ನಟಿ ರಾಧಿಕಾ ಪಂಡಿತ್’ಗೆ ಇಂದು ಸ್ಪೆಷಲ್ ಡೇ ಅಂತೆ..ಯಾಕೆ ಗೊತ್ತಾ..?
ನಟಿ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅಂದಹಾಗೇ ತಮ್ಮ ಮನೆಯಲ್ಲಿ ಅತಿಯಾಗಿ ಪ್ರೀತಿಸುವ ಇಬ್ಬರ ಹುಟ್ಟುಹಬ್ಬವನ್ನು ಒಂದೇ ದಿನದಲ್ಲಿ ಸೆಲೆಬ್ರೇಟ್ ಮಾಡಿ ಅಭಿಮಾನಿಗಳೊಟ್ಟಿಗೆ ಖುಷಿ ಹಂಚಿಕೊಂಡಿದ್ದಾರೆ. ಅಂದಹಾಗೇ ಒಂದೇ ದಿನ ಬಂದಿರುವ ತಮ್ಮ ಅಮ್ಮ ಮತ್ತು ಸಹೋದರನ ಮಗಳ ಬರ್ತ್ ಡೇ ಯನ್ನು ಒಂದೇ ದಿನದಲ್ಲಿ ಆಚರಿಸಿದ್ದಾರೆ.
“ಇಂದು ವಿಶೇಷವಾದ ದಿನವಾಗಿದೆ. ಯಾಕೆಂದೆರೆ ಈ ವರ್ಷ ನಮ್ಮ ಮನೆಯ ಇಬ್ಬರ ಸದಸ್ಯರ ಹುಟ್ಟುಹಬ್ಬವನ್ನು ಒಂದೇ ದಿನ ಆಚರಿಸುತ್ತಿದ್ದೇವೆ. ನಮ್ಮ ಅಮ್ಮ ಮತ್ತು ನನ್ನಣ್ಣನ ಮಗಳು ರಿಯಾ ಬರ್ತ್ ಡೇ ಸೇಮ್ ದಿನವಾಗಿದೆ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ. ಇದರ ಜೊತೆಗೆ ಇಂದಿಗೆ ರಿಯಾಗೆ ಒಂದು ವರ್ಷವಾಗಿದೆ. ಅಮ್ಮ ನೀವೇ ನನಗೆ ಪ್ರಪಂಚ, ನಾನು ನಿಮ್ಮಂತೇ ಉತ್ತಮ ತಾಯಿ ಎಂದು ಭಾವಿಸುತ್ತೇನೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಹ್ಯಾಪಿ ಬರ್ತ್ ಡೇ ಅಮ್ಮ” ಎಂದು ಬರೆದು ವಿಶ್ ಮಾಡಿದ್ದಾರೆ.ನಟಿ ರಾಧಿಕಾ ಪಂಡಿತ್ ಅವರ ತಾಯಿ ಹುಟ್ಟುಹಬ್ಬ ಮಂಗಳವಾರ ಇತ್ತು. ಅದೇ ಸಂಭ್ರಮದಲ್ಲಿ ಅಂದೇ ಅವರ ಅಣ್ಣ ಗೌರವ್ ಪಂಡಿತ್ ಮಗಳು ರಿಯಾ ಬರ್ತ್ ಡೇ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಫೋಟೋ ಹಾಕಿ ಶುಭಾಶಯವನ್ನು ತಿಳಿಸಿದ್ದಾರೆ ರಾಧಿಕಾ ಅವರು.
ಜೊತೆಗೆ ರಾಧಿಕಾ ಅವರು ಸೀಮಂತಾ ಕಾರ್ಯಕ್ರಮದಲ್ಲಿ ಅಮ್ಮನ ಜೊತೆಗೆ ತೆಗೆಸಿಕೊಂಡಿದ್ದ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದರ ಮೂಲಕ ವಿಶಸ್ ತಿಳಿಸಿದ್ದಾರೆ. ಹಾಗೂ ಅಮ್ಮ ರಿಯಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಂದಹಾಗೇ ರಾಧಿಕಾ ಅವರ ಸಹೋದರ ಅಮೆರಿಕಾದ ಚಿಕಾಗೋದಲ್ಲಿ ನೆಲೆಸಿದ್ದಾರೆ.
Comments