ರಾಕಿಬಾಯ್ ಮನೆ ಮತ್ತು 80 ಎಕರೆ ತೋಟ ಖರೀದಿಸಲು ಅಷ್ಟು ದೂರ ಹೋಗಿದ್ಯಾಕೆ..?
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಒಂದು ಕಡೆ ಮಗಳು ಮನೆಗೆ ಬಂದ ಸಂಭ್ರಮವಾದರೆ ಮತ್ತೊಂದು ಕಡೆ ಕೆಜಿಎಫ್ ಸಿನಿಮಾದ ಯಶಸ್ಸು… ಸಿನಿಮಾ ಯಶಸ್ಸಿನ ನಂತರ ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವ ಮೊದಲು ಕಿರಾತಕ 2 ಸಿನಿಮಾವನ್ನು ಯಶ್ ಯಾವಾಗ ಮಾಡ್ತಾರೆ? ಅಥವಾ ಕೆಜಿಎಫ್ ಸಕ್ಸಸ್ ಬಳಿಕ ಇಂತಹ ಸಿನಿಮಾ ಮಾಡೋದೇ ಇಲ್ವಾ? ಈ ಪ್ರಶ್ನೆಗೆ ರಾಕಿಬಾಯ್ ಉತ್ತರವನ್ನು ಕೂಡ ಕೊಟ್ಟಿದ್ದಾರೆ. ಮೊದಲು ಕೆಜಿಎಫ್ 2 ಮಾಡುತ್ತೇನೆ ಎಂದಿದ್ದಾರೆ.. ಆದರೆ ಈಗಿನ ವಿಷಯ ಏನ್ ಗೊತ್ತಾ..?
ನಟ ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿ ಮನೆ ಹಾಗೂ 80 ಎಕರೆ ತೋಟ ಖರೀದಿ ಮಾಡಿದ್ದಾರಂತೆ… ಹಾಸನ ದೊಡ್ಡಕೊಂಡಗೋಳ ಯಶ್ ತಾಯಿ ಪುಷ್ಪಾ ಅವರ ತವರಾಗಿದೆ.ಯಶ್ ಜನಿಸಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ. ಈ ನಂಟಿನಿಂದ ಹುಟ್ಟೂರು ಹಾಸನದಲ್ಲಿ ಮನೆ ಹಾಗೂ ತೋಟವನ್ನು ಅವರು ಖರೀದಿಸಿದ್ದಾರೆ. ಯಶ್ ಜನಿಸಿದ್ದು ಹಾಸನದಲ್ಲಿ, ಮೈಸೂರಿನಲ್ಲಿ ಬೆಳೆದು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿನಲ್ಲಿ ಮನೆ ಮಾಡುವ ಒತ್ತಾಯವಿತ್ತಾದರೂ, ಹುಟ್ಟೂರು ಹಾಸನದಲ್ಲಿ ಮನೆ ಮಾಡುವ ಆಸೆ ಇತ್ತು.. ಮನೆಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ 80 ಎಕರೆ ತೋಟ ಖರೀದಿಸಿದ್ದಾರಂತೆ…
Comments