ದರ್ಶನ್’ರನ್ನು ನೋಡಲು ಓಡೋಡಿ ಬಂದ ಅಭಿಮಾನಿಗೆ ಸಿಕ್ಕಿದ್ದೇನು ಗೊತ್ತಾ..?!!!

ಅಂದಹಾಗೇ ಸ್ಟಾರ್ ನಟರನ್ನು ನೋಡಬೇಕು,ಅವರೊಂದಿಗೆ ಸೆಲ್ಫಿ ತೆಗಿಸಿಕೊಳ್ಳಬೇಕು. ಹ್ಯಾಂಡ್ ಶೇಕ್ ಮಾಡ ಬೇಕು,ಅವರನ್ನು ಮಾತಾಡಿಸಬೇಕು ಎಂದೆಲ್ಲಾ ಅದೆಷ್ಟೋ ಅಭಿಮಾನಿಗಳು ಬಾನೆತ್ತರದ ಕನಸು ಕಟ್ಟಿಕೊಂಡಿರುತ್ತಾರೆ. ಸ್ಯಾಂಡಲ್’ವುಡ್ ನೆಚ್ಚಿನ ನಟನನ್ನ ಒಮ್ಮೆ ನೋಡಬೇಕು.. ಬಾಯ್ತುಂಬಾ ಮಾತನಾಡಿಸಬೇಕು.. ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಬೇಕು.. ಎಂಬ ಆಸೆ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಅದಕ್ಕೆ ನೋಡಿ ಸ್ಟಾರ್ ಗಳು ಎಲ್ಲೇ ಹೋದರು ಅಭಿಮಾನಿಗಳ ದಂಡು ಅಲ್ಲಿ ನೆರೆದಿರುತ್ತದೆ.
ಕೆಲವು ದಿನಗಳ ಹಿಂದಷ್ಟೇ ಮಂಡ್ಯದ ಬಳಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶೂಟಿಂಗ್ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕಿಲೋ ಮೀಟರ್ ಗಟ್ಟಲೇ ಫಾಲೋ ಮಾಡಿ ಬೆನ್ನತ್ತಿದ್ದರಂತೆ. ಇದನ್ನು ಗಮನಿಸಿದ ಪುನೀತ್ ರಾಜ್ ಕುಮಾರ್ ಅವರು ಆ ಅಭಿಮಾನಿಯನ್ನು ನಿಲ್ಲಿಸಿ, ಅವರೊಂದಿಗೆ ಮಾತನಾಡಿಸಿ, ಸೆಲ್ಫಿ ತೆಗೆಸಿಕೊಂಡು,ಅವರಿಗೆ ಹೀಗೆಲ್ಲಾ ಫಾಲೋ ಮಾಡಿ ಹಿಂದೆ ಬೀಳಿ ಜೀವಕ್ಕೆ ಅಪಾಯ ತಂದುಕೊಳ್ಳ ಬೇಡಿ ಎಂದು ಬುದ್ಧಿ ಮಾತು ಹೇಳಿ ಕಳುಹಿಸಿದ್ದಾರೆ.
ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರನ್ನು ಅಭಿಮಾನಿಯೊಬ್ಬರು ಫಾಲೋ ಮಾಡಿಕೊಂಡು ಬಂದಿರುವ ಘಟನೆ ನಡೆದಿದೆ. ಬಿಳಿ ಬಣ್ಣದ ಕಾರಿನಲ್ಲಿ ದರ್ಶನ್ ಇದ್ದಾರೆಂಬ ಕ್ಲೂ ಅಭಿಮಾನಿ ಒಬ್ಬರಿಗೆ ಸಿಕ್ಕಿಬಿಟ್ಟಿದೆ. ಹೀಗಾಗಿ ದಾರಿಯಲ್ಲಿ ಅದೇ ಕಾರನ್ನು ಫಾಲೋ ಮಾಡ್ಕೊಂಡು ಹೋಗಿ ಕೂಗಿಕೊಂಡಿದ್ದಾರೆ. ಫಾಲೋ ಮಾಡಿಕೊಂಡು ಬಂದ ಅಭಿಮಾನಿಗೆ ಸ್ಪಂದಿಸಿದ ದರ್ಶನ್, ಕಾರಿನ ಗ್ಲಾಸ್'ನ್ನ ಕೆಳಗೆ ಇಳಿಸಿ ಅಭಿಮಾನಿಗೆ ನಮಸ್ಕಾರ ಹೇಳಿದ್ದಾರೆ. ಇದಕ್ಕೆ ಆ ಅಭಿಮಾನಿ ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳನ್ನು ಮನಸಾರೆ ಪ್ರೀತಿಸುವ ದರ್ಶನ್, ತಮ್ಮ ಫ್ಯಾನ್ಸ್ ಗೆ ಎಂದೂ ನೋವು ಮಾಡಿದವರಲ್ಲ. ಅಭಿಮಾನಿಗಳನ್ನು ಮನಸಾರೆ ಪ್ರೀತಿಸುವ ದರ್ಶನ್, ತಮ್ಮ ಫ್ಯಾನ್ಸ್ ಗೆ ಎಂದೂ ನೋವು ಮಾಡಿದವರಲ್ಲ ಎಂಬುದು ಇದನ್ನು ನೋಡಿದ್ರೆ ಗೊತ್ತಾಗುತ್ತದೆ.
Comments