ರೀಲ್ ಗಂಡನ ಜೊತೆ ರಿಯಲ್ ಆಗಿ ಸಪ್ತಪದಿ ತುಳಿಯುತ್ತಿದ್ದಾರೆ ಈ ನಟಿ..!
ಸಿನಿಮಾ ಫೀಲ್ಡ್’ನಲ್ಲಿ ಸಾಲು ಸಾಲು ಮದುವೆಗಳು ಆಗುತ್ತಿವೆ.ಇತ್ತೀಚಿಗೆ ಸೀರಿಯಲ್ ನಟರಾದ ಜಗನ್, ಅಗ್ನಿಸಾಕ್ಷಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಸದ್ಯ ಮದುವೆ ತಯಾರಿನಲ್ಲಿದ್ದಾರೆ. ಇದೀಗ ಅದೇ ಸಾಲಿಗೆ ಮತ್ತೋವ್ರ ಕಿರುತೆರೆಯ ನಟ –ನಟಿ ಸೇರಿಕೊಳ್ಳುತ್ತಿದ್ದಾರೆ. ಕುಲವಧು’ ಧಾರಾವಾಹಿಯ ಮೂಲಕ ವಚನಾ ಅಲಿಯಾಸ್ ಅಮೃತಾ ಸೀರಿಯಲ್ ಹುಡುಗನ ಜೊತೆಗೆ ಮದುವೆಯಾಗುತ್ತಿದ್ದಾರೆ.
ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದ ನಟನ ಜೊತೆ ಅಮೃತಾ ಸಪ್ತಪದಿ ತುಳಿಯುತ್ತಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಸೀರಿಯಲ್’ನಲ್ಲಿ ಮುಖ್ಯ ಭೂಮಿಕೆಯಲ್ಲಿ ಪಾತ್ರ ವಹಿಸಿದ್ದ ನಟ ರಘು ಜೊತೆ ಹೊಸ ಬಾಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈಗಾಗಲೇ ಈ ಕಿರುತೆರೆಯ ಸ್ಟಾರ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆಯ ದಿನಾಂಕವನ್ನು ಗೊತ್ತು ಮಾಡಿದ್ದಾರೆ. ಮೇ 12 ಮತ್ತು 13 ರಂದು ಮದುವೆಯಾಗುವ ಸಾಧ್ಯತೆ ಇದೆ. ಮದುವೆಯ ಬಗ್ಗೆ ರಘು ಅವರೇ ತಮ್ಮ ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ. ‘ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆ ಗೆದ್ದಿದ್ದ ಜೋಡಿ ರಿಯಲ್ ಲೈಫ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಧಾರವಾಹಿಯಲ್ಲಿ ಐಶ್ವರ್ಯ ಮತ್ತು ರಂಗೇಗೌಡ ಪಾತ್ರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರಿಗೆ ‘ಬೆಸ್ಟ್ ಜೋಡಿ’ ಅವಾರ್ಡ್ ಕೂಡ ಬಂದಿತ್ತು.
ಸೀರಿಯಲ್ ನ್ಲಲಿ ಗಂಡ ಹೆಂಡತಿಯಾಗಿ ಪಾತ್ರ ಮಾಡುತ್ತಿದ್ದೆವು. ಸಮಯ ಸಿಕ್ಕಾಗ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು. ಸೀರಿಯಲ್ ಪ್ರಾಜೆಕ್ಟ್ ಬಳಿಕ ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿಯಾದೆವು. ಆ ನಂತರ ಇಬ್ಬರು ಒಮ್ಮೆ ಭೇಟಿಯಾದಾಗ ಪರಸ್ಪರ ಭಾವನೆಗಳನ್ನು ಹಂಚಿಕೊಂಡೆವು.ಮದುವೆ ತೀರ್ಮಾನಕ್ಕೆ ಬಂದೆವು. ನನ್ನ ಜೀವನದಲ್ಲಿ ಅಮೃತಾ ಬರುತ್ತಾರೆ ಎಂದುಕೊಂಡಿರಲಿಲ್ಲ. ಅವರು ವೃತ್ತಿ ಜೀವನದಲ್ಲಿ, ವೈಯಕ್ತಿಕ ಜೀವನದಲ್ಲೂ ಸದಾ ನನ್ನ ಬೆಂಬಲಕ್ಕೆ ನಿಂತಿದ್ದರು. ನಾವಿಬ್ಬರು ಪರಸ್ಪರ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡ ಬಳಿಕ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದೆವು. ಕೊನೆಗೆ ನಮ್ಮ ಕುಟುಂಬಕ್ಕೆ ಪ್ರೀತಿ ವಿಚಾರವನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆದು ಗುರು-ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ರಘು ತಮ್ಮ ಪ್ರೀತಿ ಪಯಣದ ಬಗ್ಗೆ ತಿಳಿಸಿದ್ದಾರೆ.
Comments