ವಿಷ್ಣು ಸ್ಮಾರಕ ಎಲ್ಲಿ ಎಂಬುದರ ಫೈನಲ್ ..!! ಹೇಳಿದ್ದು ಯಾರ್ ಗೊತ್ತಾ..?
ಸ್ಯಾಂಡಲ್ವುಡ್’ನ ಸಾಹಸಸಿಂಹ ವಿಷ್ಣುವರ್ಧನ್ ಅಗಲಿ ದಶಕಗಳೇ ಕಳೆಯುತ್ತಿವೆ… ಆದರೂ ಇನ್ನೂ ಕೂಡ ಅವರ ಸ್ಮಾರಕ ಆಗದೇ ಇರುವುದು ವಿಪರ್ಯಾಸ.. ಎಷ್ಟೋ ಮಾತು ಕಥೆಗಳು ಆದರೂ ಕೂಡ ಯಾಕೋ ಸ್ಮಾರಕದ ಕೆಲಸ ಮಾತ್ರ ಕೈಗೂಡಿಲ್ಲ.. ಇದರಿಂದ ಸಾಹಸಸಿಂಹನ ಅಭಿಮಾನಿಗಳಿಗೆ ನಿರಾಸೆಯಾಗಿದ್ದಂತೂ ಸುಳ್ಳಲ್ಲ… ಸ್ಯಾಂಡಲ್ವುಡ್ಗೆ ಒಳ್ಳೊಳ್ಳೆ ಸಿನಿಮಾಗಳನ್ನ ಕೊಟ್ಟ ಕೋಟಿಗೊಬ್ಬನಿಗೆ ಈ ರೀತಿಯಾಗುತ್ತಿರುವುದು ಸಿನಿಮಾರಂಗಕ್ಕೂ ಕೂಡ ಬೇಸರ ತಂದಿದೆ..
ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ಆಗಬೇಕೋ ಅಥವಾ ಮೈಸೂರಿನಲ್ಲಿ ಆಗಬೇಕೋ ಎಂಬ ಚರ್ಚೆ ಸಾಕಷ್ಟು ಬಾರಿಯಾದರೂ ಇನ್ನೂ ನಿಖರ ಮಾಹಿತಿ ತಿಳಿದಿರಲಿಲ್ಲ…ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಸ್ಥಾಪನೆಯಾಗುವುದು ಖಚಿತ ಎಂದು ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ ತಿಳಿಸಿದ್ದಾರೆ.ನಗರದಲ್ಲಿ ನಡೆದ 'ಹೆಜ್ಜೆ- ಗೆಜ್ಜೆ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ'ಯಲ್ಲಿ ಮಾತನಾಡಿದ ಅವರು, ನಾನು ಕಾರ್ಯಕ್ರಮಕ್ಕೆ ಆಗಮಿಸುವಾಗ ಆಪ್ತಮಿತ್ರ ಚಿತ್ರದ ಗೀತೆ, ವಿಡಿಯೋವನ್ನು ಪ್ರದರ್ಶಿಸಿದ್ದು ಅಪ್ಪಾಜಿ ನೆನಪು ತರಿಸಿತು. ಅಲ್ಲಿನ ಅಭಿಮಾನಿಗಳು ಸ್ಮಾರಕದ ಬಗ್ಗೆ ವಿಚಾರಿಸಿದ್ದಾರೆ. ಖಂಡಿತಾ ಮೈಸೂರಿನಲ್ಲಿ ಸ್ಮಾರಕ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು. ಒಟ್ಟಾರೆ ಸ್ಮಾರಕ ನಿರ್ಮಾಣ ಆದರೆ ಅಭಿಮಾನಿಗಳು ಖುಷಿಯಾಗಿರುತ್ತಾರೆ.
Comments