ಹೀಗೂ ಉಂಟಾ…!!! 18 ವರ್ಷದ ನಟನನ್ನೇ ಅತ್ಯಾಚಾರ ಮಾಡಿದ 35 ವರ್ಷದ ಸ್ಟಾರ್ ನಟಿ…!!!

ಅಂದಹಾಗೇ ಸಿನಿಮಾದಲ್ಲಿ ತುಂಬಾ ಹೆಸರು ಮಾಡಿದ್ದ ಈ ಕಲಾವಿದೆ ಮೀಟೂ ನಲ್ಲಿ ಸುದ್ದಿಯಾಗಿದ್ದರು.ನನಗೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಆರೋಪ ಮಾಡಿದ್ದರು. ಆದರೆ ಸದ್ಯ ಈಕೆಯ ವಿರುದ್ಧ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಕೇಳಿದ್ರೆ ಶಾಕ್ ಆಗ್ತೀರಾ…! 35 ವರ್ಷದ ಈ ನಟಿ 18 ವರ್ಷದ ನಟರೊಬ್ಬರನ್ನು ಹೋಟೇಲ್ ನಲ್ಲಿ ರೇಪ್ ಮಾಡಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಈಕೆ ಯಾರು..?ರೇಪ್’ಗೊಳಗಾದ ಆ ನಟ ಯಾರು ಗೊತ್ತಾ…?
ಮೀಟೂ ದೇಶಾದ್ಯಂತ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಯ್ತು. ಸಿನಿಮಾ ತಾರೆಯರು ತಮಗಾದ ಲೈಂಗಿಕ ದೌರ್ಜನ್ಯ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಮತ್ತಷ್ಟು ನಟಿಯರು ತಮಗೆ ಲೈಂಗಿಕ ಕಿರುಕುಳ ಕೊಟ್ಟ, ಫ್ಲರ್ಟ್ ಮಾಡಿದ ಸ್ಟಾರ್ ನಟರ ಮತ್ತು ನಿರ್ದೇಶಕರ ಹೆಸರನ್ನು ಹೇಳಿ ಅವರ ಮೇಲೆ ದೂರು ದಾಖಲು ಮಾಡಿದ್ದರು. ಆ ಮೀಟೂ ಬಿರುಗಾಳಿ ಸ್ಯಾಂಡಲ್ ವುಡ್ ಗೂ ಬೀಸಿತು. ಕನ್ನಡ ಚಿತ್ರರಂಗದಲ್ಲಿಯೂ ಅನೇಕ ನಟಿಯರು ತಮಗೂ ಲೈಂಗಿಕ ದೌರ್ಜನ್ಯವಾಗಿದೆ ಎಂದರು. ಹಿರಿಯ ನಟಿ ಬಿ. ಜಯಶ್ರೀ ಕೂಡ ಮೀಟೂ ಸಂಬಂಧ ಸುದ್ದಿಯಾಗಿದ್ದರು.ಅದೇನೆ ಇರಲಿ. ಇಲ್ಲೊಬ್ಬ ಸ್ಟಾರ್ ನಟಿ, ಪ್ರತಿಭಾವಂತ ಕಲಾವಿದೆ ಎಂಬ ಹೆಸರು ಮಾಡಿರುವವರು ಕೆಲ ದಿಗಳ ಹಿಂದಷ್ಟೇ ನಿರ್ದೇಶಕರ ಮೇಲೆ ಮೀಟೂ ಎಂದಿದ್ದರು. ಆದರೆ ಇದೀಗ ಅವರ ವಿರುದ್ಧವೇ ರೇಪ್ ಆರೋಪ ಕೇಳಿ ಬಂದಿದೆ.
ಹಾಲಿವುಡ್ ನ ಹೆಸರಾಂತ ನಟಿ ಆಸಿಯಾ ಅರ್ಜೆಂಟೊ. ಹಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. 2013 ರಲ್ಲಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾಗ ಆಕೆಗೆ 35 ವರ್ಷ. ಇದೇ ಸಿನಿಮಾದಲ್ಲಿ ಮಗನಾಗಿ ಜಿಮ್ಮಿ ಬೆನೆಟ್ ಅಭಿನಯಿಸುತ್ತಿದ್ದರು. ಅವರ ವಯಸ್ಸು ಕೇವಲ 18 ವರ್ಷ ಅಷ್ಟೆ. ಹೋಟೇಲ್ ವೊಂದರಲ್ಲಿ ಸಿನಿಮಾ ವಿಚಾರವಾಗಿ ಆಶಿಯಾ ಅವರನ್ನು ಭೇಟಿ ಮಾಡಲು ಜಿಮ್ಮಿ ಬೆನೆಟ್ ಪೋಷಕರೊಂದಿಗೆ ಹೋಗುತ್ತಾರೆ. ಆಗ ಆಶಿಯಾ ಜಿಮ್ಮಿಯೊಂದಿಗೆ ಸಿನಿಮಾ ಬಗ್ಗೆ ಮಾತನಾಡೋದಿದೆ. ನೀವು ಹೊರಗೆ ಇರುವಂತೆ ಪೋಷಕರಿಗೆ ತಿಳಿಸಿ ಹೊರ ಕಳುಹಿಸಿದ್ದಾಳೆ. ಆತನನ್ನು ಅತ್ಯಾಚಾರ ಮಾಡಿ, ಇದನ್ನು ಯಾರಿಗೂ ಹೇಳದಂತೇ 3 ಕೋಟಿ ಹಣ ಕೊಟ್ಟಿದ್ದಾಳೆ. ಮೂರು ಕಂತುಗಳಲ್ಲಿ ಹಣ ಕೊಟ್ಟಿದ್ದಳಂತೆ.. ಆದರೆ ಈ ವಿಚಾರ ಇತ್ತೀಚೆಗೆ ಬಹಿರಂಗವಾಗಿದೆ. ಇನ್ನು ಇದರ ಬಗ್ಗೆ ಈಗ ಮಾತನಾಡಿದ ಜಿಮ್ಮಿ ಆಕೆ ಮತ್ತು ನನ್ನ ಕೆರಿಯರ್ ಬಗ್ಗೆ ಯೋಚನೆಡ ಮಾಡಿ ಹಣ ಪಡೆದುಕೊಂಡಿದ್ದೆ ಎಂದಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
Comments