ಡಿಂಪಲ್ ಕ್ವೀನ್ ರಚಿತಾ ರಾಮ್ ಆಸೆ ಇನ್ನೂ ಈಡೇರಲಿಲ್ವಂತೆ...?

ಸ್ಯಾಂಡಲ್ವುಡ್’ನಲ್ಲಿ ಭರವಸೆಯ ನಾಯಕಿಯರಲ್ಲಿ ರಚಿತಾ ರಾಮ್ ಕೂಡ ಒಬ್ಬರು……ಈಕೆ ಸ್ಯಾಂಡಲ್ವುಡ್’ನ ಸ್ಟಾರ್’ಗಳ ಜೊತೆಯಲ್ಲಿ ಅಭಿನಯಿಸಿದ್ದಾರೆ..ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಧ್ರುವ ಸರ್ಜಾ, ದುನಿಯಾ ವಿಜಯ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜಕುಮಾರ್... ಹೀಗೆ ಸ್ಯಾಂಡಲ್ ವುಡ್ ನ ಟಾಪ್ ನಟರ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಕ್ರೀನ್ ಷೇರ್ ಮಾಡಿಕೊಂಡಿದ್ದಾರೆ...ಗಾಂಧಿನಗರದಲ್ಲಿ ಬಹು ಬೇಡಿಕೆಯ ಹಿರೋಹಿನ್ ಆಗಿ ಬೆಳೆದಿರುವ ರಚಿತಾ ರಾಮ್ ಗೆ ಒಂದು ಆಸೆ ತುಂಬಾ ದಿನಗಳಿಂದ ಇತ್ತಂತೆ... ರಾಜಕುಮಾರ್ ಜೊತೆಗೆ ಸಖತ್ತಾಗಿ ಸ್ಟೆಪ್ ಹಾಕಬೇಕು ಎಂಬುದು ರಚಿತಾ ರಾಮ್ ಆಸೆ ಆಗಿತ್ತಂತೆ..
ಪುನೀತ್ ರಾಜಕುಮಾರ್ ಜೊತೆ ಈಗಾಗಲೇ 'ಚಕ್ರವ್ಯೂಹ' ಹಾಗೂ 'ನಟ ಸಾರ್ವಭೌಮ' ಚಿತ್ರಗಳಲ್ಲಿ ರಚಿತಾ ರಾಮ್ ಅಭಿನಯಿಸಿದ್ದರು ಅವರ ಆಸೆ ಮಾತ್ರ ಈಡೇರಿಲ್ಲವಂತೆ. 'ಚಕ್ರವ್ಯೂಹ' ಹಾಗೂ 'ನಟ ಸಾರ್ವಭೌಮ' ಚಿತ್ರಗಳಲ್ಲಿ ಪುನೀತ್ ರಾಜಕುಮಾರ್ ಹಾಗೂ ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಹಾಡುಗಳು ಬಂದಿವೆ... ಆದರೆ ಫಾಸ್ಟ್ ಸಾಂಗ್ ಗೆ ಪುನೀತ್ ಜೊತೆ ಸ್ಟೈಲಿಶ್ ಸ್ಟೆಪ್ ಹಾಕುವ ಚಾನ್ಸ್ ರಚಿತಾ ರಾಮ್ ಗೆ ಇನ್ನು ಸಿಕ್ಕಿಲ್ಲ. ರಚಿತಾ ರಾಮ್ ರವರ ಈ ಆಸೆ ಯಾವಾಗ ಈಡೇರುತ್ತೆ ಗೊತ್ತಿಲ್ಲ. ಆದರೆ ''ಮುಂದೆ ಮತ್ತೆ ಪುನೀತ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕರೆ, ಅಪ್ಪು ಜೊತೆ ಸೂಪರ್ ಸ್ಟೆಪ್ ಹಾಕುವೆ'' ಎನ್ನುತ್ತಾರೆ ನಟಿ ರಚಿತಾ ರಾಮ್. ಒಟ್ಟಾರೆ ನಟಸಾರ್ವಭೌಮ ತೆರೆಗೆ ಬರಲು ದಿನಗಣನೆ ಪ್ರಾರಂಭವಾಗಿದೆ.ಅಪ್ಪು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.
Comments