ನಟ ವಜ್ರಮುನಿ ರೇಪ್ ಸೀನ್ ಮಾಡುವ ಮುಂಚೆ ಏನ್ ಮಾಡ್ತಿದ್ರಂತೆ ಗೊತ್ತಾ...?!!!

ಸ್ಯಾಂಡಲ್’ವುಡ್’ನ ಖ್ಯಾತ ಖಳನಾಯಕರ ಹೆಸರು ಹೇಳಿ ಎಂದ್ರೆ ಫಟ್ ಅಂತಾ ನೆನಪಾಗೋದು ಅಥವಾ ಮೊದಲ ಹೆಸರು ಮನಸ್ಸಿಗೆ ಹೊಳೆಯೋದು ವಜ್ರಮುನಿ ಹೆಸರು. ನಟ ವಜ್ರಮುನಿ ಅವರು ಪಾತ್ರಕ್ಕೆ ಬಂದರೆ ಎಂದರೆ ಎಂಥವರ ಎದೆಯು ಕ್ಷಣ ಝಲ್ಲೆನ್ನುತ್ತಿತ್ತಂತೆ. ಶೂಟಿಂಗ್ ಸ್ಪಾಟ್’ನಲ್ಲೇ ಕೆಲವರು ಒಮ್ಮೊಮ್ಮೆ ಅವರನ್ನೇ ನೋಡುತ್ತಾ ಹೆದರಿದ್ದೂ ಇದೆ ಎಂದು ಹೇಳುತ್ತಾರೆ. ಖಳ ನಟನ ಪಾತ್ರಕ್ಕೆ ಇವರೇ ಬೇಕು ಎಂದು ನಿರ್ದೇಶಕರು ಇವರ ಕಾಲ್ ಶೀಟ್ಗೆ ಕಾಯುತ್ತಿದ್ದಂತೇ. ಅದೇನೇ ಇರಲಿ ಅವರ ವಾಯ್ಸ್, ಬಾಡಿ ಲಾಂಗ್ವೇಜ್ ಗೆ ಬೇರೆ ಯಾರು ಸರಿ ಸಾಟಿಯಾಗಲಾರರು. ತೆರೆಮೇಲೆ ತೋರಿಸಿದಷ್ಟೂ ಭಯಾನಕವಾಗಿ ವಜ್ರಮುನಿ ರಿಯಲ್ ಲೈಫ್ ನಲ್ಲಿ ಇರಲಿಲ್ಲ. ಪಾತ್ರದಲ್ಲೇ ಅದೆಷ್ಟು ಕೋಪತಾಪ ಇಟ್ಟುಕೊಂಡಿದ್ದ ವಜ್ರಮುನಿ ರಿಯಲ್ ನಲ್ಲಿ ಸಿಕ್ಕಾಪಟ್ಟೆ ಸಾಫ್ಟ್.
ಟಿವಿ ಶೋ ವೊವೊಂದರ ಸಂದರ್ಶನದಲ್ಲಿ ಮಾತನಾಡುವಾಗ, ಟಿವಿಯಲ್ಲಿ ನನ್ನನ್ನು ನೋಡುತ್ತಿದ್ದ ಕೆಲವರು, ನಾನು ಎದುರು ಬಂದಾಗ ಬೆಚ್ಚಿಬಿದ್ದಿದ್ದೂ ಇದೆ. ಅಷ್ಟೇ ಅಲ್ಲದೇ ನನ್ನ ಮಕ್ಕಳೇ, ನಾನು ರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ಬಂದಾಗ, ನನ್ನನ್ನು ನೋಡಿ ಹೆದರಿ ಅಪ್ಪಳಿಸಿದ್ದೂ ಇದೆ. ನಾನು ಯಾಕೆ ಹೀಗೆ ಅಂತಾ ಕೇಳಿದ್ರೆ, ಟಿವಿಯಲ್ಲಿ ಅವರಿಗೆ ಹಿಂಸೆ ಕೊಡುತ್ತೀರಾ, ಅವರನ್ನು ಸಾಯಿಸ್ತೀರಾ,ನಿಮ್ಮನ್ನು ಕಂಡರೆ ಭಯ ಎಂದು ಹೇಳುತ್ತಿದ್ದರು. ನನಗೆ ನಗಬೇಕೋ, ಅಳಬೇಕೋ ಗೊತ್ತಾಗ್ತಿರಲಿಲ್ಲ ಎಂದು ಹೇಳುತ್ತಿದ್ದರು. ಮತ್ತೊಂದು ವಿಚಾರವನ್ನು ನಿಮಗೆ ಹೇಳಲೇ ಬೇಕು. ಅದೇನು ಎಂದರೆ ವಜ್ರಮುನಿ, ರೇಪ್ ಸೀನ್ ಬಂದಾಗ, ಪಾತ್ರ ಮಾಡುವ ಮುಂಚೆ ಅವರನ್ನು ಕೈ ಮುಗಿದು ಕೇಳುತ್ತಿದ್ದರಂತೆ. ಈ ಪಾತ್ರಕ್ಕಾಗಿ ನಾನು ಹೀಗೆ ಮಾಡುತ್ತಿದ್ದೇನೆ ವಿನಹ, ನನ್ನನ್ನು ಕ್ಷಮಿಸಿ ತಾಯಿ ಎಂದು. ತೆರೆಮೇಲೆ ಒಂದಷ್ಟು ವರ್ಷಗಳ ಕಾಲ ತಮ್ಮದೇ ಚಾಪು ಮೂಡಿಸಿ ಅಭಿಮಾನಿಗಳ ಮನಗೆದ್ದ ವಜ್ರಮುನಿ ಇಂದಿಗೂ ಅಮರ.
Comments