ಬಾಲಿವುಡ್’ನ ವಿವಾದಿತ ಲಿಪ್‍ಲಾಕ್’ಗಳು ಯಾವುವು ಗೊತ್ತಾ..? ಇಲ್ಲಿವೆ ನೋಡಿ ಬಾಲಿವುಡ್ ಬೆಡಗಿಯರ ವಿವಾದಿತ ಕಿಸ್ಸಿಂಗ್ ಪೋಟೋಸ್..!
ಬಾಲಿವುಡ್’ನಲ್ಲಿ ಅನೇಕ ಚಿತ್ರಗಳು ವಿವಾದಕ್ಕೆ ಸಿಲುಕಿಹಾಕಿಕೊಂಡಿರುವ ಎಷ್ಟೋ ಉದಾಹರಣೆಗಳಿವೆ. ಕೆಲವೊಮ್ಮೆ ಆ ವಿವಾದಕ್ಕೆ ಲಿಪ್ ಲಾಕ್ ಕೂಡ ಕಾರಣವಾಗಿರುವ ಎಷ್ಟೋ ನಿದರ್ಶನಗಳು ಇವೆ. ಹಲವಾರು ಕಲಾವಿದರು ಕಿಸ್ಸಿಂಗ್ ಸೀನ್‍ನಿಂದ ಸಾಕಷ್ಟು ಸುದ್ದಿ ಆಗಿದ್ದಲ್ಲದೇ ವಿವಾದಕ್ಕೂ ಕೂಡ ಸಿಲುಕಿದ್ದಾರೆ. ಕಿಸ್ ಮಾಡಿ ವಿವಾದಕ್ಕೆ ಸಿಲುಕಿದ ಬಾಲಿವುಡ್ ತಾರೆಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.. ಮುಂದೆ ಓದಿ
ದೀಪಿಕಾ ಪಡುಕೋಣೆ ಸಿದ್ಧಾರ್ಥ್ ಮಲ್ಯಯ ಹಾಟ್ ಕಿಸ್
ಐಪಿಎಲ್ ನಡೆಯುತ್ತಿದ್ದ ಸಮಯದಲ್ಲಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮತ್ತುಸಿದ್ಧಾರ್ಥ್ ಮಲ್ಯ 2013ರಲ್ಲಿ ಇಬ್ಬರು ಒಬ್ಬರನ್ನೊಬ್ಬರು ಕಿಸ್ ಮಾಡಿದ್ದಕ್ಕೆ ವಿವಾದಕ್ಕೆ ಸಿಲುಕಿದ್ದರು. ದೀಪಿಕಾ ಹಾಗೂ ಸಿದ್ಧಾರ್ಥ್ ಇಬ್ಬರು ಒಟ್ಟಿಗೆ ಮ್ಯಾಚ್ ವೀಕ್ಷಿಸುತ್ತಿದ್ದರು. ಆಗ ಆರ್ ಸಿಬಿ ಪಂದ್ಯದಲ್ಲಿ ಗೆಲುವನ್ನು ಸಾಧಿಸಿತ್ತು.. ಈ ವೇಳೆ ಸಿದ್ಧಾರ್ಥ್ ದೀಪಿಕಾರನ್ನು ಹಿಡಿದು ಕಿಸ್ ಮಾಡಿದ್ದರು ಈ ಕಿಸ್ ವಿವಾದಕ್ಕೆ ಕಾರಣವಾಗಿತ್ತು.
ಮಹೇಶ್ ಭಟ್ ಪೂಜಾ ಭಟ್ ಕಿಸ್ಸಿಂಗ್
ಮಹೇಶ್ ಭಟ್… ನಿರ್ದೇಶಕ ಹಾಗೂ ನಿರ್ಮಾಪಕರಾದ ಇವರು ತಮ್ಮ ಜೀವನದಲ್ಲಿ ಯಾವಾಗಲೂ ವಿವಾದದಲ್ಲೇ ಸಿಲುಕಿದ್ದರು. ಪ್ರತಿಯೊಂದು ವಿಷಯದಲ್ಲೂ ಕೂಡ ವಿವಾದದಲ್ಲೆ ಸಿಲುಕಿಹಾಕಿಕೊಂಡಿದ್ದರು. ಮಹೇಶ್ ಭಟ್ ಸ್ಟಾರ್ ದಷ್ಟ್ ಮ್ಯಾಗಜೀನ್‍ಗಾಗಿ ಮಹೇಶ್ ಹಾಗೂ ಪೂಜಾ ಲಿಪ್ ಲಾಕ್ ಸೀನ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ ಮ್ಯಾಗಜೀನ್ ಕವರ್ ಪೇಜ್‍ನಲ್ಲಿ ಹಾಕಲಾಗಿತ್ತು. ಆಗ ಮಗಳ ಜೊತೆ ಲಿಫ್ಲಾಕ್ ಮಾಡಿದ್ದಾರೆ ಎಂದು ಸಾಕಷ್ಟು ವಿವಾದವೇ ಆಗಿತ್ತು. ಪೂಜಾ ನನ್ನ ಮಗಳು ಆಗಿಲ್ಲದಿದ್ದರೆ ನಾನು ಆಕೆಯನ್ನೇ ಮದುವೆಯಾಗುತ್ತಿದ್ದೆ ಎಂದು ಹೇಳಿಕೆ ನೀಡಿ ಮತ್ತಷ್ಟು ಜನರ ವಿರೋಧಕ್ಕೆ ಕಾರಣರಾದರು.
ರಾಖಿ ಸಾವಂತ್- ಮೀಕಾ ಸಿಂಗ್ ಹಾಟ್ ಲಿಪ್ ಲಾಕ್
ರಾಖಿ ಸಾವಂತ್ ಅವರು 2007ರಲ್ಲಿ ಮೀಕಾ ಸಿಂಗ್ ಅವರ ಬರ್ತ್ ಡೇ ಪಾರ್ಟಿಗೆ ಹೋಗಿದ್ದ ಸಮಯದಲ್ಲಿ ಮೀಕಾ, ರಾಖಿ ಸಾವಂತ್‍ನನ್ನು ಬಲವಂತವಾಗಿ ಎಳೆದು ಕಿಸ್ ಮಾಡಿದ್ದು ಸಾಕಷ್ಟು ವಿವಾದವನ್ನೆ ಸೃಷ್ಟಿಸಿತ್ತು. ಅಲ್ಲದೇ ರಾಖಿ ಸಾವಂತ್, ಮೀಕಾ ಅವರ ಮೇಲೆ ಸಿಟ್ಟಿಗೆದ್ದು ಪೊಲೀಸ್ ಮೆಟ್ಟಿಲನ್ನು ಕೂಡ ಹತ್ತಿದ್ದರು.
Comments