ಕಾಂಗ್ರೆಸ್ ಸೇರಿದ ಬಿಗ್ ಬಾಸ್ ಸ್ಪರ್ಧಿ…!
ಕನ್ನಡದ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಸದ್ಯ ಮುಕ್ತಾಯವಾಗಿದೆ. ಬಿಗ್ ಬಾಸ್ ಮುಗಿದ ನಂತರ ಸ್ಪರ್ಧಿಗಳು ಅವರವರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಸಿನಿಮಾ, ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವರು ಅವರ ಪ್ರೊಫೆಷನಲ್ ಲೈಫ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೇ ಕನ್ನಡ ಬಿಗ್ ಬಾಸ್ ಸೀಸನ್-6 ಕಂಪ್ಲೀಟ್ ಆಗಿದೆ.
ಹಿಂದಿಯಲ್ಲಿ 12 ಸೀಸನ್ ಗಳನ್ನು ಪೂರೈಸಿದೆ. ಸದ್ಯ ಬಿಗ್ಬಾಸ್ ಸ್ಪರ್ಧಿಯೊಬ್ಬರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪ್ರಸಿದ್ಧ ಟೆಲಿವಿಷನ್ ನಟಿ, ಬಿಗ್ ಬಾಸ್ ಸೀಸನ್-11 ರ ವಿಜೇತೆ ಶಿಲ್ಪಾ ಶಿಂಧೆ ಇಂದು ಮುಂಬೈನಲ್ಲಿ ಕಾಂಗ್ರೆಸ್ ಸೇರಿದರು. ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಸಂಜಯ್ ನಿರುಪಮ್ ಶಿಂಧೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 1999ರಲ್ಲಿ ಟೆಲಿವಿಷನ್ ಗೆ ಪಾದಾರ್ಪಣೆಗೈದ ಶಿಂಧೆ ಭಾಬಿ ಜಿ ಘರ್ ಪರ್ ಹೇ ಮೂಲಕ ಪ್ರಸಿದ್ಧರಾದರು.2017ರಲ್ಲಿ ಹಿಂದಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಅವರು, ವಿನ್ನರ್ ಆಗಿ ಹೊರಹೊಮ್ಮಿದರು.
Comments