ಹೀರೋಹಿನ್’ಗಳ ಬಗ್ಗೆ ಶಾಕಿಂಗ್ ಸ್ಟೇಟ್’ಮೆಂಟ್ ಕೊಟ್ಟ ಖ್ಯಾತ ಗಾಯಕ ಎಸ್ ಪಿ ಬಿ…?!

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ….ಇವರು ಬಹುಭಾಷಾ ಗಾಯಕ ಅನ್ನೋದು ಎಲ್ಲರಿಗೂ ಕೂಡ ತಿಳಿದೆಬಂದಿದೆ.. ಅವರ ಧ್ವನಿಯಲ್ಲಿ ಅದೆಷ್ಟು ಸಾವಿರ ಹಾಡುಗಳು ಹೊರಬಂದಿವೆಯೋ ಗೊತ್ತಿಲ್ಲ.. ಅವರ ಹಾಡಿಗೆ ತಲೆದೂಗದವರೆ ಇಲ್ಲ… ಇದೀಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಿನಿಮಾ ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿ ಮಾಡಿದೆ ಎನ್ನಲಾಗಿದೆ..
ಎಸ್…ತೆಲುಗು ಸಿನಿಮಾ ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಎಸ್ ಪಿ ಬಿ ಅವರು ಈಗಿನ ನಟಿಯರ ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.. ಈಗಿನ ನಟಿಯರಿಗೆ ಸಿನಿಮಾ ಕಾರ್ಯಕ್ರಮಗಳಲ್ಲಿ ಹೇಗಿರುವ ಬಟ್ಟೆ ಹಾಕಿಕೊಳ್ಳಬೇಕೆಂದೇ ಗೊತ್ತಿಲ್ಲ ಎಂದು ಎಸ್ ಪಿ ಬಿ ಕಿಡಿ ಕಾರಿದ್ದಾಗಿ ಮಾಧ್ಯಮವೊಂದು ಸುದ್ದಿ ಮಾಡಿದೆ. 'ಈ ನಟಿಯರು ಕನಿಷ್ಠ ವಸ್ತ್ರ ಹಾಕಿಕೊಂಡು ಬಂದರೆ ಮಾತ್ರ ತಾವು ಹೀರೋಯಿನ್ ಗಳು, ತಮಗೆ ನಿರ್ದೇಶಕರು ಛಾನ್ಸ್ ಕೊಡ್ತಾರೆ ಎಂಬ ಭ್ರಮೆಯಲ್ಲಿದ್ದಾರೆ.. ಆದರೆ ಇವರಿಗೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೇಗೆ ಬರಬೇಕೆಂದೇ ಇನ್ನೂ ತಿಳಿದಿಲ್ಲ. ಎಂದು ಕಾಮೆಂಟ್ ಮಾಡಿದ್ದಾರೆಂದು ಮಾಧ್ಯಮವೊಂದು ಸುದ್ದಿ ಮಾಡಿದೆ ಎನ್ನಲಾಗಿದೆ.
Comments