ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾದ ಕನ್ನಡದ ಸ್ಟಾರ್ ನಟ..!! ಯಾರ್ ಗೊತ್ತಾ..?

ಸ್ಯಾಂಡಲ್’ವುಡ್ ತುಂಬಾ ಎತ್ತರಕ್ಕೆ ಬೆಳೆಯುತ್ತಿದೆ ಎನ್ನುವುದಕ್ಕೆ ಇತ್ತಿಚಿಗೆ ನಮ್ಮ ಕಣ್ಣ ಮುಂದೆ ಸಾಕಷ್ಟು ನಿದರ್ಶನಗಳು ಕಾಣಸಿಗುತ್ತವೆ.. ಚಂದನವನದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಇಡೀ ಚಿತ್ರರಂಗವೇ ಸ್ಯಾಂಡಲ್’ವುಡ್ ಕಡೆ ತಿರುಗಿ ನೋಡಿತ್ತು.. ಇದೀಗ ಮತ್ತೊಂದು ನಿದರ್ಶನಕ್ಕೆಚಂದನವನ ಕಾರಣವಾಗಿದೆ. ದೇಶದ ಕಿರುತೆರೆಯಲ್ಲಿ ತನ್ನ ಮನರಂಜನೆಯ ಮೂಲಕ ಹೆಸರು ಪಡೆದಿರುವ ಕಪಿಲ್ ಶರ್ಮಾ ಶೋದಲ್ಲಿ ಮೊದಲ ಬಾರಿಗೆ ಕನ್ನಡದ ಸ್ಟಾರ್ ನಟರೊಬ್ಬರು ಭಾಗಿಯಾಗಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿ ಸುದೀಪ್ ಟ್ವೀಟ್ ಕೂಡ ಮಾಡಿದ್ದಾರೆ. ಕಪಿಲ್ ಶೋನಲ್ಲಿ ಬಾಲಿವುಡ್ ಸಿನಿಮಾ ಸ್ಟಾರ್ ಗಳಿಂದ ಹಿಡಿದು ಹಲವು ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದಾರೆ.ಇಂತಹ ಶೋನಲ್ಲಿ ಸುದೀಪ್ ಭಾಗವಹಿಸಿದ್ದು, ಕಪಿಲ್ ಅವರ ಶೋನಲ್ಲಿ ನಗು ಸಾಕಷ್ಟಿದ್ದು, ಅಪರೂಪ ಸಂದರ್ಭ ಎಂಬಂತೆ ಹೆಚ್ಚು ನಕ್ಕಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ. ಕಪಿಲ್ ಶರ್ಮಾ, ನವಜೋತ್ ಸಿಂಗ್ ಸಿಧು, ಸುನಿಲ್ ಶೆಟ್ಟಿ ಜೊತೆಯಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಸಿನಿಮಾ ಪ್ರಚಾರಕ್ಕಾಗಿ ಶೋದಲ್ಲಿ ಭಾಗವಹಿಸುತ್ತಾರೆ.
ಕೆಲವೊಮ್ಮೆ ಕಾರ್ಯಕ್ರಮದ ಆಯೋಜಕರು ವಿಶೇಷ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಶೋ ಮಾಡುತ್ತಾರೆ. ಸದ್ಯ ಸುದೀಪ್ ಯಾವ ಸಿನಿಮಾ ಸಿನಿಮಾ ಪ್ರಚಾರಕ್ಕಾಗಿ ಶೋಗೆ ತೆರಳಿದ್ದಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಈ ಎಪಿಸೊಡ್ ಯಾವಾಗ ಪ್ರಸಾರವಾಗುತ್ತದೆ ಎಂಬುದನ್ನ ತಿಳಿಸಿಲ್ಲ.. ಒಟ್ಟಾರೆ ಸ್ಯಾಂಡಲ್ವುಡ್’ನ ಕಿಚ್ಚ ಈ ಷೋನಲ್ಲಿ ಕಾಣಿಸಿಕೊಂಡಿರುವುದು ಅಭಮಾನಿಗಳಿಗೆ ಸಂತಸವನ್ನು ತಂದಿದೆ ಎನ್ನಬಹುದು,
Comments