'ನಟ ಸಾರ್ವಭೌಮ' ಚಿತ್ರತಂಡದಿಂದ ಕಿಡಿಗೇಡಿಗಳಿಗೆ ವಾರ್ನಿಂಗ್...!!!

ನಾಡಿನಾದ್ಯಂತ ಮಧ್ಯರಾತ್ರಿಯಿಂದಲೇ ಬಿಡುಗಡೆಯಾದ ನಟ ಸಾರ್ವಭೌಮಕ್ಕೆ ಪ್ರೇಕ್ಷಕ ವಲಯದಿಂದ ಭರ್ಜರಿ ಸ್ವಾತಗ ದೊರೆತಿದೆ. ಎಲ್ಲೆಂದರಲ್ಲಿ ಅಪ್ಪು ಅಭಿಮಾನಿಗಳು ನೆಚ್ಚಿನ ಸ್ಟಾರ್ ಗೆ ಶುಭಾಶಯ ತಿಳಿಸುತ್ತಿದ್ದಾರೆ. ಶತ ದಿನ ಕಾಣಲೆಂದು ಅಪ್ಪು ಅಭಿಮಾನಿಗಳು ಪೂಜಾ –ಕೈಂಕರ್ಯ ನಡೆಸುತ್ತಿದ್ದಾರೆ. ಅತೀ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಸದ್ಯ ಪುನೀತ್ ರಾಜ್ ಕುಮಾರ್ ಕಟೌಟ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ, ಬೃಹತ್ ಗಾತ್ರದ ಹೂವಿನ ಹಾರ ಹಾಕುತ್ತಿದ್ದರೆ, ಇಲ್ಲೊಂದು ಅಭಿಮಾನಿ ಬಳಗ ತಮ್ಮ ಸ್ಟಾರ್ ನಟನಿಗೆ ಪವರ್’ ಫುಲ್ ಆಗಿ ವಿಶೇಷರೀತಿಯಲ್ಲಿ ಅಭಿಷೇಕ ಮಾಡಿದ್ದಾರೆ.
ನಗರದ ತ್ರಿವೇಣಿ ಥಿಯೇಟರ್ನಲ್ಲಿ ಅಪ್ಪು ಪೋಸ್ಟರ್ಗೆ ಅಭಿಮಾನಿಗಳು ಬಿಯರ್ನಿಂದ ಅಭಿಷೇಕ ಮಾಡಿದ್ದಾರೆ. ಅಪ್ಪು ಹೊಸ ಅವತಾರಕ್ಕೆ ಜೈಕಾರ ಹಾಕಿದ್ದಾರೆ. ಇನ್ನು ನಟ ರಾಘವೇಂದ್ರ ರಾಜ್ಕುಮಾರ್ ಸಿನಿಮಾ ವೀಕ್ಷಿಸಲು ಪತ್ನಿ ಸಮೇತ ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ.ಅಂದಹಾಗೇ ಇದೇ ಫಸ್ಟ್ ಟೈಮ್ ಪುನೀತ್ ರಾಜ್’ಕಾರ್ ಸಿನಿಮಾ ಫೀಲ್ಡ್ ನಲ್ಲಿಯೇ ಈ ಪಾತ್ರ ನಿರ್ವಹಿಸುತ್ತಿದ್ದು, ಬಹಳಷ್ಟು ನಿರೀಕ್ಷೆ ಮೂಡಿಸಿತ್ತು. ಸಿನಿಮಾ ರಿಲೀಸ್ ಆಗೋತಕನವೂ ಮನದಲ್ಲಿ ಅದೇನೋ ಒಂದು ಭಯ ಕಾಡುತ್ತಿತ್ತು. ಸದ್ಯ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ ಎನ್ನುತ್ತಾರೆ ಪವರ್ ಡ್ಯಾನ್ಸರ್ ಪುನೀತ್ ರಾಜ್ಕುಮಾರ್. ಈಗಾಗಲೇ ಪೈರಸಿ ಆರಂಭವಾಗಿದ್ದು ಬೆಳಗ್ಗೆಯೇ ಫೆಸ್ಬುಕ್ ನ್ಲಲಿ ನಟ ಸಾರ್ವಭೌಮ ಸಿನಮಾ ಲೈವ್ ಬಂದಿದ್ದನು ಗಮನಸಿದ ಚಿತ್ರತಂಡ ಇದನ್ನು ಡಿಲೀಟ್ ಮಾಡಿ ವಾರ್ನ್ ಮಾಡಿದ್ದಾರೆ. ಸಿನಿಮಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ ಒಂದು ವೇಳೆ ಪಯರಸಿ ಆಗಿದ್ದನ್ನು ನೀವು ಕಂಡರೇ ಆ ಕಿಡಿಗಳನ್ನು ಹಿಡಿದು ಒದೀರಿ ಎಂದಿದದ್ಆರೆ.
Comments