ಸ್ಯಾಂಡಲ್ವುಡ್’ನ ಡಿ-ಬಾಸ್ ಹುಟ್ಟುಹಬ್ಬಕ್ಕೆ ಬರ್ತಿದೆ ಕಾಮನ್ ಡಿಪಿ..!! ಯಾವುದು ಗೊತ್ತಾ..?
ಸ್ಯಾಂಡಲ್ವುಡ್’ನ ಡಿ-ಬಾಸ್ ಬರ್ತಡೇಗೆ ಕೆಲವು ದಿನಗಳಷ್ಟೆ ಬಾಕಿ ಇವೆ.. ಈಗಾಗಲೇ ದರ್ಶನ್ ಬರ್ತ್ ಡೇ ಆಚರಣೆಗೆ ಅಭಿಮಾನಿಗಳ ತಯಾರಿಗಳು ಪ್ರಾರಂಭವಾಗಿ ಬಿಟ್ಟಿವೆ.. ಇದೀಗ ದರ್ಶನ್ ಅವರ ಕಾಮನ್ ಡಿಪಿ ಕೂಡ ರೆಡಿಯಾಗಿದೆ. ಇತ್ತಿಚಿಗೆ ಸ್ಟಾರ್ ಗಳ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಬಳಸುವ ಟ್ರೆಂಡ್ ಸಖತ್ತಾಗಿಯೇ. ದರ್ಶನ್ ಅಭಿಮಾನಿಗಳು ಕೂಡ ಇದನ್ನೆ ಮಾಡುತ್ತಿದ್ದಾರೆ.., ಡಿ-ಬಾಸ್ ನ ಕಾಮನ್ ಡಿಪಿ ನಿನ್ನೆಯಷ್ಟೆ ಹೊರಬಂದಿದೆ. ದರ್ಶನ್ ಫ್ಯಾನ್ಸ್ ಗಳ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆ ಡಿಪಿ ಟ್ರೆಂಡ್ ಆಗಿ ಬಿಟ್ಟಿದೆ.
ಡಿ ಬಾಸ್ ಕಾಮನ್ ಡಿಪಿಯನ್ನು 'ಯಜಮಾನ' ಸಿನಿಮಾದ ಫೋಟೋ ಬಳಸಿ ಮಾಡಲಾಗಿದೆ. ಡಿ ಬಾಸ್ ಜೊತೆಗೆ 'ಕುರುಕ್ಷೇತ್ರ' ದ ದುರ್ಯೋದನ ಕೂಡ ನಿಂತಿದ್ದಾನೆ. 'ಬಾಸ್ ಪರ್ವ.. ಸುಲ್ತಾನ್ ಸಂಭ್ರಮ' ಹೆಸರಿನಲ್ಲಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ… . ದರ್ಶನ್ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಕೊಳ್ಳುವುದಾಗಿ ಹೇಳಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನಲೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಾಗಿ ದರ್ಶನ್ ತಿಳಿಸಿದ್ದಾರೆ... ಅಭಿಮಾನಿಗಳಿಗೆ ನಿರಾಶೆ ಮಾಡಬಾರದೆಂದು ಸಿಂಪಲ್ ಆಗಿ ದರ್ಶನ್ ಬರ್ತ್ ಡೇ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ನಟನೆಯ 'ಯಜಮಾನ' ಸಿನಿಮಾದ ನಾಲ್ಕನೇ ಹಾಡು ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೂಪರ್ ಹಿಟ್ ಆಗಿವೆ..
Comments