ಕಣ್ಸನ್ನೆ ಆಯ್ತು ಈಗ ಲಿಪ್’ಕಿಸ್ : ವೈರಲ್ ಆಯ್ತು ಪ್ರಿಯಾವಾರಿಯರ್ ಹಾಟ್ ವಿಡಿಯೋ….!!!
ಕೇವಲ ಕಣ್ಸನ್ನೆ ಮೂಲಕ ರಾತ್ರಿ ಕಳೆದು ಬೆಳಗ್ಗೆ ಆಗೋದ್ರೊಳಗೆ ಮಲಯಾಳಿ ಹುಡುಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದಳು. ಬಿಗ್ ಸ್ಟಾರ್’ಗಳನ್ನೇ ತನ್ನತ್ತ ನೋಡುವಂತೆ ಮಾಡಿದ ಯಂಗರ್ ನಟಿ ಪ್ರಿಯಾ. ಈಗ ಮತ್ತೆ ಸುದ್ದಿಯಲ್ಲಿದ್ದಾಳೆ.ಜಸ್ಟ್ ಕಣ್ಸನ್ನೆ ಹೊಡೆದು ದೇಶದಲ್ಲೇ ಸೆನ್ಸೆಷನ್ ಕ್ರಿಯೇಟ್ ಮಾಡಿದ ಪ್ರಿಯಾ ಈ ಬಾರಿ ಲಿಪ್ ಕಿಸ್ ಮೂಲಕ ನ್ಯೂಸ್ ಆಗಿದ್ದಾಳೆ. ಪ್ರಿಯಾಳ ಕಣ್ಸನ್ನೆಗೆ ಎಷ್ಟೋ ಹುಡುಗರು ಹಾರ್ಟನಲ್ಲಿ ಚಿಟ್ಟೆ ಹಾರಿಸಿದ್ದಾರೆ. ಈಗ ಒಂದು ಕಿಸ್ ಸೀನ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.
ಸದ್ಯ ಪ್ರಿಯಾ ವಾರಿಯರ್ ತನ್ನ ಮೊದಲ ಸಿನಿಮಾ ಮಲಯಾಳಿಯ ‘ಓರು ಅಡಾರ್ ಲವ್’ ಚಿತ್ರದಲ್ಲಿ ನಟಿಸಿದ್ದು, ಅದ್ರಲ್ಲಿನ ಒಂದು ಕಿಸ್ ಸೀನ್‌ನ ವಿಡಿಯೋ ವೈರಲ್ ಆಗಿದೆ.ಸಿನಿಮಾದ ಹೀರೋ ರೋಷನ್ ಅಬ್ದುಲ್ಲಾ ಜೊತೆ ಲಿಪ್ ಕಿಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದೆ. ಕಳೆದ ವರ್ಷ ಕಣ್ಣು ಹೊಡೆದು, ಫ್ಲೈಯಿಂಗ್ ಕಿಸ್ ಮೂಲಕವೇ ಹುಡುಗರ ಎದೆಗೆ ಗುಂಡಿಟ್ಟಿದ್ಲು. ಇದೀಗ ಕಿಸ್ ಸೀನ್ ಮೂಲಕ ಮತ್ತೇ ಹಲ್‌ಚಲ್ ಎಬ್ಬಿಸಿದ್ದಾಳೆ. ಅಂದಹಾಗೇ ಸಿನಿಮಾ ಇನ್ನು ರಿಲೀಸ್ ಆಗಲೇ ಇಲ್ಲ. ಬಿಡುಗಡೆಯಾಗದ ಚಿತ್ರದ ಒಂದು ದೃಶ್ಯ ಇದ್ದಕ್ಕಿದ್ದ ಹಾಗೇ ಪ್ರಿಯಾಳನ್ನು ಎತ್ತರಕ್ಕೆ ಕರೆದೊಯ್ಯಿತು. ಇದೇ ಫೆ. 14 ರಂದು ಪ್ರೇಮಿಗಳ ದಿನದಂದೇ ಈ ಪ್ರೇಮ ಹಂದರವಿರುವ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ , ಜಾಹೀರಾತು ಅಂತಾ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ಪ್ರಿಯಾ ಕನ್ನಡದಲ್ಲೂ ನಟಿಸುತ್ತಿದ್ದಾರೆ. ಓರು ಆಡಾರ್ ಲವ್ ಸಿನಿಮಾ ಕನ್ನಡ ಮತ್ತು ತೆಲಗು ಭಾಷೆಗಳಿಗೂ ರಿಮೇಕ್ ಆಗುತ್ತಿದೆ. ಕಿರಿಕ್ ಲವ್ ಸ್ಟೋರಿ ಎಂಬ ಹೆಸರಿನ ಟೈಟಲ್ನೊಂದಿಗೆ ಕನ್ನಡಕ್ಕೂ ಬರ್ತಿದ್ದಾಳೆ ಮಲಯಾಳಂ ಚೆಲುವೆ ಪ್ರಿಯಾ.
Comments