ಗಾನ ಗಂಧರ್ವ ಎಸ್’ಪಿಬಿಗೆ ಮಾತೃ ವಿಯೋಗ...!!!
ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಿ ಬಾಲ ಸುಬ್ರಹ್ಮಣ್ಯಂ ಅವರ ತಾಯಿ ಶಕುಂತಲಮ್ಮ ನಿನ್ನೆ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 89 ವರ್ಷದ ಶಕುಂತಲಮ್ಮ ಅವರು ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೆಲ್ಲೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಂಗೀತ ಕಾರ್ಯಕ್ರಮದ ನಿಮಿತ್ತ ಬಾಲಸುಬ್ರಹ್ಮಣ್ಯಂ ಲಂಡನ್ ಗೆ ತೆರಳಿದ್ದಾರೆ. ತಾಯಿಯ ನಿಧನ ಸುದ್ದಿ ತಿಳಿಯುತ್ತಿದ್ದಂತೇ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಂದ ಹೊರಟಿದ್ದಾರೆ. ಶಕುಂತಲ್ಮಮ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಇತ್ತೀಚಿಗಷ್ಟೇ ಎಸ್ ಪಿ ಬಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಸಿನಿಮಾ ಹೀರೋಯಿನ್ ಗಳ ಬಗ್ಗೆ ಮಾತನಾಡಿದ ಅವರು ಕಾಂಟ್ರೋವರ್ಸಿಗೆ ಒಳಗಾಗಿದ್ದರು. ಸಿನಿಮಾ ನಾಯಕಿಯರಿಗೆ ಡ್ರೆಸ್ ಸೆನ್ಸ್ ಇಲ್ಲ.ಕಾರ್ಯಕ್ರಮಗಳಿಗೆ ಬರುವಾಗ ಹೇಗೆ ಬೇಕೋ ಹಾಗೇ ಬಟ್ಟೆ ಹಾಕ್ಕೋಂಡು ಬರುತ್ತಾರೆ. ಅವರು ಹಾಗೇ ಬಂದ್ರೇನೆ ಸಿನಿಮಾದಲ್ಲಿ ಅವಕಾಶ ಕೊಡುತ್ತಾರೆಂದು ತಿಳಿದುಕೊಂಡಿದ್ದಾರೆ. ಆದರೆ ಅದು ಸುಳ್ಳು ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಎಸ್ ಬಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು.
Comments