ಟಾಲಿವುಡ್’ಗೆ ಎಂಟ್ರಿಕೊಟ್ಟ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ…?
ಕಿರುತೆರೆಯ ಮೂಲಕ ಹೆಣ್ಣುಮಕ್ಕಳ ಹೃದಯಕ್ಕೆ ಲಗ್ಗೆ ಇಟ್ಟ ಹ್ಯಾಂಡ್ಸಮ್ ನಟ ಇವರು. ಬಿಗ್ ಬಾಸ್ ಸ್ಪರ್ಧಿಯು ಕೂಡ ಹೌದು. ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿ ಕರ್ನಾಟಕದ ಮನೆ ಮಾತಾಗಿದ್ದ ಇವರು ಸನ್ನಿ ಲಿಯೋನ್ ಜೊತೆಯೂ ಆ್ಯಕ್ಟ್ ಮಾಡಿದ್ದಾರೆ. ಅಂದಹಾಗೇ ಆ ಸ್ಮಾರ್ಟ್ ಹೀರೋ ಬೇರೆ ಯಾರು ಅಲ್ಲ, ಕನ್ನಡ ಕಿರುತೆರೆಯ ಜನರ ಫೇವರೀಟ್ ಧಾರವಾಹಿ ಲಕ್ಷ್ಮಿ ಬಾರಮ್ಮ ಸೀರಿಯಲ್’ನ ಹೀರೋ. ಮೊದಲು ಚಂದು ಪಾತ್ರ ಮಾಡುತ್ತಿದ್ದ ಚಂದನ್. ಸದ್ಯ ತೆಲುಗು ಕಿರುತೆರೆಯಲ್ಲೂ ಮಿಂಚೋಕೆ ರೆಡಿಯಾಗಿದ್ದಾರೆ.
ಬಿಗ್‌ಬಾಸ್ ಖ್ಯಾತಿಯ ಚಂದನ್ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮೊದಲು ಮಾಡಿದ ಚಿತ್ರ 'ಲವ್ ಯು ಆಲಿಯಾ' , ಇದರಲ್ಲಿ ಮಾದಕ ತಾರೆ ಸನ್ನಿ ಲಿಯೋನ್ ನೊಂದಿಗೆ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ರು. ಸದ್ಯ ಸರ್ವ ಮಂಗಳ ಮಾಂಗಲ್ಯ ಧಾರವಾಹಿಯಲ್ಲೂ ಚಂದನ್ ಅಭಿನಯಿಸುತ್ತಿದ್ದಾರೆ. ಈಗ ತಮಿಳು ಕಿರುತೆರೆಯಲ್ಲಿ ಮೂಡಿ ಬರಲಿರುವ ’ಸಾವಿತ್ರಮ್ಮಗಾರೂ ಅಬ್ಬಿ’ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಹೆಸರು ಬಾಲ್ರಾಜ್. ಬಲಶಾಲಿ ಕುಸ್ತಿಪಟೂ ಆದರೂ ಹುಡುಗಿಯರನ್ನು ಕಂಡರೆ ಮಾರು ದೂರ ಓಡುವ ಹುಡುಗನ ಪಾತ್ರ. ತುಂಬಾ ವಿಶೇಷವಾಗಿದ್ದೂ, ಕನ್ನಡ ಮತ್ತು ತೆಲುಗಿನಲ್ಲೂ ಮಾಡುವ ಆಸೆ ನನಗಿದೆ ಎಂದ ಚಂದನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ತೆಲಗು ಸಿನಿಮಾಗಳಲ್ಲಿ ನಟಿಸುವ ಇರಾದೆ ಹೊಂದಿರುವ ಚಂದನ್ ಆದಷ್ಟು ಬೇಗ ತೆಲಗು ಸಿನಿ ಜಗತ್ತಿಗೆ ಎಂಟ್ರಿಕೊಡಲಿದ್ದಾರೆ.
Comments