ಕೆ ಮಣಿದ ಫ್ಯಾನ್ಸ್ ಕೂಡ ಸ್ಟಾರ್ ನಟನ ಹಾದಿಯಲ್ಲಿ ನಡೆಯೋಕೆ ಶುರುಮಾಡಿದ್ದಾರೆ.
ಅಂದಹಾಗೇ ಫ್ಯಾನ್ಸ್ ಬಳಗವೇ ಮಾಡಿಕೊಂಡಿರುವ ಡಿ ಫ್ಯಾನ್ಸ್ ಗ್ರೂಪ್ ವತಿಯಿಂದ ಅಭಿಮಾನಿಗಳು ಈ ಬಾರಿ ದಚ್ಚು ಬರ್ತ ಡೇಗೆ ಕೇಕ್ , ಬ್ಯಾನರ್ ಕ್ಯಾನ್ಸಲ್ ಮಾಡಿ ಅದರ ಬದಲಿಗೆ ಅಕ್ಕಿ –ಬೇಳೆ ತರುತ್ತಿದ್ದಾರೆ. ಜೊತೆಗೆ ಒಂದಷ್ಟು ದಿನಸಿ ಪದಾರ್ಥಗಳನ್ನು ಕೂಡ ತರುತ್ತಿದ್ದಾರೆ. ತಮ್ಮ ಕೈಲಾದಷ್ಟು ಮಟ್ಟಿಗೆ ಆಹಾರ ಪದಾರ್ಥಗಳನ್ನು ತರುತ್ತಿದ್ದು ಸಾರ್ವಜನಿಕರಿಗೆ, ಬಡ ಬಗ್ಗರಿಗೆ ಸಮಾಜ ಸೇವೆ ಮಾಡಲು ಹೊರಟಿದ್ದಾರೆ.ಅಂದಹಾಗೇ ಶ್ರೀ ಸಿದ್ಧಗಂಗಾ ಮಠಕ್ಕೆ ಪ್ರತೀ ತಿಂಗಳು ಸೇವೆ ಮಾಡೋಕೆ ಮುಂದಾಗಿದ್ದ ದರ್ಶನ್ ರಿಂದ ಅಭಿಮಾನಿಗಳು ಕೂಡ ಪ್ರೇರಿತರಾಗಿದ್ದಾರೆ. ಅದಷ್ಟೇ ಅಲ್ಲದೇ ದರ್ಶನ್ ಹುಟ್ಟುಹಬ್ಬದಂದು ಸಮಾಜ ಸೇವೆ ಕಾರ್ಯಗಳು ಭರದಿಂದ ಸಾಗಲಿವೆ ಎಂಬುದು ತಿಳಿದು ಬಂದಿವೆ. ಅಂದು ರಕ್ತದಾನ, ಅನ್ನದಾನ ಕೂಡ ನಡೆಯಲಿದೆ. ಒಟ್ಟಾರೆ ಈ ಬಾರಿ ದರ್ಶನ್ ಹುಟ್ಟಹಬ್ಬದ ಬಗ್ಗೆ ನಾನಾ ಗೊಂದಲಗಳಿದ್ದವು. ಆದರೆ ದರ್ಶನ್ ಮನವಿ ಪತ್ರದ ಮೂಲಕ ಈಗಾಗಲೇ ತಮ್ಮ ಫ್ಯಾನ್ಸ್ ವರ್ಗಕ್ಕೆ ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ಕೆ ಈಗಾಗಲೇ ಹಲವು ಸಿದ್ಧತೆಗಳು ನಡೆಯುತ್ತಿವೆ. ಒಟ್ಟಾರೆ ಹಿಂದೆಂದಿಗಿಂತಲೂ ಈ ಬಾರಿ ಚಾಲೆಂಜಿಂಗ್ ಸ್ಟಾರ್ ಬರ್ತ್ ಡೇ ವಿಭಿನ್ನವಾಗಿ ನಡೆಯಲಿದೆ.
Comments