ಅರೆರೇ…! ಜಗ್ಗೇಶ್ ಪುತ್ರನ ಜೊತೆ ಬಿಗ್’ಬಾಸ್ ಸೋನು ಪಾಟೀಲ್…!!!
ಬಿಗ್’ಬಾಸ್ ರಿಯಾಲಿಟಿ ಶೋ ಮುಗಿದ ಮೇಲೆ ಯಾರಿಗೆ ಎಷ್ಟು ಲಕ್ ಕೊಟ್ಟಿದ್ಯೋ ಇಲ್ವೋ ಗೊತ್ತಿಲ್ಲ, ಆದರೆ ಸಿಕ್ಕಾಪಟ್ಟೆ ಟಾಕ್ ಆಗ್ತಾಯಿರೋ ಸ್ಪರ್ಧಿ ಮಾತ್ರ ಸೋನು ಪಾಟೀಲ್. ಗಾಯಕ ನವೀನ್ ಸಜ್ಜು ಜೊತೆ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಒಂದಷ್ಟು ಗಾಸಿಪ್ ಮಾಡಿಕೊಂಡಿದ್ದ ಸೋನು ಸದ್ಯ ನವರಸ ನಾಯಕ ಜಗ್ಗೇಶ್ ಪುತ್ರನ ಜೊತೆ ತಿರುಗಾಡುತ್ತಿದ್ದಾರೆ. ಅರೆರೇ…! ಇದೆನಪ್ಪಾ , ಸೋನು ಜಗ್ಗೇಶ್ ಪುತ್ರನ ಜೊತೆ ಪಾರ್ಕು, ಪಾನೀಪುರಿ ಅಂತಾ ಅಲೆದಾಡುತ್ತಿದ್ದಾರೆ ಬಿಗ್ ಬಾಸ್ ಮನೆಯಿಂದ ಹೊರೆಬಂದ ಮೇಲೆ ಸೋನು….. ಇದನ್ನೆಲ್ಲಾ ಕೇಳಿ ಸ್ವಲ್ಪ ಶಾಕ್ ಆಗಿದ್ದೀರಾ ಅಲ್ವಾ..
ಅಂದಹಾಗೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸೋನು ಪಾಟೀಲ್ ಅವರಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಈ ಮಧ್ಯೆ ಇದೆಂಥಾ ಸೋನು ವರಸೆನಪ್ಪಾ….ಅಂತಾ ಯೋಚಿಸ್ತಿದ್ದೀರಾ..? ಹೌದು ನಿಜ ಜಗ್ಗೇಶ್ ಪುತ್ರ ಯತೀರಾಜ್ ಜೊತೆ ಸೋನು ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ಭರ್ಜರಿಯಾಗಿ ಕಂಪ್ಲೀಟ್ ಆಗಿದ್ದು ಬಿಡುಗಡೆಗೂ ಸಿದ್ಧವಾಗಿದೆ. ಅಂದಹಾಗೇ ಸಿನಿಮಾದ ಹೆಸರು ಗೋಸಿ ಗ್ಯಾಂಗ್. ಚಿತ್ರದಲ್ಲಿ ಸೋನು, ಜಗ್ಗೇಶ್ ಪುತ್ರನಿಗೆ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದಲ್ಲಿನ ಹೀರೋ-ಹೀರೋಯಿನ್ ರ ಕೆಲ ಸ್ಟಿಲ್ ಫೋಟೋಗಳು ಹರಿದಾಡುತ್ತಿದ್ದು, ಈ ಪೋಟೋಗಳಿಗೆ ಬಹಳಷ್ಟು ಕಮೆಂಟ್'ಗಳು ಕೂಡ ಬರುತ್ತಿವೆ. ಸದ್ಯ ಫೆಬ್ರವರಿ 8ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ. ರಾಜು ದೇವಸಂದ್ರ ನಿರ್ದೇಶನದ ಚಿತ್ರಕ್ಕೆ ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ಯತಿರಾಜ್ ಜಗ್ಗೇಶ್, ಅಜಯ್ ಮತ್ತು ಸೋನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Comments