ಕಿರುತೆರೆಯ ಯುವ ನಟ ಆತ್ಮಹತ್ಯೆಗೆ ಶರಣು ..!

ಕಿರುತೆರೆ ಯುವ ನಟ ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ರಾಹುಲ್ ಮಹೇಶ್ ದೀಕ್ಷಿತ್ ಆತ್ಮಹತ್ಯೆಗೆ ಶರಣಾಗಿರುವ ಕಿರುತೆರೆ ನಟ ಆಗಿದ್ದಾರೆ. ರಾಹುಲ್ ಮಹೇಶ್ ದೀಕ್ಷಿತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ಎಂದು ದಾಖಲಿಸಿ ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ..ಮೃತ ದೀಕ್ಷಿತ್ ಪತ್ನಿ ರೂಪಾಲಿ ಬುಧವಾರ ಸುಮಾರು 5 ಗಂಟೆಗೆ ಎಚ್ಚರಗೊಂಡಿದ್ದು, ಆಗ ದೀಕ್ಷಿತ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ದೀಕ್ಷಿತ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪ್ರಿಯಾ ವಿಡಿಯೋಗಳನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇತ್ತ ಮೃತ ರಾಹುಲ್ ಅವರ ತಂದೆ ನನ್ನ ಮಗನ ಸಾವಿಗೆ ಪ್ರಿಯಾ ಕಾರಣ ಎಂದು ಆರೋಪಿಸಿದ್ದಾರೆ..
ದೀಕ್ಷಿತ್ ಪ್ರೆಂಡ್ಸ್ ಮತ್ತು ನಾವು ಪಾರ್ಟಿ ಮುಗಿಸಿ ಒಟ್ಟಿಗೆ ಮಲಗಿದ್ದೆವು. ನಾನು ದೀಕ್ಷಿತ್ ಒಂದು ರೂಮಿನಲ್ಲಿ ಮಲಗಿದ್ದೆವು. ನನಗೆ ಬೆಳಗ್ಗೆ 5 ಗಂಟೆಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಆಗ ದೀಕ್ಷಿತ್ ಸೀಲಿಂಗ್ ಫ್ಯಾನಿಗೆ ಬೆಡ್ ಶೀಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ತಕ್ಷಣ ಅವರನ್ನು ಕೊಕಿಲಬೆನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ ಅಷ್ಟರಲ್ಲಿಯೇ ದೀಕ್ಷಿತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ದೀಕ್ಷಿತ್ ಪತ್ನಿ ರೂಪಾಲಿ ಹೇಳಿದ್ದಾರೆ. ಮೃತ ದೀಕ್ಷಿತ್ ಮೂಲತಃ ಜೈಪುರ ನಿವಾಸಿಯಾಗಿದ್ದು, ಮೂರು ತಿಂಗಳ ಹಿಂದೆ ಮುಂಬೈಗೆ ಬಂದಿದ್ದರು. ಬಳಿಕ ದೀಕ್ಷಿತ್ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಚಿರಪರಿಚಿತರಾಗಿದ್ದಾರೆ..
ಕಳೆದ ವರ್ಷ ಅಂದರೆ ನವೆಂಬರ್ ತಿಂಗಳಲ್ಲಿ ರೂಪಾಲಿ ಅವರನ್ನು ಮದುವೆಯಾಗಿದ್ದರು. ಪೊಲೀಸರು ಮೃತ ದೀಕ್ಷಿತ್ ಅವರ ಬೆಡ್ ರೂಮಿನಲ್ಲಿ ಪರಿಶೀಲನೆ ನಡೆಸಿದಾಗ ಎರಡು ಪೇಜ್ ಪತ್ರ ಸಿಕ್ಕಿದೆ. ಅದರಲ್ಲಿ ತಮ್ಮ ಕುಡಿತದ ಅಭ್ಯಾಸದ ಬಗ್ಗೆ ಬರೆದಿದ್ದಾರೆ. ಸದ್ಯಕ್ಕೆ ಕೊಲೆ ಮತ್ತು ಆತ್ಮಹತ್ಯೆ ಸೇರಿದಂತೆ ಎಲ್ಲಾ ರೀತಿಯಲ್ಲೂ ತನಿಖೆ ಮಾಡುತ್ತಿದ್ದೇವೆ. ಈಗಾಗಲೇ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಕಮಿಷನರ್ ಡಾ. ಮನೋಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ..
Comments