ಅಂದು ಲಾಟರಿ ಮಾರುತ್ತಿದ್ದವಳು ಇಂದು ಫೇಮಸ್ ಸೆಕ್ಸಿ ನಟಿ…!!!

ಅಂದು ದರಂತಮಯ ಜೀವನ ನಡೆಸುತ್ತಿದ್ದವರು ಇಂದು ಟಾಪ್ ಮೋಸ್ಟ್ ಸೆಲೆಬ್ರಿಟಿಗಳಾಗಿದ್ದಾರೆ. ಜೀವನವೇ ಬೇಡವೆಂದು ಆತ್ಮಹತ್ಯೆಗೆ ಯತ್ನಿಸಿದ್ದವರು ಇಂದು ಇತರರಿಗೆ ಮಾದರಿಯಾಗಿದ್ದಾರೆ. ಕಷ್ಟದ ಜೀವನವನ್ನು ಸವೆಸುತ್ತಿದ್ದ ಅದೆಷ್ಟೋ ಮಂದಿ ಇಂದು ಕೋಟ್ಯಾಂತರ ಅಭಿಮಾನಿಗಳಿಗೆ ಸ್ಟಾರ್ ಆಗಿದ್ದಾರೆ. ಅಂದಹಾಗೇ ಇಲ್ಲೊಬ್ಬ ಫೇಮಸ್ ನಟಿಯೊಬ್ಬರು ಹಿಂದೆ ಲಾಟರಿ ಮಾರಿಕೊಂಡು ಜೀವನ ಮಾಡುತ್ತಿದ್ದಳಂತೆ.ಇಂದು ಈಕೆ ಸ್ಕ್ರೀನ್ ಮೇಲೆ ಬಂದರೆ ಹುಚ್ಚೆದ್ದು ಕುಣಿಯುವ ಅಭಿಮಾನಿಗಳೆಷ್ಟೋ….ಅಂದಹಾಗೇ ಬಾಲಿವುಡ್ ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ನೂರಾ ಫತೇಹಿ ಕಥೆ ಇದು.
ಈಕೆಗೆ ಇಂದು 27 ರ ಹುಟ್ಟುಹಬ್ಬದ ಸಂಭ್ರಮ.ನೂರಾ ಫತೇಹಿ ಮೂಲತಃ ಕೆನಡಾದವಳು. ನೂರಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 'ಬಿಗ್ ಬಾಸ್' ಮನೆಗೂ ಬಂದಿದ್ದಳು.ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ನೂರಾ, ವೃತ್ತಿಯ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾಳೆ. ಮೊದಲು ಕೆನಡಾದ ಮಾಲ್ ಒಂದರಲ್ಲಿ ನೂರಾ ಕೆಲಸ ಮಾಡ್ತಿದ್ದಳಂತೆ. ಅಂದಹಾಗೇ ಓದುವ ವಯಸ್ಸಿನಲ್ಲೇ ಆಕೆಗೆ ದೊಡ್ಡ ಜವಬ್ದಾರಿ ಇತ್ತಂತೆ. ಕೆಲಸ ಮಾಡುವ ಅನಿವಾರ್ಯ ಇತ್ತು ಆಕೆಗೆ.
ಹೈಸ್ಕೂಲಿನಲ್ಲಿರುವಾಗ್ಲೇ ಕೆಲಸ ಮಾಡುವುದು ಅನಿವಾರ್ಯವಾಗಿತ್ತಂತೆ. ಅಂಗಡಿಯೊಂದರ ಜವಾಬ್ದಾರಿಯನ್ನು ನೂರಾಗೆ ನೀಡಲಾಗಿತ್ತಂತೆ. ಆಕೆ ಮೊದಲ ಬಾರಿ ಪಡೆದ ಸಂಬಳ 1 ಸಾವಿರ ಡಾಲರ್ ಅಂತೆ. ಅಷ್ಟೇ ಅಲ್ಲದೇ ನೂರಾ ಟೆಲಿಕಾಲರ್ ಕೆಲಸ ಮಾಡಿದ್ದಳಂತೆ ನಟಿ. ಇದ್ರಲ್ಲಿ ಲಾಟರಿ ಮಾರಾಟ ಮಾಡಬೇಕಿತ್ತಂತೆ. ಸಂಬಳದ ಜೊತೆ ಕಮಿಷನ್ ಪಡೆಯುತ್ತಿದ್ದ ನೂರಾಗೆ ಆ ಕೆಲಸ ಒಗ್ಗಲಿಲ್ಲ. ಮೊದ ಮೊದಲು ಹೊಂದಾಣಿಕೆಯಲ್ಲಿದ್ದ ನೂರಾಗೆ ಆ ಸ್ಥಳ, ಪರಿಸರದ ಜನ ಹಿಡಿಸದ ಕಾರಣ ಕೆಲ ತಿಂಗಳಿನಲ್ಲಿಯೇ ಕೆಲಸ ಬಿಟ್ಟಿದ್ದಳಂತೆ.
ನಂತ್ರ ವೇಟರ್ ಕೆಲಸವನ್ನೂ ಮಾಡಿದ್ದ ನೂರಾ, ಡಾನ್ಸ್ ಏಜೆನ್ಸಿಯೊಂದಕ್ಕೆ ಸೇರಿದ್ದಳಂತೆ. ನೂರಾಗೆ ಅಲ್ಲಿಂದ ಅದೃಷ್ಟ ಖುಲಾಯಿಸಿತು. ನೋಡಲು ಸುಂದರವಾಗಿದ್ದ ನೂರಾಗೆ ಆ್ಯಕ್ಟಿಂಗ್, ಡ್ಯಾನ್ಸ್ ಕಷ್ಟವೆನಿಸಲಿಲ್ಲ. ಕ್ಯಾಮೆರಾ ಮುಂದೆ ಲೀಲಾಜಾಲವಾಗಿ ನಟಿಸುತ್ತಿದ್ದ ಈಕೆಗೆ ಭಾರತದ ಜಾಹೀರಾತೊಂದರಲ್ಲಿ ನಟಿಸಲು ಅವಕಾಶ ಸಿಕ್ತಂತೆ. ಆರಂಭದಲ್ಲಿ ಭಾಷೆ ಬರದೆ ತೊಂದರೆ ಅನುಭವಿಸಿದ್ದ ನೂರಾ, ನಂತರದ ದಿನಗಳಲ್ಲಿ ಕಾರ್ಯಕ್ರಮವೊಂದರ ನಿರೂಪಣೆ ಮಾಡಿದ್ದಳಂತೆ. ಸದ್ಯ ನೂರಾ, ಸಲ್ಮಾನ್ ಖಾನ್ 'ಭಾರತ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ನೂರಾ ಸದ್ಯ ಹಿಂದಿ ಸಿನಿಮಾದಲ್ಲಿ ಸೆಕ್ಸಿ ತಾರೆ ಎಂಬ ಹೆಸರು ಪಡೆದುಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಈಕೆ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಸಲ್ಮಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Comments