ಅಂದು ಸುಧಾ ಮೂರ್ತಿ ತಮ್ಮ ಮದುವೆಗೆ ಮಾಡಿದ ಖರ್ಚೆಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ !!!

ಇನ್ಫೋಸಿಸ್ ನ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿ ಸರಳ ಸಜ್ಜನಿಕೆಯ ವ್ಯಕ್ತಿ. ಅಂದಹಾಗೇ ಲಕ್ಷಾಂತರ ರ ಜನರಿಗೆ ಉದ್ಯೋಗ ನೀಡಿದ, ಇನ್ಫೋಸಿಸ್ ಅಂತಹ ದೊಡ್ಡ ಸಂಸ್ಥೆ ಹುಟ್ಟುಹಾಕಿದ ಸಂಸ್ಥಾಪಕಿ ಸುಧಾ ಅವರದ್ದು ಪ್ರೇಮ ವಿವಾಹ. ಸತಿ-ಪತಿ ಇಬ್ಬರು ಅಂದು ಚಿಕ್ಕದಾಗಿ ಆರಂಭಮಾಡಿದ್ದ ಸಂಸ್ಥೆ ಇಂದು ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿದೆ. ಅಂದಹಾಗೇ ಇತ್ತೀಚಿಗೆ ನಡೆದ ಸುತ್ತೂರು ಜಾತ್ರೆಯಲ್ಲಿ ಸುಧಾ ಒಂದಷ್ಟು ಕೆಲ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಮತ್ತು ನಾರಾಯಣ ಮೂರ್ತಿ ಇಬ್ಬರೂ ನಮ್ಮ ಮದುವೆ ಸರಳವಾಗಿರಬೇಕೆಂದು ನಿರ್ಧರಿಸಿದ್ದೆವು. ಅದರಂತೆಯೇ ನಾವು ಹೊಸ ಬಾಳಿಗೆ ಹೆಜ್ಜೆ ಇಟ್ಟೆವು. ಆಗ ನಮ್ಮ ಬಳಿ ಹಣವೂ ಇರಲಿಲ್ಲ, ಹಾಗೇ ಅದ್ಧೂರಿ ಮದುವೆ ನಮಗೆ ಬೇಕಾಗೂ ಇರಲಿಲ್ಲ. ನಮ್ಮ ಮದುವೆಗೆ ಆದ ಒಟ್ಟು ಖರ್ಚು ಎಷ್ಟು ಗೊತ್ತಾ…? ಎನ್ನುತ್ತಾರೆ ಸುಧಾ ನಾರಯಣ ಮೂರ್ತಿ.
ನಮ್ಮ ಮದುವೆಗೆ ಆದ ಒಟ್ಟು ಖರ್ಚು 800 ರೂಪಾಯಿ ಅಷ್ಟೆ ಎಂದಿದ್ದಾರೆ. ಅದರಲ್ಲೇ ನಾವು ಖುಷಿಯಾಗಿದ್ದೆವು. 1978ರ ಫೆ.10ರಂದು ನಮ್ಮಿಬ್ಬರ ಸೋದರ ಸಂಬಂಧಿಗಳನ್ನು ಮಾತ್ರ ಕರೆದು, ಬಾಡಿಗೆ ಮನೆಯ ಕೋಣೆಯಲ್ಲೇ, ನಮಗೆ ಗೊತ್ತಿದ್ದ ಮಂತ್ರವನ್ನು ನಾವೇ ಹೇಳಿಕೊಂಡು ಮದುವೆಯಾದೆವು. ನಮ್ಮ ಮದುವೆಗೆ ಆದ ಒಟ್ಟು ಖರ್ಚು 800 ರೂಪಾಯಿ. ಅದರಲ್ಲಿ 400 ರೂಪಾಯಿ ನನ್ನದು, ಕರಿಮಣಿ ಸರದಲ್ಲೇ ನನ್ನ ತಾಳಿ ಇತ್ತು. ಇಳಕಲ್ ಸೀರೆಯಷ್ಟೇ ನನ್ನ ಮದುವೆಗೆ ಖರೀದಿಸಿದ್ದು. ಹೆಚ್ಚಿನ ಜನರನ್ನೂ ಕರೆಯಲಿಲ್ಲ.
ಹೀಗಾಗಿ ಉಡುಗೊರೆಯೂ ಬರಲಿಲ್ಲ. ಇದನ್ನು ಕಂಡ ಕೆಲವರು ನಮ್ಮನ್ನು ಜುಗ್ಗ ಎಂದರು. ಆದರೂ ನಾವು ಎದೆ ಗುಂದಲಿಲ್ಲ’ ಎಂದು ಸ್ಮರಿಸಿದರು. ಅಲ್ಲದೆ, ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಾಲಗಾರರಾಗುತ್ತಾರೆ. ಇದರ ಬದಲು ಸರಳ ಮದುವೆ ಮಾಡಿ. ಮದುವೆ ನಂತರ ಬದುಕು ಕಟ್ಟಿಕೊಳ್ಳಲು ಉಪಯೋಗಿಸಿ ಎಂದು ಸಲಹೆ ನೀಡಿದರು. ಕೊಡಗಿನಲ್ಲಿ ಪ್ರವಾಹ ಉಂಟಾಗಿದ್ದ ನೆರೆ ಸಂತ್ರಸ್ತರಿಗೆ ತಾವೇ ಖುದ್ದು ಅವರಿಗೆ ಆಹಾರ ಸಾಮಾಗ್ರಿಗಳ ಪೊಟ್ಟಣ ಕಟ್ಟುತ್ತಿದ್ದುದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಯ್ತು. ಸರಳ ಜೀವನಕ್ಕೆ ಆಧ್ಯತೆ ಕೊಡುವ ನಾರಯಣ ಮೂರ್ತಿ ಈ ಶತಮಾನದ ಹೆಣ್ಣುಮಕ್ಕಳಿಗೆ ಮಾದರಿ.
Comments