ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗೆ ಕಿಚ್ಚ ಹೇಳಿದ್ದೇನು ಗೊತ್ತಾ…?

ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾಗೆ ಗೋಲ್ಡನ್ ಸ್ಟಾರ್ ಗಣೇಶ್ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಏನಂದ್ರೆ, ಗಣೇಶ್ ಲುಕ್ ಈ ಸಿನಿಮಾದಲ್ಲಿ ಚೇಂಜ್ ಆಗಿದೆ. ಅಂದಹಾಗೇ ಗಡ್ಡ ಬಿಟ್ಟ ಗಣೇಶ್ ಪೋಸ್ಟರ್ ಬಗ್ಗೆ ಕೆಲ ಸ್ಟಾರ್’ಗಳು ಕಮೆಂಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಲುಕ್ ನ ಗಣೇಶ್ ಫೋಟೋಗಳು ಭರ್ಜರಿ ಸದ್ದು ಮಾಡುತ್ತಿವೆ. ಈಗಾಗಲೇ ಆ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಟಾಕ್ ಶುರುವಾಗುತ್ತಿದೆ.
ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಗಣೇಶ್ ಅಭಿಮಾನಿಗಳು ಹೊಸ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಅಂದಹಾಗೇ ಸಿನಿಮಾದ ಹೆಸರು 99 ಅಂತಾ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ, ನಾನು 99 ಸಿನಿಮಾ ಪೋಸ್ಟರ್ ನೋಡಿದೆ. ನಿಜವಾಗಲೂ ತುಂಬಾ ಚೆನ್ನಾಗಿದೆ.ನನಗೆ ಇಷ್ಟವಾಗಿದೆ, ನನ್ನ ಸಹೋದರ ಗಣೇಶ್ ಗೆ ಹಾರೈಸುತ್ತೇನೆ. ರಿಲೀಸ್ ಆಗೋವರೆಗೂ ಕಾಯ್ತೀನಿ, ಸಿನಿಮಾ ನೋಡೋಕೆ ಬಹಳಷ್ಟು ಕಾತುರನಾಗಿದ್ದೀನಿ ಎಂದು ಟ್ವೀಟ್ ಮಾಡಿದ್ದಾರೆ.ಅಂದಹಾಗೇ 99 ಸಿನಿಮಾ ತಮಿಳಿನ 96 ಚಿತ್ರ ರಿಮೇಕ್ ಆಗಿದ್ದು, ವಿಜುಯ್ ಸೇತುಪತಿ ಪಾತ್ರವನ್ನು ಗಣೇಶ್ ನಿರ್ವಹಿಸುತ್ತಿದ್ದಾರೆ. ಇನ್ನು ತ್ರಿಶಾ ಕ್ಯಾರೆಕ್ಟರ್’ನ್ನು ಭಾವನಾ ಮಾಡುತ್ತಿದ್ದು, ಸ್ಕೂಲ್ ಹುಡುಗನ ಪಾತ್ರದಲ್ಲಿ ಸಮೀಕ್ಷಾ ಮತ್ತು ಹೇಮಂತ ಆ್ಯಕ್ಟ್ ಮಾಡುತ್ತಿದ್ದಾರೆ.ಕೋಟಿರಾಯಲು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
Comments