ರಾತ್ರೋ ರಾತ್ರಿ ಯಡಿಯೂರಪ್ಪರ ಮನೆಗೆ ದೌಡಾಯಿಸಿದ ಬಿಗ್'ಬಾಸ್ ಪ್ರಥಮ್..?!!!

ಒಳ್ಳೆ ಹುಡುಗ ಪ್ರಥಮ್ ಮಾಡೋದೆ ಒಂಥರಾ ಡಿಫರೆಂಟ್. ಏನೇ ಮಾಡಿದ್ರು , ಅದರಲ್ಲೊಂದು ಡಿಫರೆಂಟ್ ಸ್ಟೈಲ್ ಇರುತ್ತೆ, ಒಂದು ಸ್ಮೈಲ್ ಇರುತ್ತೆ. ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಹೊರ ಬಂದ ಮೇಲೆ ಪ್ರಥಮ್ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಮಾತಿನ ಮೋಡಿ ಮೂಲಕ ಅದೆಷ್ಟು ಜನರ ಹೃದಯ ಕದ್ದ ಪ್ರಥಮ್, ಒಳ್ಳೆ ಹುಡುಗ ಅಂತಾನೇ ಫೇಮಸ್. ಬಿಗ್ಬಾಸ್-4 ರಲ್ಲಿ ವಿನ್ನರ್ ಆದ ಬಳಿಕ ಈ ಬಾರಿ ಬಿಗ್ ಬಾಸ್ ನಲ್ಲೂ ಮನೆಯೊಳಗೆ ಎಂಟ್ರಿ ಕೊಟ್ಟು ನಗುವಿನ ಅಲೆಯಲ್ಲಿ ತೇಲಿಸಿದ ದೇವ್ರಂಥಾ ಮನುಷ್ಯ. ರಾಜಕಾರಣಿಗಳ ಭೇಟಿಗೂ, ನಟ ಪ್ರಥಮ್ ಗೂ ಏನಾದ್ರು ಲಿಂಕ್ ಇದ್ಯಾ ಅಂಥಾ ಯೋಚಿಸ್ತಿದ್ದೀರಾ.
ಅಂದಹಾಗೇ ಬಿಗ್ ಬಾಸ್ ಗೆ ಹೋಗೋ ಮುನ್ನ ಪ್ರಥಮ್ ರಾಜಕಾರಣಿಗಳಿಂದ ಬೈಟ್ ತೆಗೆದುಕೊಂಡು ಹೋಗಿದ್ದರು. ಹಾಗಲೇ ಹಾಗೇ ಈಗ ಕೇಳಬೇಕಾ…ಆದರೆ ಸದ್ಯ ಬಿಜೆಪಿ ಮುಖಂಡ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನೆಚ್ಚಿನ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿದ್ದರು.ಪ್ರಥಮ್ ದೇವ್ರಂಥಾ ಮನುಷ್ಯ ಮತ್ತು ಎಂಎಲ್ಎ ಚಿತ್ರಗಳನ್ನು ಈಗಾಗಲೇ ರಿಲೀಸ್ ಮಾಡಿದ್ದಾರೆ. ಸದ್ಯ ನಟ ಭಯಂಕರ ಎಂಬ ಹೆಸರಿನ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ . ಅದರ ಟೀಸರ್ ರಿಲೀಸ್ ಆಗುತ್ತಿದೆ.ಇದೇ ಟೀಸರ್ ನ ಬಿ.ಎಸ್.ಯಡಿಯೂರಪ್ಪ ರವರಿಗೆ ತೋರಿಸಲು ನಿನ್ನೆ ಬೆಂಗಳೂರಿನ ಡಾಲರ್ಸ್ ಕಾಲೋನಿ ಬಳಿ ಇರುವ ಧವಳಗಿರಿ ನಿವಾಸಕ್ಕೆ ಪ್ರಥಮ್ ಭೇಟಿಕೊಟ್ಟಿದ್ದರು.
'ನಟ ಭಯಂಕರ' ಚಿತ್ರದ ಟೀಸರ್ ವೀಕ್ಷಿಸಿದ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಪ್ರಥಮ್ ಗೆ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು.ಅಂದಹಾಗೆ ಪ್ರಥಮ್ ನಿರ್ದೇಶನ ಮಾಡುತ್ತಿರುವ 'ನಟ ಭಯಂಕರ' ಚಿತ್ರದಲ್ಲಿ ಸಾಯಿ ಕುಮಾರ್, ಶಂಕರ್ ಅಶ್ವಥ್, ಕುರಿ ಪ್ರತಾಪ್, ಸುಷ್ಮಿತ ಜೋಷಿ, ನಿಹಾರಿಕಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅಂದಹಾಗೇ ಪ್ರಥಮ್ ಅವರ ಭೇಟಿ ಹಿಂದೆ ಬೇರೆ ಏನಾದ್ರು ಉದ್ದೇಶ ಇದ್ಯಾ ಅಂತಾ ಯೋಚಿಸಿದ್ರೆ ….ಸದ್ಯಕ್ಕಂತೂ ತಿಳಿಯುತ್ತಿಲ್ಲ. ಸಾರ್ವಜನಿಕ ವಲಯದ ಅಭಿಪ್ರಾಯಗಳ ಪ್ರಕಾರ ಮುಂದೆ ಪ್ರಥಮ್ ರಾಜಕೀಯ ಪ್ರವೇಶ ಮಾಡುವುದು ಖಚಿತ ಎಂಬ ಮಾಹಿತಿಯನ್ನು ಹೊರ ಹಾಕುತ್ತಿವೆ.
Comments