ಅತ್ತ ಅಗ್ನಿಸಾಕ್ಷಿ ಸಿದ್ದಾರ್ಥ್ ಗೆ ಮದುವೆ ಫಿಕ್ಸ್ ಆಗುತ್ತಿದ್ದಂತೇ ಇತ್ತ ಸನ್ನಿಧಿಗೂ ಕಂಕಣ ಭಾಗ್ಯ....?!!!

02 Feb 2019 11:35 AM | Entertainment
6421 Report

ಕಿರುತೆರೆಯ ಮೋಸ್ಟ್ ಫೇವರೀಟ್ ಹ್ಯಾಂಡ್ಸಮ್ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯಗೆ ಮದುವೆ ಫಿಕ್ಸ್ ಆಗಿದೆ. ಈಗಾಗಲೇ ಮನೆಯವರ ಒಪ್ಪಿಗೆ ಮೇರೆಗೆ ಮನದಾಕೆಯ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಮಾತನಾಡಿದ್ದಾರೆ. ಫೆ.14 ಕ್ಕೆ ಸಾಫ್ಟವೇರ್ ಎಂಜನಿಯರ್ ಜೊತೆ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹಸೆಮಣೆ ಏರುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ವಿಜಯ್ ಸೂರ್ಯ ಬಗ್ಗೆ ಸಿಕ್ಕಾಪಟ್ಟೆ ಗಾಸಿಪ್ ಹರಿದಾಡಿತ್ತು. ಜನ ಮೆಚ್ಚಿದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಕ್ಯೂಟ್ ಕಪಲ್ ಎಂದು ಕರೆಸಿಕೊಳ್ಳುತ್ತಿದ್ದ ಸಿದ್ಧಾರ್ಥ ಅಲಿಯಾಸ್ ವಿಜಯ್ ಸೂರ್ಯ ಮತ್ತು ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ರೀಲ್ ಲೈಫ್ ನಲ್ಲಿ ಗಂಡ ಹೆಂಡತಿ ಆಗಿದ್ದಾರೆ. ರಿಯಲ್ ಲೈಫ್ ನಲ್ಲೂ ಇವರಿಬ್ಬರು ಮದುವೆಯಾಗ್ತಿದ್ದಾರೆ. ಅವರಿಬ್ಬರ ನಡುವೆ ಲವ್, ಕುಚ್ ಕುಚ್ ನಡೀತಿದೆ ಎಂಬೆಲ್ಲಾ ಸುದ್ದಿಗಳು ಸೋಶಿಯಲ್ ಮಿಡಿಯಾದಲ್ಲಿ ರೆಕ್ಕೆಪುಕ್ಕ ಕಟ್ಟಿಕೊಂಡು ಹರಿದಾಡಿದವು.

ಆದರೆ ಅತ್ತ ವಿಜಯ್ ಸೂರ್ಯಗೆ ಚೈತ್ರ ಎಂಬಾಕೆಯೊಂದಿಗೆಮ್ಯಾರೇಜ್ ಫಿಕ್ಸ್ ಆಗುತ್ತಿದ್ದಂತೇ ವೈಷ್ಣವಿಗೂ ಕಂಕಣಭಾಗ್ಯ ಕೂಡಿ ಬಂದಿದ್ಯಂತೆ…?!ಕೆಲ ಟಿವಿ ಶೋ, ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸನ್ನಿಧಿ ಮತ್ತು ಸಿದ್ಧಾರ್ಥ ಲವ್ , ಮದುವೆ ವಿಚಾರದ ಬಗ್ಗೆ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿತ್ತು. ಆದರೆ ಈ ಬಗ್ಗೆ ಇವರಿಬ್ಬರು ಮಾಧ್ಯಮಗಳ ಮುಂದೆ ಕ್ಲಿಯರ್ ಮಾಡಿದ್ದರು. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೆ. ಸೀರಿಯಲ್’ನಲ್ಲಿ ನಾವಿಬ್ಬರ ಕೋ ಅಪರೇಟಿವ್ ನಿಂದ ಸೀರಿಯಲ್ ನಲ್ಲಿ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಬಂದಿದೆ. ಅಷ್ಟೆ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್, ನಮ್ಮ ನಡುವೆ ಪ್ರೀತಿ-ಪ್ರೇಮ ಅಂತದ್ದೇನು ಇಲ್ಲ. ಸುಖಾಸುಮ್ಮನೇ ಗಾಸಿಪ್ ಹಬ್ಬಿಸಬೇಡಿ.ನಮ್ಮಿಬ್ಬರಿಗೆ ನಮ್ಮದೇ ಆದ ವೈಯಕ್ತಿಕ ಲೈಫ್ ಇದೆ ಎಂದು ಕ್ಲಿಯರ್ ಮಾಡಿದ್ದಾರೆ. ಇತ್ತ ವಿಜಯ್ ಸೂರ್ಯ ಗೆ ಮದುವೆ ಫಿಕ್ಸ್ ಆಗುತ್ತಿದ್ದಂತೇ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕೂಡ ಮದುವೆಯಾಗ್ತಿದ್ದಾರಂತೆ. ಹುಡುಗ ಕೂಡ ಫಿಕ್ಸ್ ಆಗಿದ್ದಾನಂತೆ. ಅಂದಹಾಗೇ ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟಾಕ್ ಆಗ್ತಿದೆ. ಆದರೆ ಈ ಬಗ್ಗೆ ವೈಷ್ಣವಿ ಮದುವೆ ಬಗ್ಗೆ ಗಾಸಿಪ್ ಅಥವಾ ನಿಜವೋ ಕಾದು ನೋಡಬೇಕಿದೆ.

Edited By

Kavya shree

Reported By

Kavya shree

Comments