ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ಸ್ಟಾರ್ ನಟಿ : ಗಾಸಿಪ್ಪೇ ಅವರ ಬಾಳಿಗೆ ಮುಳುವಾಯ್ತು…!!!

ಎಂತಹ ಸೆಲೆಬ್ರಿಟಿಗಳಾದರೂ ಯಾವುದಾದರು ನೋವು, ದುರಂತ ಅವರ ಲೈಫ್ ನಲ್ಲೂ ಆಗಿರುತ್ತೆ. ಇದಕ್ಕೆ ರಾಜಕಾರಣಿಗಳೇನು ಹೊರತಲ್ಲ, ಸಿನಿಮಾ ಸ್ಟಾರ್ ಗಳೇನು ಹೊರತಲ್ಲ. ಅಂತಹಾಗೇ ಖ್ಯಾತ ಸ್ಟಾರ್ ನಟಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ನಾನು ಇನ್ನೂ ಈ ಭೂಮಿ ಮೇಲೆ ಬದುಕಬಾರದು ಅಂತಾ ಯೋಚಿಸಿದ್ದರಂತೆ. ಬದುಕಲೇ ಬಾರದು ಅಂತಾ ಡಿಸೈಡ್ ಮಾಡಿದ್ದರಂತೆ. ಆ ನಟಿ ಬೇರೆ ಯಾರು ಅಲ್ಲಾ. ಬಹುಭಾಷಾ ಕಲಾವಿದೆ, ರಾಜಕಾರಣಿ ಜಯಪ್ರದಾ ಅವರು ತಾವು ಅನುಭವಿಸಿದ ನೋವಿನ ಕ್ಷಣಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ರಾಜಕಾರಣಿ ಅಮರ್ ಸಿಂಗ್ ರನ್ನು ನಾನು ಅಣ್ಣನೆಂದು ಭಾವಿಸಿದ್ದೆ.
ನಾನು ಅವರಿಗೆ ರಾಖಿ ಕಟ್ಟಿದ ಮೇಲೆಯೂ ನಮ್ಮ ಬಗೆಗಿನ ಅಪಪ್ರಚಾರ ನಿಲ್ಲಲಿಲ್ಲ. ನನ್ನ ನಡುವೆ ಸಂಬಂಧ ಇದೆ ಎಂದು ಬಿಂಬಿಸಲಾಗಿತ್ತು. ನನಗೆ ಅವರು ಆಪ್ತರಷ್ಟೇ, ಅದರ ಹೊರತಾಗಿ ನನ್ನ ಅವರ ಮಧ್ಯೆ ಮತ್ತೇನು ಇರಲಿಲ್ಲ.ಸಾಕಷ್ಟು ಜನರು ನನಗೆ ಸಹಾಯ ಮಾಡಿದ್ದಾರೆ. ಅವರಲ್ಲಿ ಅಮರ್ ಸಿಂಗ್ ಕೂಡ ಒಬ್ಬರು. ಅವರು ನನಗೆ 'ಗಾಢ್ ಫಾದರ್' ಎಂದು ಜಯಪ್ರದಾ ಹೇಳಿದ್ದಾರೆ. ಇನ್ನು ಸಮಾಜವಾದಿ ಹಿರಿಯ ನಾಯಕ ಅಜಂ ಖಾನ್ ವಿರುದ್ಧ ನೇರ ಆರೋಪ ಮಾಡಿರುವ ಜಯಪ್ರದಾ, ಆತ ನನ್ನ ಮೇಲೆ ಆ್ಯಸಿಡ್ ಎರಚುವ ಬೆದರಿಕೆ ಹಾಕಿದ್ದ. ನಿತ್ಯ ಭಯದಲ್ಲಿ ಜೀವಿಸುತ್ತಿದ್ದೆ ಎಂದಿದ್ದಾರೆ.
ನನ್ನ ಬಗ್ಗೆ ಅಪ ಪ್ರಚಾರಗಳು ಮಿಡಿಯಾದಲ್ಲಿ. ನನ್ನ ಮತ್ತು ಅವರ ಸಂಬಂಧದ ಬಗ್ಗೆ ರೆಕ್ಕೆ-ಪುಕ್ಕ ಕಟ್ಟಿಕೊಂಡ ಸುದ್ದಿಗಳು ಮಾಧ್ಯಮಗಳಲ್ಲಿ ದಿನನಿತ್ಯ ಹರಿದಾಡಿದವು. ಪ್ರತೀ ನಿತ್ಯ ಇದನ್ನೆಲ್ಲಾ ನೋಡಿ ನೋಡಿ ನಾನು ರೋಸಿ ಹೋಗಿದ್ದೆ. ದಿನನಿತ್ಯ ಕಣ್ಣೀರು ಸುರಿಸುತ್ತಿದ್ದೆ. ಇದನ್ನೆಲ್ಲಾ ನೋಡಿ ನನಗೆ ಬದುಕೇ ಸಾಕಾಗಿ ಹೋಗಿತ್ತು. ಜೀವಂತವಾಗಿ ಇರಲೇ ಬಾರದು ಎಂದು ಡಿಸೈಡ್ ಮಾಡಿದ್ದೆ, ಆತ್ಮಹತ್ಯೆಯೊಂದೇ ದಾರಿ ಎಂದು ತಿಳಿದು, ಆತ್ಮಹತ್ಯೆಗೆ ಯೋಚಿಸಿ ಯತ್ನಿಸಿದ್ದೆ . ಅಂದು ಕೂಡ ಅಮರ್ ಸಿಂಗ್ ನನ್ನ ಸಹಾಯಕ್ಕೆ ಬಂದ್ರು. ನನಗೆ ಬುದ್ಧಿವಾದ ಹೇಳಿ ಆತ್ಮಸ್ಥೈರ್ಯ ತುಂಬಿದ್ರು ಎಂದಿದ್ದಾರೆ. 2010 ರಲ್ಲಿ ಸಮಾಜವಾದಿ ಪಕ್ಷದಿಂದ ಅಮರ್ ಸಿಂಗ್ ಹಾಗೂ ಜಯಪ್ರದಾ ಅವರನ್ನು ಹೊರಹಾಕಲಾಯಿತು. ನಂತರ ಸಿಂಗ್ ಹಾಗೂ ಜಯಪ್ರದಾ ರಾಷ್ಟ್ರೀಯ ಲೋಕ ಮಂಚ್ಗೆ ಸೇರಿಕೊಂಡ್ರು. ಈ ವೇಳೆ ಇವರಿಬ್ಬರ ಬಗ್ಗೆ ಇಲ್ಲಸಲ್ಲದ ಪುಖಾರಗಳು ಕೇಳಿ ಬಂದ್ದಿದ್ದವು.
Comments