ನೀವು ಆ ಸಿನಿಮಾ ನೋಡದೇ ಇದ್ರೆ ಖಂಡಿತಾ 'ಅದನ್ನು' ಮಿಸ್ ಮಾಡ್ಕೊಳ್ತೀರೀ…? ಅಪ್ಪು ಹೀಗೆ ಹೇಳಿದ್ಯಾಕೆ..?

ಅಪ್ಪನ ಸಿನಿಮಾಗಳನ್ನು, ಅವರ ಬಿರುದುಗಳನ್ನು ನನ್ನ ಸಿನಿಮಾಗಳ ಟೈಟಲ್ ಆಗಿ ಇಟ್ಟರೆ ನನಗೆ ನಿಜವಾಗಲೂ ಭಯ ಕಾಡುತ್ತೆ. ಆದರೂ ಅಪ್ಕನ ಆಶೀರ್ರ್ನಾವಾದದೊಂದಿಗೆ ಕರ್ನಾಟಕದ ಜನರ ಆಶೀರ್ವಾದ ನಮಗೆ ಇರುತ್ತದೆ ಎಂದಿದ್ದಾರೆ. ನಾಳೆ ನಾಡಿನಾದ್ಯಂತ ನಟ ಸಾರ್ವಭೌಮ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ಕುರಿತಾಗಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅಪ್ಪು ಕೆಲ ಮಾಹಿತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೇ ಈ ಸಂದರ್ಶನವೊಂದರಲ್ಲಿ ತಮ್ಮ ಅಣ್ಣನ ಮಗ ರಾಘವೇಂದ್ರ ರಾಜ್’ಕುಮಾರ್ ಅವರ ಪುತ್ರ ಯುವ ಬಗ್ಗೆ ಮಾತನಾಡಿದ್ದಾರೆ.
ತಾನು ಆಡಿಸಿದ ಮಗ,ಆತ ದೊಡ್ಡ ಸ್ಟಾರ್ ಆಗ್ತಾನೆ ಅನ್ನೋ ಭರವಸೆ ಇದೆ. ನನಗಿಂತಲೂ ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ. ಸದ್ಯ ನಮ್ಮ ಕುಟುಂಬದಿಂದ ಮತ್ತೊಂದು ಜನರೇಷನ್ ಸಿನಿಮಾ ಇಂಡಸ್ಟ್ರಿಗೆ ಬರುತ್ತದೆ. ರಾಮ್ ಕುಮಾರ್ ಮಕ್ಕಳು, ರಾಘವೇಂದ್ರ ರಾಜ್ ಕುಮಾರ್ ಮಕ್ಕಳು ಸದ್ಯ ಸ್ಯಾಂಡಲ್’ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆಂದು ಹೇಳಿದ್ದಾರೆ. ಅವರಿಗೆಲ್ಲಾ ನಾನು ಚಿಕ್ಕಪ್ಪನಾಗಿ, ಮಾಮನಾಗಿ ಬೆಸ್ಟ್ ವಿಶ್ ಮಾಡ್ತೀನಿ ಅಷ್ಟೆ. ಸಿನಿಮಾ ಅಭಿನಯ ಮಾಡುವಾಗ ನನ್ನಿಂದ ಟಿಪ್ಸ್ ಪಡೆದುಕೊಳ್ತಾರೆ ಎಂದರು.ಇನ್ನು ಪುನೀತ್ ರಾಜ್ ಕುಮಾರ್ ಅಂದ್ರೆ ಡ್ಯಾನ್ಸ್. ಒಂದೊಂದು ಸಿನಿಮಾದಲ್ಲಿಯೂ ಪುನೀತ್ ಸಿಗ್ನೇಚರ್ ಡ್ಯಾನ್ಸ್ ಇರುತ್ತೆಇದರ ಬ್ಗಗೆ ಹೇಳಿ ಎಂದಾಗ ಅಪ್ಪು... ಅಂದಹಾಗೇ ನಟ ಸಾರ್ವಭೌಮ ಸಿನಿಮಾದಲ್ಲಿ ಎದೆ ಝಲ್ಲೆನಿಸುವ ನೃತ್ಯವಿದೆ. ಸಿನಿಮಾ ನೋಡದೇ ಇದ್ದರೇ ಅದನ್ನು ಖಂಡಿತಾ ಅಭಿಮಾನಿಗಳು ಮಿಸ್ ಮಾಡ್ಕೊಳ್ತಾರೆ ಎಂದರು. ಎಲ್ಲಿವರೆಗೂ ಬಾಡಿನ ಬೆಂಡ್ ಮಾಡಕ್ಕಾಗುತ್ತೋ ಅಲ್ಲಿವರೆಗೂ ಚೆನ್ನಾಗಿ ಮೂವ್ ಮಾಡಿಬಿಡ್ಬೇಕು ಅಷ್ಟೇ.
ನನ್ನ ಅರ್ಧ ವಯಸ್ಸಾಗಿರೋ ಹುಡುಗರೇ ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಅವರನ್ನ ನೋಡಿದಾಗಲೆಲ್ಲಾ ನಾನು ಇನ್ನು ಚೆನ್ನಾಗಿ ಡ್ಯಾನ್ಸ್ ಮಾಡಿಬಿಡಬೇಕಾಗುತ್ತೆ. ಅವರನ್ನೆಲ್ಲಾ ನೋಡಿದಾಗ ನಾವಿನ್ನೂ ಚೆನ್ನಾಗಿ ಡ್ಯಾನ್ಸ್ ಮಾಡಬೇಕು ಅನ್ನಿಸುತ್ತೆ .ಡ್ಯಾನ್ಸ್‌ಗೆ ನನಗೆ ಇನ್ಸ್‌ಪಿರೇಶನ್ ಶಿವಣ್ಣನೇ. ನಾನೇನ್ ಡ್ಯಾನ್ಸ್ ಮಾಡ್ತೀನಿ. ನಮ್ಮ ಅಣ್ಣ ಇನ್ನೂ ಎಗರಿ ಎಗರಿ ಕುಣಿತಾರೆ. ಕೆಲವೊಂದು ಡ್ಯಾನ್ಸ್ ಮೂವ್ಸ್ ಕೆಲವೊಮ್ಮೆ ಕಷ್ಟವಾಗಿದ್ದಿದೆ. ಪ್ರ್ಯಾಕ್ಟಿಸ್ ಮಾಡಿದಷ್ಟು ಸುಲಭವಾಗಿ ಡ್ಯಾನ್ಸ್ ಮಾಡ್ಬೋದು’ ಅಂತಾರೆ ಅಪ್ಪು. ಇದಿಷ್ಟೇ ಅಲ್ಲ, ಚಿತ್ರದ ಹಲವು ವಿಶೇಷತೆಗಳ ಬಗ್ಗೆ ಅಪ್ಪು ಸಂದರ್ಶನದಲ್ಲಿ ಮಾತನಾಡಿದ್ದಾರೆ.ನಟ ರಚಿತಾ ಬಗ್ಗೆ ಮಾತನಾಡಿದ ಅವರು, ನನಗೆ ರಚಿತಾರೊಟ್ಟಿಗೆ ಇದು ಎರಡನೇ ಸಿನಿಮಾ. ಯಾವಾಗಲು ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುತ್ತಾರೆ. ಟೆಲಿವಿಷನ್ ಆ್ಯಡ್, ಪಬ್ಲಿಕ್ ಕಾರ್ಯಕ್ರಮ ಸಿನಿಮಾಗಳಲ್ಲಿ ಒಂದಿಲ್ಲೊಂದರಲ್ಲಿ ಬ್ಯುಸಿಯಾಗಿರುತ್ತಾರೆ. ನನಗೆ ಆಕೆ ಬ್ಯುಸಿಯಾಗಿರೋದೇ ಇಷ್ಟ ಅಂತಾರೆ ಅಪ್ಪು.
Comments