'ಇಂಡಸ್ಟ್ರಿಗೇ ಒಳ್ಳೇ ಹೀರೋನ ಕೊಟ್ಟೆ ಬಿಡಪ್ಪ'- ದ್ವಾರಕೀಶ್ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರಿದ್ದಾರೆ.. ಆದರೆ ಕೆಲವರು ಮಾತ್ರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಾರೆ…ಅದರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕೂಡ ಒಬ್ಬರು.. ಕೋಟಿಗೊಬ್ಬ ಎಂದರೆ ತಕ್ಷಣ ನೆನಪಾಗೋದು ವಿಷ್ಣು.. ಕೋಟಿಗೊಬ್ಬನೇ ವಿಷ್ಣುವನ್ನು ಹೋಲುವ ಮತ್ತೊಬ್ಬ ನಟ ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಯಶಸ್ವಿ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ 'ಪಡ್ಡೆ ಹುಲಿ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಬಹುದು..
'ಪಡ್ಡೆ ಹುಲಿ' ಸಿನಿಮಾದ ಸ್ಪೆಷಲ್ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತು. ಈ ಕಾರ್ಯಕ್ರಮಕ್ಕೆ ವಿಷ್ಣುವರ್ಧನ್ ಆಪ್ತಮಿತ್ರರಾದ ನಟ,ನಿರ್ಮಾಪಕ ದ್ವಾರಕೀಶ್, ಹಿರಿಯ ನಟ ಶಿವರಾಂ, ನಿರ್ದೇಶಕ ನಾಗಣ್ಣ, ರವಿ ಶ್ರೀವತ್ಸ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಸೇರಿದಂತೆ ಹಲವು ಗಣ್ಯರು ಬಂದಿದ್ದರು…ಕಾರ್ಯಕ್ರಮಕ್ಕೂ ಮೊದಲು ವೇದಿಕೆಯಲ್ಲಿ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗಣ್ಯರು ಅವರ ನೆನಪು ಮಾಡಿಕೊಂಡರು. 1972ರಲ್ಲಿ ನಾಗರಹಾವು ಚಿತ್ರ ಬಿಡುಗಡೆಯಾದಾಗ ಚಿತ್ರದ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ನಿರ್ಮಾಪಕರಾದ ವೀರಸ್ವಾಮಿ ಅವರು ಹಾಗೂ ನಾನು ಜೊತೆಯಲ್ಲಿ ಚಿತ್ರವನ್ನು ವೀಕ್ಷಿಸಿದೆವು. ಚಿತ್ರ ನೋಡಿದ ಮೇಲೆ ಪುಟ್ಟಣ್ಣ ಅವರ ಮೇಲೆ ಹೊಡೆದು ನಾನು ಹೇಳಿದೆ, 'ಇಂಡಸ್ಟ್ರಿಗೆ ಒಳ್ಳೆಯ ಹೀರೋನ ಕೊಟ್ಟೆ ಬಿಡಪ್ಪ' ಎಂದು ಹೇಳಿದೆ. ಕನ್ನಡ ಚಿತ್ರರಂಗದಲ್ಲಿ ಅತಿ ಸುಂದರ ನಟ ನನ್ನ ವಿಷ್ಣುವರ್ಧನ್ ಎಂದು ದ್ವಾರಕೀಶ್ ಭಾವುಕರಾದರು..
Comments