ಕೆಜಿಎಫ್ ದಾಖಲೆ ಮುರಿದ 'ನಟ ಸಾರ್ವಭೌಮ' ಸಕ್ಸಸ್’ಗೆ ಯಶ್ ಹೇಳಿದ್ದೇನು ಗೊತ್ತಾ…?
ಇಂದು ನಟ ಸಾರ್ವಭೌಮ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಅಂದಹಾಗೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಕೆಜಿಎಫ್ ಸಿನಿಮಾ ಗಳಿಸಿದ ದೊಡ್ಡ ರೆಕಾರ್ಡ್ ನ್ನು ನಟ ಸಾರ್ವಭೌಮ ಮುರಿದಿದೆ. ಅಂದಹಾಗೇ ನಟ ಸಾರ್ವಭೌಮ ಕುರಿತಾಗಿ ತಮ್ಮ ಸಿನಿಮಾ ದಾಖಲೆಗಳನ್ನು ಮುರಿದಿರೋ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಏನು ಹೇಳಬಹುದೆಂಬ ಕುತೂಹಲಕ್ಕೆ ಸದ್ಯ ತೆರೆ ಬಿದ್ದಿದೆ. ಈಗ ಅವರೇ ಖುದ್ದು ಮಾತನಾಡಿದ್ದಾರೆ.
ದೇಶಾದ್ಯಂತ ಕೆಜಿಎಫ್ ಏಕಕಾಲದಲ್ಲಿ ರಿಲೀಸ್ ಆಗಿ ಭರ್ಜರಿ ಇನ್ನಿಂಗ್ಸ್ ಗಳಿಸಿತು. ಬಾಕ್ಸ್ ಆಫೀಸ್ ಸ್ಟಾರ್’ಗಳ ಸಿನಿಮಾಗಳನ್ನೇ ಹಿಂದಿಕ್ಕಿದ ಹೆಗ್ಗಳಿಕೆಗೆ ಕೆಜಿಎಫ್ ಬದ್ಧವಾಯಿತು. ಮೊದಲ ಬಾರಿಗೆ ದೇಶದ ಗಡಿ ದಾಟಿದ ಕನ್ನಡ ಸಿನಿಮಾ. ಇಷ್ಟೇ ಅಲ್ಲದೇ ಮೊದಲ ಬಾರಿಗೆ ಕನ್ನಡ ಸಿನಿಮಾಗೆ ಬೆಂಗಳೂರಿನಲ್ಲಿ 525 ಅರ್ಲಿ ಮಾರ್ನಿಂಗ್ ಶೋ ಕಂಡಿದ್ದು ಇದೇ ಫಸ್ಟ್. 600 ಥಿಯೇಟರ್’ಗಳಲ್ಲಿ ರಿಲೀಸ್ ಆಗಿದೆ. ಆದರೆ ಈ ಬ್ರೇಕ್ ನ್ನು ಮುರಿದು ನಟ ಸಾರ್ವಭೌಮ ಬೆಂಗಳೂರಿನಲ್ಲಿ 550 ಕ್ಕಿಂತ ಹೆಚ್ಚು ಅರ್ಲಿ ಮಾರ್ನಿಂಗ್ ಶೋಗಳಲ್ಲಿ ತೆರೆ ಕಾಣುತ್ತಿದ್ದು, ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಅಷ್ಟೇ ಅಲ್ಲದೇ 600 ಥಿಯೇಟರ್ಗಳಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೇ ಯಶ್ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಅಫಿಶೀಯಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ರಾಕಿಂಗ್ ಸ್ಟಾರ್, ವಿಶಿಷ್ಟ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡು , ನೃತ್ಯ, ಪಾತ್ರ ಪೋಷಣೆಯ ಮೂಲಕ ಅಪಾರ ಅಭಿಮಾನಿಗಳ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಪವರ್ ಸ್ಟಾರ್ ಅಪ್ಪು ಸರ್ ಅಭಿನಯದ ಚಿತ್ರ ನಟ ಸಾರ್ವ ಭೌಮ ಅಭಿಮಾನಿಗಳ ಮನತಣಿಸಿ, ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಕೆಜಿಎಫ್ ರಿಲೀಸ್ ಆದಾಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ವಿಶ್ ಮಾಡಿದ್ದಾರೆ. ಅಂದಹಾಗೇ ಕನ್ನಡ ಸಿನಿಮಾ ರಂಗ ನಟರಲ್ಲಿ ಪರಸ್ಪರ ಅಭಿಮಾನ ಗೌರವಕ್ಕೆ ಅಭಿಮಾನಿಗಳು ಒಳ್ಳೆ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದಾರೆ.
Comments