ಇವರಿಬ್ಬರಲ್ಲಿ ಕೊಹ್ಲಿ ಪತ್ನಿ ಯಾರು : ದಂಗಾದ ವಿರಾಟ್ ಅಭಿಮಾನಿಗಳು...!!!

ಬಾಲಿವುಡ್ ತಾರೆ ಅನುಷ್ಕಶರ್ಮಾ ವಿದೇಶ ಪ್ರವಾಸದಲ್ಲಿದ್ದಾರಾ..?ತಮ್ಮ ಪತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪ್ರವಾಸ ಮಾಡುತ್ತಾ ಸುದ್ದಿಯಲ್ಲಿದ್ದರು.ಆದ್ರೆ ಈಗ ಅನುಷ್ಕಾ ಶರ್ಮ ಅವರನ್ನೇ ಹೋಲುವ ವಿದೇಶಿ ಗಾಯಕಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿರುವ ಫೋಟೋದಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಅಂದಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಪತ್ನಿ ಅನುಷ್ಕಾರನ್ನು ಹೋಲುವಂತಹ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಫೋಟೋ ನೋಡಿದ ಕೊಹ್ಲಿ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ.
ಹೌದು, ಇತ್ತಿಚಿಗಷ್ಟೆ ಅಮೆರಿಕಾದ ಗಾಯಕಿ ಜೂಲಿಯಾ ಮೈಕಲ್ಸ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಅವರು ಸೇಮ್ ಟು ಸೇಮ್ ಅನುಷ್ಕಾ ಶರ್ಮ ಅವರಂತೆ ಕಾಣಿಸುತ್ತಾರೆ. ಇದನ್ನು ನೋಡಿದ ಅಭಿಮಾನಿಗಳು ಇದೇನಪ್ಪಾ ಅನುಷ್ಕಾ ಯಾವಾಗ ಹೇರ್ ಕಲರ್ ಹೀಗೆ ಮಾಡಿಸಿದ್ರು,ಅಂತಾ ಕೊಹ್ಲಿಯನ್ನು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪೋಸ್ಟ್ ನೋಡಿ ಅನುಷ್ಕಾ ಅತ್ತಿಗೆ ಯಾವಾಗ ಹೆಸರು ಬದಲಾಯಿಸಿಕೊಂಡರು ಅಂತ ಅಭಿಮಾನಿಗಳು ವಿರಾಟ್ ಕೊಹ್ಲಿ ಕಾಲೆಳೆಯುತ್ತಿದ್ದಾರೆ.ಅಷ್ಟೇ ಅಲ್ಲದೆ ಪೋಸ್ಟ್ ನೋಡಿದ ಅಭಿಮಾನಿಗಳು ವಿದೇಶಿ ಗಾಯಕಿಯನ್ನು ಅನುಷ್ಕಾ ಶರ್ಮ ಅವರ ವಿದೇಶಿ ಅವತಾರ ಅಂತಾನೂ ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಅಂದಹಾಗೇ ಅನುಷ್ಕಾ ಡ್ಯೂಪ್ಲಿಕೇಟ್ ಅಂತಿದ್ದಾರೆ. ಅನುಷ್ಕಾ ಅವಳಿ ಸಹೊದರಿ ಎಂದು ಟ್ರೋಲ್ ಮಾಡುತ್ತಿದ್ದಾರೆ.
Comments