ರಾಜಕೀಯಕ್ಕೆ ಕಾಲಿಡಲಿದ್ದರಾ ಸ್ಯಾಂಡಲ್’ವುಡ್’ನ ಡಿ-ಬಾಸ್..!?

01 Feb 2019 2:05 PM | Entertainment
1124 Report

ಸ್ಯಾಂಡಲ್ವುಡ್’ನಲ್ಲಿ ಡಿ ಬಾಸ್ ಸಿನಿಮಾಗಳು ಅಂದರೆ ಸಾಕು ಫಸ್ಟ್ ಡೇ.. ಫಸ್ಟ್ ಷೋ …ನೋಡುವ ಸಿನಿರಸಿಕರು ಅದೆಷ್ಟು ಜನ ಇದ್ದಾರೋ ಗೊತ್ತಿಲ್ಲ..! ಚಾಲೆಂಜಿಂಗ್‍ಸ್ಟಾರ್ ದರ್ಶನ್ ಸಿನಿಮಾಗಳ ವಿಚಾರದಲ್ಲಿ ಬಂದ್ರೆ ಪಾತ್ರಗಳ ಆಯ್ಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡ್ತಾರೆ. ಯಾವಾಗಲೂ ಕೂಡ ಹೊಸತನವನ್ನು ಆಯ್ಕೆ ಮಾಡುವ ದರ್ಶನ್  ಇದೀಗ ಮತ್ತೊಂದು ಹೊಸಹೆಜ್ಜೆಯನ್ನು ಇಡುತ್ತಿದ್ದಾರೆ.. ದರ್ಶನ್ ಒಂದು ಹೆಜ್ಜೆ  ಮುಂದೆ ಹೋಗಿದ್ದಾರೆ.. 'ಯಜಮಾನ', 'ಒಡೆಯ'ದಂತಹ ಕೌಟುಂಬಿಕ ಕಥೆಗಳು ಬಿಡುಗಡೆಗೆ ಸಿದ್ದವಾಗಿವೆ... 'ಕುರುಕ್ಷೇತ್ರ'ದಂತಹ ಪೌರಾಣಿಕ ಸಿನಿಮಾ ಕೂಡ ತೆರೆಗೂ ಬರಲು ಸಿದ್ದವಾಗಿದೆ. 'ಕುರುಕ್ಷೇತ್ರ'ದಲ್ಲಿ ದುರ್ಯೋಧನನಾಗಿದ್ದ ದರ್ಶನ್’ಗೆ ರಾಜಕೀಯದ ಕುರುಕ್ಷೇತ್ರದ ಪಾತ್ರ ಸಿಕ್ಕಿದೆಯಂತೆ..

ದರ್ಶನ್ ಅವರ ಮುಂದಿನ ಸಿನಿಮಾ ಪಾಶುಪತಾಸ್ತ್ರ... ಇದೊಂದು ರಾಜಕೀಯ ಕಥಾ ಹಂದರವನ್ನು ಹೊಂದಿರುವ ಕಥೆ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ. 'ಪಾಶುಪತಾಸ್ತ್ರ' ಒಂದು ಪವರ್​ಫುಲ್ ಸಿನಿಮಾವಂತೆ. ಪುರಾಣದಲ್ಲಿ ಪ್ರಾಣಿ ಪಕ್ಷಿಗಳ ಉಪಟಳ ಅತಿಯಾಗಿದ್ದರಿಂದ ಪಶುಗಳನ್ನು ನಿಯಂತ್ರಿಸುವ ಪಶುಪತಿ ಅಸ್ತ್ರವಾದ ಪಾಶುಪತಾಸ್ತ್ರವನ್ನು ಮಹಾದೇವ ಅರ್ಜುನನಿಗೆ ನೀಡಿರುವ ಕಥೆ. ಈಗ ಆ ಪಾಶುಪತಾಸ್ತ್ರವನ್ನು ಹಿಡಿಯುವ ಜವಬ್ದಾರಿಯನ್ನು ಚಾಲೆಂಜಿಂಗ್‍ಸ್ಟಾರ್ ವಹಿಸಿಕೊಂಡಿರುತ್ತದೆ.  ರಾಜಕೀಯದಲ್ಲಿರೋ ದುಷ್ಟ ಮೃಗಗಳನ್ನು ಸಂಹಸರಿಸೋಕೆ ದಾಸ ಈ ಅಸ್ತ್ರವನ್ನು ಹಿಡಿದು ಅಬ್ಬರಿಸಲಿದ್ದಾರಂತೆ. ದರ್ಶನ್ ನಿಜ ಜೀವನದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೋ ಬಿಡ್ತಾರೋ ಗೊತ್ತಿಲ್ಲ, ಆದರೆ ಸಿನಿಮಾದ ಮೂಲಕ ರಾಜಕೀಯ ಪಾತ್ರದ ಬಣ್ಣ ಹಚ್ಚಲಿದ್ದಾರೆ..

Edited By

Manjula M

Reported By

Manjula M

Comments