ಜೇಬಲ್ಲಿ ದುಡ್ಡಿಲ್ಲ ಅಂತಾ ಈ ಕೆಲಸಕ್ಕೆ ಬಂದೆ ಎಂದ ಕ್ರೇಜಿಸ್ಟಾರ್...!!!
ಕೆಲವರು ಬೆಳ್ಳಿ ಪರದೆ ಮೇಲೆ ಅವಕಾಶಗಳು ಇಲ್ಲದಿದ್ದಾಗ ಕಿರುತೆರೆಗೆ ಬಂದಿದ್ದಾರೆ. ಮತ್ತೆ ಕೆಲವರು ಕಿರುತೆರೆಯ ಧಾರವಾಹಿಯಲ್ಲಿನ ಪಾತ್ರವೊಂದಕ್ಕೆ ಇದೇ ಸ್ಟಾರ್ ಬೇಕೆಂದು ಅವರನ್ನೇ ಕರೆ ತಂದಿರುವುದನ್ನು ಕೂಡ ನೋಡಿದ್ದೇವೆ. ಆದರೆ ಇಲ್ಲೊಬ್ಬ ಸ್ಟಾರ್ ನಟ, ಅದೇ ನೇಮು ಫೇಮು ಉಳಿಸಿಕೊಂಡಿರುವ ಕಲಾವಿದ ದಿಢೀರ್ ಅಂತಾ ಟಿವಿ ಲೋಕಕ್ಕೆ ಬಂದಿದ್ದಾರೆ. ದುಡ್ಡಿಗಾಗಿ ನಾನು ಕಿರುತೆರೆಗೆ ಬಂದಿದ್ದೇನೆ. ಖರ್ಚಿಗಾಗಿ ನನಗೆ ಹಣ ಬೇಕಲ್ವ. ಅದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ.
ಇದರಿಂದ ಸಿನಿಮಾ ಕೆಲಸಗಳೇನು ನಿಲ್ಲಲ್ಲ. ಅದರ ಪಾಡಿಗೆ ಅದು ನಡೆಯುತ್ತೆ. ಹೀಗಂತಾ ಹೇಳಿದವರು ಬೇರೆ ಯಾರು ಅಲ್ಲಾ, ಒಂದಷ್ಟು ವರ್ಷಗಳ ಸಿನಿಮಾ ಲೋಕವನ್ನಾಳಿದ ಪ್ರೇಮಲೋಕ, ರಣಧೀರ ಅಂತಹ ಸಿನಿಮಾಗಳನ್ನು ಕೊಟ್ಟ ಕ್ರೇಜಿಸ್ಟಾರ್ ರವಿಚಂದ್ರನ್.ಈ ವಿಚಾರ ಕೇಳಿದ್ರೆ ನಿಮಗೆ ಶಾಕ್ ಆಗಬಹುದು ಅಲ್ವಾ. ಅದ್ಯಾಕೇ ರವಿಚಂದ್ರನ್ ಟಿವಿಗೆ ಬಂದ್ರು ಅಂತಾ. ಆದರೆ ರವಿಚಂದ್ರನ್ ಕಿರುತೆರೆಗೆ ಎಂಟ್ರಿ ಕೊಟ್ಟಿರೋದು ಧಾರವಾಹಿಯಲ್ಲಿ ನಟಿಸೋಕೆ ಅಲ್ಲಾ ಬದಲಿಗೆ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ. 'ನಾನು ಯಾವಾಗಲೂ ಸಿನಿಮಾ ಬಗ್ಗೆ ಯೋಚಿಸುತ್ತಿರುತ್ತೇನೆ. ಟಿವಿ ಕಾರ್ಯಕ್ರಮಗಳಿಂದ ನನ್ನ ಸಿನಿಮಾಕ್ಕೆ ಅಡ್ಡಿಯಾಗಲ್ಲ. ಜೇಬಿಗೂ, ಖರ್ಚಿಗೂ ದುಡ್ಡು ಬೇಕಲ್ಲಾ? ಹಾಗಾಗಿ ಇವು ನನಗೆ ಬದಲಾವಣೆ ಕೊಡುತ್ತೆ. ನಾನು ಎಲ್ಲೇ ಇದ್ದರೂ ಮಾಡಬೇಕಾದ್ದನ್ನು ಮಾಡುತ್ತಲೇ ಇರುತ್ತೇನೆ' ಎಂದು ಕಿರುತೆರೆಗೆ ಬರುತ್ತಿರುವ ಬಗ್ಗೆ ಸಣ್ಣಗೆ ನಕ್ಕು ಹೇಳುತ್ತಾರೆ ಕ್ರೇಜಿಸ್ಟಾರ್.
Comments