ಭಿಕ್ಷುಕಿ ಅಂತಾ ಹಣ ಕೊಟ್ಟು ನಂತರ ಆಕೆ ಯಾರೆಂದು ತಿಳಿದು ಶಾಕ್ ಆದ ಸ್ಟಾರ್ ನಟ…!!!

ಇದೊಂದು ಮನ ಕಲಕುವ ಕಥೆ, ಸ್ಟೋರಿ ಕೇಳಿದ್ರೆ ಕಣ್ಣೀರು ಹಾಕ್ತೀರಾ..ಹೃದಯವನ್ನು ಹಿಂಡುವ ಘಟನೆ ಇದು.ಅದು ಟಾಪ್ ಸ್ಟಾರ್ ನಟನ ಶೂಟಿಂಗ್, ನಡೆಯುತ್ತಿತ್ತು. ಅಲ್ಲಿಗೆ ಬಂದ ವೃದ್ಧ ಮಹಿಳೆ ಭಿಕ್ಷೆ ಬೇಡುತ್ತಿರುತ್ತಾಳೆ. ತನ್ನ ಕೈ ಚಾಚಿ, ಕಣ್ಣೀರು ಹಾಕುತ್ತಾ ಆ ಸ್ಟಾರ್ ನಟನ ಮುಂದೆ ನಿಂತಿದ್ದಾಳೆ. ಅಂದಹಾಗೇ ಇದು ಯಾವುದೋ ಸಿನಿಮಾ ಶೂಟಿಂಗ್ ಅಲ್ಲಾ, ಬದಲು ದಕ್ಷಿಣ ಭಾರತದ ಟಾಪ್ ಸ್ಟಾರ್ ನಟ ವಿಜಯ್ ಸೇತುಪತಿ ಅವರ ಚಿತ್ರೀಕರಣ ಸಂದರ್ಭದಲ್ಲಿ ನಡೆದ ನೈಜ ಘಟನೆ. ಆ ವೃದ್ಧ ಮಹಿಳೆ ಯಾರೆಂದು ತಿಳಿದ ನಂತರ ಖುದ್ದು ಸ್ಟಾರ್ ನಟ ವಿಜಯ್ ಸೇತುಪತಿಯೇ ಬೆಚ್ಚಿ ಬಿದ್ದರಂತೆ.
ಅಂದಹಾಗೇ ವಿಜಯ್ ಸೇತುಪತಿ ಸಹಾಯಕ್ಕೆ ಆಗುವ ದೊಡ್ಡ ಗುಣ ಗುಣದ ವ್ಯಕ್ತಿ ಅಂತಾ ಎಲ್ಲರಿಗೂ ಗೊತ್ತು. ಅವರು ಹೋದ ಕಡೆಯೆಲ್ಲಾ ತಮ್ಮ ಕೈಲಾದ ನೆರವು ಮಾಡುವ ವ್ಯಕ್ತಿ ಎಂಬ ಮಾತಿದೆ. ಅಂದಹಾಗೇ, ತನ್ನ ಮುಂದೆ ಕೈ ಚಾಚಿದವರಿಗೆ ಬರಿಗೈಯಲ್ಲಿ ಕಳಿಸುವುದಿಲ್ಲ ಈ ನಟ.. ಆದ್ರೆ ಈ ಘಟನೆ ಎಲ್ಲದಕ್ಕಿಂತ ಭಿನ್ನ. ವಿಜಯ್ ಸೇತುಪತಿ ನಟಿಸುತ್ತಿರುವ ಮಾಮನೀಥನ್ ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆಯುತ್ತಿತ್ತು. ಶೂಟಿಂಗ್ ಸ್ಪಾಟ್ ಗೆ ಬಂದ ಒಬ್ಬ ವೃದ್ಧ ಮಹಿಳೆ, ನನಗೆ ಆರೋಗ್ಯ ಚೆನ್ನಾಗಿಲ್ಲ, ಔಷಧಿ ಕೊಂಡುಕೊಳ್ಳಲು ಹಣ ಇಲ್ಲ ಎಂದಾಗ ವಿಜಯ್ ಸೇತುಪತಿ ತಕ್ಷಣವೇ ಆಕೆಯ ಮಾತಿಗೆ ರಿಯಾಕ್ಟ್ ಮಾಡಿ. ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡರು. ಆಕೆಯ ಸ್ಥಿತಿಯನ್ನು ಕಂಡು ಮನ ಕದಲಿತು.
ತಕ್ಷಣ ತನ್ನ ಕೈಗೆ ಸಿಕ್ಕಷ್ಟು ಹಣವನ್ನು ಆ ವೃದ್ಧ ಮಹಿಳೆಯ ಕೈಯಲ್ಲಿಟ್ಟರು ವಿಜಯ್ ಸೇತುಪತಿ, ಆದ್ರೆ ಹಣ ತೆಗೆದುಕೊಂಡ ಮಹಿಳೆ ಕೆಲವೇ ನಿಮಿಷಗಳಲ್ಲಿ ಅಲ್ಲೇ ಕುಸಿದು ಬಿದ್ದಳು. ಗಾಬರಿಯಾದ ನಟ, ಕೆಲವರ ಸಹಾಯದಿಂದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನಪ್ಪಿದ್ದಳು. ಸಾವಿನ ನಂತರ ಆಕೆ ಯಾರೆಂದು ತಿಳಿದ ನಂತರ ಸ್ಟಾರ್ ನಟ ಕಣ್ಣೀರು ಹಾಕಿದರು.ಅಂದ ಹಾಗೇ ಭಿಕ್ಷುಕಿಯಾಗಿ ವಿಜಯ್ ಸೇತುಪತಿ ಬಳಿ ನಿಂತ ವೃದ್ಧ ಮಹಿಳೆ ಯಾರು ಗೊತ್ತಾ..?, ಆ ವೃದ್ಧ ಮಹಿಳೆ ಒಂದು ಕಾಲದಲ್ಲಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ನಟಿ ಎಂದು ಆಕೆಯ ಹೆಸರು ಕವಲಂ ಅಚ್ಚಮ್ಮ. ಸುಮಾರು ಮಲಯಾಳಂ ಚಿತ್ರಗಳಲ್ಲಿ ಸಹ ನಟಿಯಾಗಿ ಈ ಕವಲಂ ಅಚ್ಚಮ್ಮ ನಟಿಸಿದ್ದರು. ಈ ವಿಚಾರ ಕೇಳಿ ವಿಜಯ್ ಸೇತುಪತಿ ಗಾಬರಿಯಾಗಿದ್ದಾರೆ. ಕಣ್ಣೀರು ಹಾಕಿದ್ದಾರೆ.
Comments